6 ರೂ ಚಿಲ್ಲರೆಗಾಗಿ ಕಂಡಕ್ಟರ್ ಗೆ ಈ ರೀತಿ ಬಡಿಯೋದಾ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Aug 2018, 4:13 PM IST
Passenger assaults conductor for 6 Rs Change
Highlights

ಕೇವಲ 6 ರೂ. ಗಾಗಿ ಬಡಿದಾಡಿಕೊಂಡರು! ಕಬ್ಬಿಣದ ರಾಡ್ ನಿಂದ ಕಂಡಕ್ಟರ್ ಮೇಲೆ ಹಲ್ಲೆ! ವಿಜಯಪುರದ ಇಂಡಿ ತಾಲೂಕಿನಲ್ಲಿ ಘಟನೆ! ಚಿಲ್ಲರೆಗಾಗಿ ಕಂಡಕ್ಟರ್ ಜೊತೆ ವಾಗ್ವಾದ

ವಿಜಯಪುರ(ಆ.10): ಕೇವಲ ೬ ರೂ ಚಿಲ್ಲರೆ ಹಣಕ್ಕಾಗಿ ಕಂಡಕ್ಟರ್ ಮೇಲೆ ಪ್ರಯಾಣಿಕನೋರ್ವ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ನಡೆದಿದೆ.

ಇಲ್ಲಿನ ತಾಂಬಾ ಗ್ರಾಮದಲ್ಲಿ ನಿನ್ನೆ ಸುಲೇಮಾನ್ ಎಂಬ ಪ್ರಯಾಣಿಕ ಬಸ್ ನಲ್ಲಿ ಪ್ರಯಾಣಿಸುವಾಗ ಕಂಡಕ್ಟರ್ ಇನ್ನೂಸಾಬ್ ಉಸ್ಮಾನ್ ಸಾಬ್ ಬಡದಾಳ ಚಿಲ್ಲರೆ ಇರದ ಕಾರಣಕ್ಕೆ ಟಿಕೆಟ್ ಹಿಂದೆ ೬ ರೂ ಬರೆದುಕೊಟ್ಟಿದ್ದರು. ಆದರೆ ಬಸ್ ಗ್ರಾಮಕ್ಕೆ ಬಂದರೂ ಕಂಡಕ್ಟರ್ ಚಿಲ್ಲರೆ ವಾಪಸ್ ಕೊಡದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಜಗಳವಾಗಿದೆ.

ಕೊನೆಯಲ್ಲಿ ವಾಯವ್ಯ ಸಾರಿಗೆ ಕಚೇರಿವರೆಗೆ ತೆರಳಿ ಸುಲೇಮಾನ್ ೬ ರೂ ಮರಳಿ ಪಡೆದಿದ್ದರು. ಆದರೆ ಇಷ್ಟಕ್ಕೆ ತೃಪ್ತರಾಗದ ಸುಲೇಮಾನ್ ಇಂದು ಬಸ್ ತಾಂಬಾ ಗ್ರಾಮಕ್ಕೆ ಬಂದಾಗ ಇನ್ನೂಸಾಬ್ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಭಾರೀ ರಕ್ತಸ್ರಾವವಾಗಿದ್ದು, ಇನ್ನೂಸಾಬ್ ಅವರನ್ನು ಇಂಡಿ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.

ಸದ್ಯ ಸುಲೇಮಾನ್ ವಿರುದ್ಧ ಇಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

loader