ಎಲ್ಲ ಕಡೆ ಸೆಕ್ಷನ್ 144 ಅಗತ್ಯವಿರಲಿಲ್ಲ ಎಂದ ಕಾಂಗ್ರೆಸ್ ಮುಖಂಡ
ರಾಜ್ಯದಲ್ಲಿ 144 ಸೆಕ್ಷನ್ ಹಾಕೋದು ಅಗತ್ಯವಿರಲಿಲ್ಲ. ಗಲಾಟೆಯಾಗುವಂತಹ ಪ್ರದೇಶದಲ್ಲಿ 144 ಸೆಕ್ಷನ್ ಹಾಕಬೇಕಿತ್ತು ವಿನಹಃ ಎಲ್ಲೆಡೆಯಲ್ಲ ಎಂದು ಕಾಂಗ್ರೆಸ್ ಮುಖಂಡ ವಿಥುನ್ ರೈ ಹೇಳಿದ್ದಾರೆ.
ಮಂಗಳೂರು(ಡಿ.20): ರಾಜ್ಯದಲ್ಲಿ 144 ಸೆಕ್ಷನ್ ಹಾಕೋದು ಅಗತ್ಯವಿರಲಿಲ್ಲ. ಗಲಾಟೆಯಾಗುವಂತಹ ಪ್ರದೇಶದಲ್ಲಿ 144 ಸೆಕ್ಷನ್ ಹಾಕಬೇಕಿತ್ತು ವಿನಹಃ ಎಲ್ಲೆಡೆಯಲ್ಲ ಎಂದು ಕಾಂಗ್ರೆಸ್ ಮುಖಂಡ ವಿಥುನ್ ರೈ ಹೇಳಿದ್ದಾರೆ.
ಮಂಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರಕಾರ ಇದಕೆಲ್ಲಾ ನೇರ ಹೊಣೆ. ಪ್ರತಿಭಟನೆ ಮಾಡೋದು ಜನರ ಹಕ್ಕು. ರಾಜ್ಯದಲ್ಲಿ 144ಸೆಕ್ಷನ್ ಹಾಕಿದ್ದರಿಂದಲೇ ಗಲಾಟೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಮಂಗಳೂರಲ್ಲಿ ಎಲ್ಲ ಪೆಟ್ರೋಲ್ ಬಂಕ್ ಬಂದ್..!
ಇಬ‌್ಬರು ಬಲಿಯಾಗಲು ಕೂಡಾ ಸರಕಾರವೇ ಕಾರಣ. ಇಂತಹ ಘಟನೆಗಳು ಜಿಲ್ಲೆಯಲ್ಲಿ ಅಗತ್ಯವಿರಲಿಲ್ಲ. ಪೌರತ್ವ ಕಾಯ್ದೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲೂ ವಿರೋಧಿಸ್ತಿದ್ದಾರೆ ಎಂದು ಹೇಳಿದ್ದಾರೆ.
ಜನರು ಸಂಯಮದಿಂದಿದ್ದು, ಸರಕಾರ ಕೂಡಾ ಶಾಂತಿ ಕಾಪಾಡಬೇಕು. ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಈಗಾಗಲೇ ಮಾತುಕತೆ ನಡೆಯುತ್ತಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹಾಗೂ ಕಾಂಗ್ರೆಸ್ ಮುಖಂಡ ರೈ ಮಿಥುನ್ ಹೇಳಿಕೆ ನೀಡಿದ್ದಾರೆ.
ಮುಸ್ಲಿಮರೇ ಕಾಂಗ್ರೆಸ್ ಮಾತು ಕೇಳೋದು ನಿಲ್ಲಿಸಿ ಎಂದ ಪ್ರತಾಪ್ ಸಿಂಹ