ಅಂಕೋಲಾ (ಸೆ.16) : ಗಂಗಾವಳಿ ನದಿಗೆ ಲಾಂಚ್ ನೀಡಿ ವರ್ಷವೇ ಕಳೆದಿದೆ. ಆದರೆ ಪದೇ ಪದೇ ಒಂದಿಲ್ಲೊಂದು ಕಾರಣದಿಂದ ಬಾರ್ಜ್ ಹಾಳಾಗಿ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸುತ್ತಿದೆ.

ಭಾನುವಾರ ಗಂಗಾವಳಿಯಿಂದ ಮಂಜಗುಣಿ ಬರುವ ಲಾಂಚ್ ನದಿಯ ಮಧ್ಯೆ ಹಾಳಾಗಿ ನಿಂತಿದ್ದು 1 ಗಂಟೆಗಳ ಕಾಲ ಪ್ರಯಾಣಿಕರು ಬಾರ್ಜ್ ಮೇಲೆ ಉಳಿದು ಹೈರಾಣಾದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೋಣಿಗಳ ಸಹಾಯದಿಂದ ಪ್ರಯಾಣಿಕರನ್ನು ದಡಕ್ಕೆ ಸಾಗಿಸಲಾಯಿತು. ಇನ್ನೊಂದು ಬಾರ್ಜ್ ಸಹ ನದಿಯ ದಂಡೆಗೆ ಕೆಟ್ಟು ನಿಂತಿದೆ. ಬಾರ್ಜ್‌ನಲ್ಲಿದ್ದ ಪ್ರಯಾಣಿಕರು ದೋಣಿಯ ಸಹಾಯದಿಂದ ದಂಡೆಗೆ ಬಂದು ನಿಟ್ಟಿಸಿರು ಬಿಡುವಂತಾಯಿತು.

ಕಳೆದ ಕೆಲ ದಿನಗಳ ಹಿಂದಷ್ಟೇ ಶಿವಮೊಗ್ಗ ಜಿಲ್ಲೆಯ ಶರಾವತಿ ನದಿಯಲ್ಲಿಯೂ 500ಕ್ಕೂ ಹೆಚ್ಚು ಪ್ರಯಾಣಿಕರನ್ನು ಸಾಗಿಸುತ್ತಿದ್ದ ಎರಡು ಲಾಂಚುಗಳು ಡಿಕ್ಕಿಯಾಗಿದ್ದವು.