Namma Metro Passes ಅಧಿಕಾರಿಗಳ ದರ್ಬಾರ್, ಪ್ರಯಾಣಿಕರಿಂದ ಬೀಕಾಬಿಟ್ಟಿ ವಸೂಲಿ!

  • 1ಡೇ, 3 ಡೇ ಪಾಸ್ ಬೆನ್ನಲ್ಲೇ 5 ಡೇ ಪಾಸ್ ನಲ್ಲಿ ಮೆಟ್ರೋ ಲೂಟಿ!
  • ನಮ್ಮ ಮೆಟ್ರೋ ಅಧಿಕಾರಿಗಳನ್ನ ಹೇಳೋರಿಲ್ಲ ಕೇಳೋರಿಲ್ವಾ?
  • ಮನಸ್ಸೋ ಇಚ್ಚೆ ಪಾಸ್ ದರ ನಿಗದಿ ಮಾಡುತ್ತಿದ್ದಾರೆ BMRCL ಅಧಿಕಾರಿಗಳು
Passenger Unhappy about Namma Metro introduced day pass gow

ವರದಿ: ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು(ಮೇ 24): ಬಿಎಂಟಿಸಿ (BMTC) ಕೆಎಸ್ಸಾರ್ಟಿಸಿ (KSRTC) ಸಾರಿಗೆ ಸಂಸ್ಥೆಗಳಿಗೆ ಒಂದರ ಮೇಲೊಂದರಂತೆ ಹೊಡೆತ ಬಿದ್ದು, ನಷ್ಟದಲ್ಲೆ ಮುಳುಗಿದೆ. ಅದ್ರೆ ಲಾಭದ ಟ್ರ್ಯಾಕ್‌ ನಲ್ಲಿದ್ದ  ನಮ್ಮ ಮೆಟ್ರೋ (Namma Metro) ಕೋವಿಡ್ 19 ಬಂದಾಗಿನಿಂದ ಮುಳುಗುವ ದೋಣಿಯಂತಾಗಿದೆ.  ಆ ನಷ್ಟದಿಂದ ಹೊರಬರಲು ನಮ್ಮ ಮೆಟ್ರೋ ಹರಸಾಹಸ ಪಡ್ತಿದೆ.   ಇದೀಗ ಕೊಂಚ  ಚೇತರಿಸಿಕೊಳ್ತಿದ್ರೂ ಕೂಡ ನಮ್ಮ ಮೆಟ್ರೋ ಅಧಿಕಾರಿಗಳಿಗೆ ಮಾತ್ರ ದುರಾಸೆ. ಇದಕ್ಕಾಗಿ  ದಿನಕ್ಕೊಂದರಂತೆ ಪಾಸ್ ಪರಿಚಯ ಮಾಡ್ತಿದ್ದು ಪ್ರಯಾಣಿಕರಿಂದ ಸುಲಿಗೆ ಮಾಡ್ತಿದೆ.

 ಒನ್ ಡೆ ಹಾಗೂ ತ್ರಿ ಡೇ ಪಾಸ್ ಬೆನ್ನಲ್ಲೇ ಇದೀಗ 5 ಡೇ ಪಾಸ್ ನಲ್ಲಿಯೂ ವಸೂಲಿ ಗೆ ಇಳಿದಿದ್ದಾರೆ BMRCL ಅಧಿಕಾರಿಗಳು. ನಮ್ಮ ಮೆಟ್ರೋ, ಇದು ಬೆಂಗಳೂರಿನ  ಟ್ರಾಫಿಕ್ ಸಮಸ್ಯೆ, ಮಾಲಿನ್ಯ ಸಮಸ್ಯೆ ಸೇರಿ ಹಲವು ಸಮಸ್ಯೆಗಳಿಗೆ ಟಾನಿಕ್‌ ನಂತೆ ಬಂದ ಟ್ರಾನ್ಸ್ ಪೋರ್ಟ್ ಸಿಸ್ಟಂ ಹಳಿಗಿಳಿದ ಕೆಲವೇ ವರ್ಷಗಳಲ್ಲಿ ನಿರೀಕ್ಷೆಗೂ ಮೀರಿ ಜನಪ್ರೀಯತೆಯನ್ನು ಗಳಿಸುವಲ್ಲಿ ಸಫಲವಾಗಿತ್ತು . ದಿನಕ್ಕೆ 40 ಲಕ್ಷ ಪ್ರಯಾಣಿಕರಿದ್ರೂ ನಷ್ಟದ ಸವಾರಿ ಮಾಡ್ತಿದ್ದ ಬಿಎಂಟಿಸಿ ನಡುವೆ ನಮ್ಮ ಮೆಟ್ರೋ ಜಸ್ಟ್ 5 ಲಕ್ಷ ಪ್ರಯಾಣಿಕರನ್ನ ಇಟ್ಟುಕೊಂಡು ಲಾಭದಲ್ಲಿದ್ದುಕೊಂಡೆ ಸುದ್ದಿಯಲ್ಲಿತ್ತು.

CHIKKAMAGALURU DATTA PEETAದಲ್ಲಿ ನಿಲ್ಲದ ವಿವಾದ, ಭಜರಂಗದಳ ಎಂಟ್ರಿ

ಸಾರ್ವಜನಿಕ ಸಾರಿಗೆ ಅನ್ನೋದೆ ಲಾಸ್ ಅನ್ನೋ ಕಾಲದಲ್ಲಿ ಪಬ್ಲಿಕ್ ಟ್ರಾನ್ಸ್ಪೋರ್ಟ್ ನಲ್ಲೂ ಲಾಭ ಮಾಡ್ಬಹುದು ಅಂತ ತೋರಿಸಿಕೊಟ್ಟಿತ್ತು ನಮ್ಮ ಮೆಟ್ರೋ. ಆದ್ರೆ ಮಹಾಮಾರಿ ಕೋವಿಡ್  ಬಂದು ನಮ್ಮ ಮೆಟ್ರೋಗೆ ಚೇತರಿಸಿಕೊಳ್ಳಲಾರದಂತ ಆಘಾತ ನೀಡಿತ್ತು. ಹೀಗಾಗಿ ಕೊರೊನಾದಿಂದ ಆಗಿರುವ ನಷ್ಟವನ್ನ ಸರಿದೂಗಿಸಲು ಮೆಟ್ರೋ ದಿನಕ್ಕೊಂದು ಪಾಸ್ ಪರಿಚಯಿಸಿ ಪ್ರಯಾಣಿಕರಿಂದ ಬೇಕಾಬಿಟ್ಟಿ ವಸೂಲಿ ಮಾಡ್ತಿದೆ.

ಈಗಾಗಲೇ ಸಾರ್ವಜನಿಕರ ಅನೇಕ ವರ್ಷಗಳ ಬೇಡಿಕೆಗೆ ಸ್ವಂದಿಸಿ ಮೆಟ್ರೋ ನಿಗಮ ಏಪ್ರಿಲ್ 2 ರಿಂದ ಒನ್ ಡೇ ಹಾಗೂ 3 ದಿನದ ಪಾಸ್ ಗಳನ್ನ ಪರಿಚಯಿಸಿದೆ. ಒನ್ ಡೇ ಪಾಸ್ ಗೆ 200ರೂ, ಮೂರು ದಿನದ ಪಾಸ್ ಗೆ 400 ರೂ ನಿಗದಿ ಮಾಡಿದೆ. ಈಗಾಗಲೇ ಈ ದುಬಾರಿ ಪಾಸ್ ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಆದ್ರೂ ನಿಗಮ ಮತ್ತೀಗ 5 ದಿನದ ಪಾಸನ್ನು ಪರಿಚಯಿಸಿದೆ. ಇದರ ಬೆಲೆ ಬರೋಬ್ಬರಿ 550 ರೂ ಫಿಕ್ಸ್ ಮಾಡಲಾಗಿದೆ. 

ಬಿಎಂಟಿಸಿ ಒಂದು ವಾರದ ಪಾಸ್ 300 ಇರುವಾಗ ಮೆಟ್ರೋ 5 ದಿನದ ಪಾಸ್ 550 ರೂ ಯಾಕೆ ಅಂತ ಪ್ರಯಾಣಿಕರು ಪ್ರಶ್ನೆ ಮಾಡ್ತಿದ್ದಾರೆ. ಬಿಎಂಟಿಸಿ ಬಸ್ ಗಳಲ್ಲಿ ದಿನವಿಡೀ ನಗರದ ಮೂಲೆ ಮೂಲೆಯಲ್ಲಿ ಸಂಚರಿಸಲು ದಿನದ ಪಾಸ್  ಬೆಲೆ ₹70 ವಾರದ ಪಾಸ್ ಬೆಲೆ ₹300 ಇದೆ. ಆದರೆ ಮೆಟ್ರೋ ದುಬಾರಿ ಪಾಸ್ ಪರಿಚಯಿಸಿ ಸುಲಿಗೆ ಮಾಡ್ತಿದೆ.

Hubballi Crime ಗುಟ್ಕಾ ಕೊಡಿಸದ್ದಕ್ಕೆ ಸ್ನೇಹಿತನನ್ನೆ‌ ಮುಗಿಸಿದ ರೌಡಿ ಶೀಟರ್!

ಮೆಟ್ರೋ ರೈಲಿನಲ್ಲಿ ಒಂದು ಕಡೆಯಿಂದ ಮತ್ತೊಂದು ತುದಿಯ ನಿಲ್ದಾಣದ ಪ್ರಯಾಣಕ್ಕೆ ಗರಿಷ್ಠ 60 ರೂ ಇದೆ. ಹೀಗಾಗಿ ಹೋಗಿ ಬರಲು 120 ಮಾತ್ರ ಖರ್ಚಾಗುತ್ತದೆ ‌ಹೀಗಿರುವಾಗ ದುಬಾರಿ ಪಾಸ್ ದರ ನಿಗದಿ ಮಾಡಲಾಗಿದೆ. ನಮ್ಮ ಮೆಟ್ರೋ ನಿತ್ಯ ಹಸಿರು ಹಾಗೂ ನೇರಳೆ ಮಾರ್ಗ ಸೇರಿ ಒಟ್ಟು  55.7 ಕಿಲೋಮೀಟರ್‌ನಲ್ಲಿ ಸಂಚಾರ ನಡೆಸುತ್ತಿದೆ. 

ಭವಿಷ್ಯಕ್ಕೆ ನಮ್ಮ ಮೆಟ್ರೋ ಅತ್ಯುತ್ತಮ ಟ್ರಾನ್ಸ್ ಪೋರ್ಟ್ ಮೋಡ್ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಆದ್ರೆ ಲಾಭದ ಹಳಿಯಲ್ಲಿ ಸಾಗ್ತಿದ್ದ ನಮ್ಮ ಮೆಟ್ರೋ ಕೋವಿಡ್ನಿಂದಾಗಿ ನಷ್ಟದ ಹಾದಿ ಹಿಡಿದಿರೋದು ಆತಂಕದ ವಿಚಾರ. ಯಾಕಂದ್ರೆ ಬಿಎಂಟಿಸಿಯೂ ಹೀಗೆ ನಷ್ಟದ ಹಾದಿಯಲ್ಲಿ ಸಾಗಿ ಸದ್ಯ ಮುಳುಗೋ ಹಡಗಾಗಿದೆ. ಹೀಗಾಗಿ ಮೆಟ್ರೋ ನಷ್ಟದಿಂದ ಹೊರಬರಲು ದುಬಾರಿ ಪಾಸ್ ಅಸ್ತ್ರ ಪ್ರಯೋಗಿಸಿದ್ದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

Latest Videos
Follow Us:
Download App:
  • android
  • ios