ಮಕ್ಕಳ ಭವಿಷ್ಯದ ಬೆಳವಣಿಗೆಗೆ ಪೋಷಕರು ಗಮನಿಸುವುದು ಅಗತ್ಯ
ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯದ ಬೆಳವಣಿಗೆಗೆ ಪೋಷಕರು ಗಮನಹರಿಸಬೇಕಾಗಿದೆ ಎಂದು ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ತಿಳಿಸಿದರು.
ಗುಬ್ಬಿ : ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯದ ಬೆಳವಣಿಗೆಗೆ ಪೋಷಕರು ಗಮನಹರಿಸಬೇಕಾಗಿದೆ ಎಂದು ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ತಿಳಿಸಿದರು.
ಕಡಬ ಹೋಬಳಿಯ ಬ್ಯಾಡಗೆರೆ ಗ್ರಾ.ಪಂ. ಯಲ್ಲಿ ನಡೆದ ಮಕ್ಕಳ ಗ್ರಾಮ ಸಭೆ ಮತ್ತು ಮಹಿಳಾ ಗ್ರಾಮ ಸಭೆ ಉದ್ಘಾಟಸಿ ಮಾತನಾಡಿದರು. ಮಕ್ಕಳ ಹಕ್ಕುಗಳನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ತಿಳಿಸಿದರು.
ಗ್ರಾ.ಪಂ.ಯಲ್ಲಿ ಮಹಿಳಾ ಮತ್ತು ಮಕ್ಕಳ ಕಾವಲು ಪಡೆ ಉಪಸಮಿತಿ ಇದ್ದು ಮಹಿಳೆಯರ ಸಮಸ್ಯೆ ಬಗೆಹರಿಸುವಲ್ಲಿ ಎಲ್ಲರೂ ಪರಿಣಾಮಕಾರಿ ಕೆಲಸ ಮಾಡಬೇಕಿದೆ ಎಂದರು.
ಸ್ಥಳೀಯ ಸರ್ಕಾರ ಗ್ರಾ.ಪಂ. ಗ್ರಾಮ ಸಭೆಗಳಿಗೆ ದೊಡ್ಡ ಶಕ್ತಿ ಇದ್ದು, ಇಲ್ಲಿ ತೆಗೆದುಕೊಳ್ಳುವ ನಿರ್ಣಯಗಳಿಗೆ ಯಾರು ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದರು.
ಇಒ ಪರಮೇಶ್ ಕುಮಾರ್ ಮಾತನಾಡಿ, ಮಕ್ಕಳು ದೇಶದ ಮುಂದಿನ ಪ್ರಜೆಯಾಗಿದ್ದು, ಮಕ್ಕಳಿಗೆ ಶಿಕ್ಷಣ ಮತ್ತು ಉತ್ತಮ ಆರೋಗ್ಯ ನೀಡುವಲ್ಲಿ ಗ್ರಾ.ಪಂ. ಕೆಲಸ ಮಾಡಬೇಕು ದೇಶ ಅಭಿವೃದ್ಧಿ ಪಥದತ್ತ ಸಾಗುತ್ತದೆ ಎಂದು ತಿಳಿಸಿದರು.
ಪಿಡಿಒ ಕಲಾ ಮಾತನಾಡಿ, ಬ್ಯಾಡಗೆರೆ ಗ್ರಾ.ಪಂ.ಅಡಿ 11 ಸರ್ಕಾರಿ ಶಾಲೆಗಳಿದ್ದು, 380 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಅವರೆಲ್ಲರಿಗೂ ಗ್ರಾ.ಪಂ.ನಿಂದ ಸಮವಸ್ತ್ರ, ಟ್ರಾಕ್ ಸೂಟ್ ವಿತರಿಸುತ್ತಿದ್ದು, ಇದರ ಸೌಲಭ್ಯ ಪಡೆದು ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ, ಗ್ರಾ.ಪಂ ಕೀರ್ತಿ ತರಬೇಕೆಂದು ಎಂದು ತಿಳಿಸಿದರು.
ಗ್ರಾ.ಪಂ ಸದಸ್ಯ ನಂದೀಶ್ ಮಾತನಾಡಿ, ಮಕ್ಕಳನ್ನು ಕಡ್ಡಾಯ ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಸರ್ಕಾರಿ ಶಾಲೆ ಉಳಿಸಿ ಬೆಳಸುವ ಕೆಲಸವಾಗಬೇಕು ಎಂದು ತಿಳಿಸಿದರು.
ಮಕ್ಕಳ ಕಲಿಕಾ ಸಾಮರ್ಥ್ಯ ಮತ್ತು ಸಾಧನೆ ಆಧರಿಸಿ ಗ್ರಾ.ಪಂ. ವ್ಯಾಪ್ತಿಯ ಶಾಲೆಗಳಿಗೆ ಪ್ರಥಮ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮೀ, ಉಪಾಧ್ಯಕ್ಷೆ, ಲತಾ, ಸದಸ್ಯರಾದ ವರದರಾಜ್, ಶಿವಕುಮಾರಸ್ವಾಮಿ, ಬ್ಯಾಟರಾಜು, ನಂದೀಶ್, ಧನಂಜಯ್, ಮಂಜುಳಾ, ರಾಜಣ್ಣ, ಜಮೀಲಾಬಾನು, ಪೌಜಿಯಾ, ಗೀತಾ, ಶರ್ತಾಜ್, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಗಂಗಾಧರ್, ಸಿಆರ್‌ಪಿ ರಾಮಚಂದ್ರ , ಗ್ರಾ.ಪಂ. ವ್ಯಾಪ್ತಿಯ ಶಾಲೆಯ ಮುಖ್ಯ ಶಿಕ್ಷಕರು ಸಹ ಶಿಕ್ಷಕರು, ಮಕ್ಕಳು ಹಾಜರಿದ್ದರು.