ಬಸ್‌ಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ಬಸ್‌ಗಳಿಗಾಗಿ ಪ್ರಯಾಣಿಕರು ಗಂಟೆಗಟ್ಟಲೆ ಬಸ್‌ ನಿಲ್ದಾಣದಲ್ಲಿ ಕಾದು ಕುಳಿತಿರುವುದು ಕಂಡು ಬಂತು. ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾದು ಸುಸ್ತಾದ ಸಾಕಷ್ಟುಪ್ರಯಾಣಿಕರು ಅನಿವಾರ್ಯವಾಗಿ ಗೂಡ್ಸ್‌ ವಾಹನಗಳಲ್ಲಿ ಪ್ರಯಾಣಿಸುತ್ತಿರುವುದು ಅಲ್ಲಲ್ಲಿ ಕಂಡುಬಂದಿತು.

ಮುಂಡಗೋಡ(ಮೇ.04):  ಅಂಕೋಲಾ ತಾಲೂಕಿನ ಹಟ್ಟಿಕೇರಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರ ಸಮಾವೇಶಕ್ಕೆ ಜನರನ್ನು ಕರೆದೊಯ್ಯಲು ಬಸ್‌ಗಳನ್ನು ಕಾಯ್ದಿರಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ನಿಗದಿತ ಸಮಯಕ್ಕೆ ಬಸ್‌ ಇಲ್ಲದೆ ಪ್ರಯಾಣಿಕರು ತೀವ್ರ ಸಮಸ್ಯೆ ಎದುರಿಸಿದರು.

ಪಟ್ಟಣದ ಸೇರಿದಂತೆ ತಾಲೂಕಿನಿಂದ ಪ್ರತಿ ದಿನ ಸಾವಿರಾರು ಪ್ರಯಾಣಿಕರು ಹುಬ್ಬಳ್ಳಿ, ಶಿರಸಿ ಹಾಗೂ ದೂರದ ಊರಿಗೆ ಪ್ರಯಾಣಿಸಲು ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಅಲವಂಬಿಸಿದ್ದಾರೆ. ಆದರೆ ಬುಧವಾರ ಅಂಕೋಲಾದ ಹಟ್ಟಿಕೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಸಮಾವೇಶಕ್ಕೆ ಜನರನ್ನು ಕರೆತರಲು ಶಿರಸಿ, ಯಲ್ಲಾಪುರ ಹಾಗೂ ವಿವಿಧ ವಿಭಾಗಗಳಿಂದ ಬಸ್‌ಗಳನ್ನು ಕಾಯ್ದಿರಿಸಲಾಗಿತ್ತು. ಈ ಹಿನ್ನೆಲೆ ಬಸ್‌ಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ಬಸ್‌ಗಳಿಗಾಗಿ ಪ್ರಯಾಣಿಕರು ಗಂಟೆಗಟ್ಟಲೆ ಬಸ್‌ ನಿಲ್ದಾಣದಲ್ಲಿ ಕಾದು ಕುಳಿತಿರುವುದು ಕಂಡು ಬಂತು. ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾದು ಸುಸ್ತಾದ ಸಾಕಷ್ಟುಪ್ರಯಾಣಿಕರು ಅನಿವಾರ್ಯವಾಗಿ ಗೂಡ್ಸ್‌ ವಾಹನಗಳಲ್ಲಿ ಪ್ರಯಾಣಿಸುತ್ತಿರುವುದು ಅಲ್ಲಲ್ಲಿ ಕಂಡುಬಂದಿತು.

ಪದ್ಮಶ್ರೀಪುರಸ್ಕೃತ ಸುಕ್ರಿಬೊಮ್ಮಗೌಡ, ತುಳಸೀಗೌಡರ ಕಾಲಿಗೆ ಬಿದ್ದ ಪ್ರಧಾನಿ ಮೋದಿ

ಪ್ರಯಾಣಿಕರ ಆಕ್ರೋಶ:

ಕಾರ್ಯನಿಮಿತ್ತ ದೂರದ ಊರುಗಳಿಗೆ ತೆರಳಲು ಬೆಳಗ್ಗೆಯಿಂದಲೇ ಬಸ್‌ ನಿಲ್ದಾಣದಲ್ಲಿ ಕಾದು ಕುಳಿತರೂ ಒಂದು ಬಸ್‌ ಬರುತ್ತಿಲ್ಲ ಎಂದು ಪ್ರಯಾಣಿಕರು ಸಾರಿಗೆ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಚುನಾವಣೆ ಪ್ರಚಾರ ಸೇರಿದಂತೆ ರಾಜಕೀಯ ಕಾರ್ಯಕ್ರಮಗಳಿಗೆ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಕಾಯ್ದಿರಿಸುವುದರಿಂದ, ಸಂಚಾರಕ್ಕಾಗಿ ಪ್ರಯಾಣಿಕರು ಬಸ್‌ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ.