ಚಾಮರಾಜನಗರ: ಸಾವಿನಲ್ಲೂ ಸಾರ್ಥಕತೆ, ಮಗನ ಅಂಗಾಂಗ ದಾನ ಮಾಡಿದ ತಂದೆ-ತಾಯಿ

ಮಗನನ್ನು ಕಳೆದುಕೊಂಡರು ಮತ್ತೊಬ್ಬರ ಜೀವ ಉಳಿಸಲು ಮುಂದಾದ ಹೆತ್ತವರು

Parents Who Donated Their Son Organs in Chamarajanagara grg

ವರದಿ - ಪುಟ್ಟರಾಜು. ಆರ್. ಸಿ., ಏಷ್ಯಾನೆಟ್  ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ(ಆ.07):  ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ, ತಟ್ಟದೇ ಹಾಕಿದರೆ ಮೇಲು ಗೊಬ್ಬರವಾದೆ. ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರಿ ಗೋವು ನಾನು".. ಎನ್ನುವ ಕವಿವಾಣಿ ಮನುಷ್ಯ ಪ್ರಯೋಜನಕ್ಕೂ ಬಾರದವ ಎನ್ನುತ್ತಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮನುಷ್ಯನ  ಅಂಗಾಂಗಗಳನ್ನು ದಾನ ಮಾಡಿ ಇತರರ ಜೀವ ಉಳಿಸುವ ಕೆಲಸಗಳು ನಡೆಯುತ್ತಿವೆ. ಸಾಯುತ್ತಿರುವ ಮನುಷ್ಯ ಇತರರ ಪ್ರಾಣ ಉಳಿಸಬಲ್ಲ. ಅಂತಹುದ್ದೆ ಒಂದು ಪವಿತ್ರ ಕೆಲಸವನ್ನು ಚಾಮರಾಜನಗರದ ಕುಟುಂಬವೊಂದು ಮಾಡಿದೆ. 

ಮಗನ ಸಾವಿನ ದುಃಖದ  ನಡುವೆಯು ಆತನ ಅಂಗಾಂಗಗಳನ್ನು  ಅಂಗಾಂಗಳನ್ನು ದಾನ ಮಾಡಿ ಐವರ ಪ್ರಾಣ ಉಳಿಸುವ ಮೂಲಕ ಕುಟುಂಬವೊಂದ ಸಾರ್ಥಕತೆ ಮೆರೆದಿದೆ. ಹೌದು ಅಪಘಾತವೊಂದರಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯವಾಗಿದ್ದ  ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೋಕು ಚಿಲಕವಾಡಿ ಗ್ರಾಮದ ರಾಘವ ಎಂಬ ಮೂವತ್ತನಾಲ್ಕು ವರ್ಷದ ವ್ಯಕ್ತಿಯ ಯಕೃತ್ತು, ಎರಡು ಮೂತ್ರಪಿಂಡ, ಹೃದಯಕವಾಟುಗಳು ಹಾಗು ಕಾರ್ನಿಯಾದಿಂದ    ಐವರಿಗೆ ಜೀವದಾನ ದೊರೆತಿದೆ.

ನಮ್ಮದು ಪಾಪರ್‌ ಸರ್ಕಾರವಲ್ಲ ಸೂಪರ್‌ ಸರ್ಕಾರ: ಸಚಿವ ಅಶೋಕ್‌

ಚಾಮರಾಜನಗರ ಜಿಲ್ಲೆ ಯಳಂದೂರಿನಲ್ಲಿ ಜುಲೈ 29 ರಂದು ಬೈಕ್ ನಲ್ಲಿ ತೆರಳುತ್ತಿದ್ದ ರಾಘವ ವರಿಗೆ ಮತ್ತೊಂದು ಬೈಕ್‍ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಮೈಸೂರಿನ ಡಿಆರ್ ಎಂ ಎಂಬ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಆದರೆ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಬದುಕುವ ಸಾಧ್ಯತೆ ಕ್ಷೀಣಿಸಿತ್ತು ತಮ್ಮ ಮಗನ ಶರೀರ ಮಣ್ಣಲ್ಲಿ ಮಣ್ಣಾಗಿ ವ್ಯರ್ಥವಾಗಿ  ಹೋಗುವ ಬದಲು ಅವಶ್ಯಕತೆ ಇರುವವರ ಪ್ರಾಣ ಉಳಿಸಲು  ನೆರವಾಗಲಿ ಎಂದು ಯೋಚಿಸಿದ ತಂದೆ ನೀಲಪ್ಪಸ್ವಾಮಿ ಕುಟುಂಬದವರೊಂದಿಗೆ ಚರ್ಚಿಸಿದರು ಮಗನ ಅಂಗಾಂಗ ದಾನ ಮಾಡಲು ನಿರ್ಧರಿಸಿದರು.

ಮೈಸೂರಿನ ಜೀವ ಸಾರ್ಥಕತೆ ಎಂಬ ಸ್ವಯಂ ಸೇವಾಸಂಸ್ಥೆಯನ್ನು ಸಂಪರ್ಕಿಸಿದ ಈ ಕುಟುಂಬದ ತಮ್ಮ ನಿರ್ಧಾರ ತಿಳಿಸಿತು ನಂತರ ಕುಟುಂಬ ಸದಸ್ಯರ ಒಪ್ಪಿಗೆ ಪಡೆದು   ರಾಘವ ಅವರ ಎರಡು ಮೂತ್ರಪಿಂಡ, ಒಂದು ಯಕೃತ್ತು, ಹೃದಯ ಕವಾಟುಗಳು ಮತ್ತು ಕಾರ್ನಿಯಾವನ್ನು ಬೇರ್ಪಡಿಸಲಾಯಿತು.  ಮೈಸೂರಿನ್ ಅಪೋಲೋ ಬಿಜಿಎಸ್ ಆಸ್ಪತ್ರೆ,  ಜೆ.ಎಸ್.ಎಸ್. ಆಸ್ಪತ್ರೆ,  ಬೆಂಗಳೂರಿನ ರಾಮಯ್ಯ ಅಸ್ಪತ್ರೆ, ಹಾಗು ಜಯದೇವ ಅಸ್ಪತ್ರೆಗಳಲ್ಲಿ ಅಗತ್ಯ ಇರುವ ಒಟ್ಟು ಐವರಿಗೆ ಈ ಅಂಗಾಂಗಳನ್ನು ಕಸಿ ಮಾಡಲಾಯಿತು.

ಮೃತ ರಾಘವ ಅವರಿಗೆ ಪತ್ನಿ ಹಾಗು ಎರಡು ವರ್ಷದ ಹೆಣ್ಣು ಮಗು ಇದೆ. ಏನೂ ಅರಿಯದ ಮಗು ನೋಡಿದರೆ ಎಂತಹವರಿಗು ಕರುಳು ಚುರುಕ್ ಎನ್ನದೆ ಇರದು ಒಟ್ಟಾರೆ ಈ ಕುಟುಂಬ ಮಗನ ಸಾವಿನ ದುಃಖದ ನಡುವೆಯು ಆತನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದು ಇತರರಿಗೆ ಮಾದರಿಯಾಗಿದೆ.
 

Latest Videos
Follow Us:
Download App:
  • android
  • ios