ಬೆಳಗಾವಿ: ಅಂಧನ ನೆರವಿಗೆ ನಿಂತ ಡಿಸಿಪಿ ಅಮಟೆ
* ಹಣ, ಬಸ್ ಪಾಸ್ ಕಳೆದುಕೊಂಡು ಪರದಾಡುತ್ತಿದ್ದ ವ್ಯಕ್ತಿ
* ತನ್ನ ಊರು ತಲುಪಲು ಸಹಾಯ ಮಾಡಿದ ಡಿಸಿಪಿ
* ಸಹಾಯಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದ ಅಮಟೆ
ಬೆಳಗಾವಿ(ಜು.31): ಹಣ, ಬಸ್ ಪಾಸ್, ಗುರುತಿನ ಪತ್ರ ಕಳೆದುಕೊಂಡು ಪರದಾಡುತ್ತಿದ್ದ ಅಂಧ ವ್ಯಕ್ತಿಯೊಬ್ಬರಿಗೆ ಬೆಳಗಾವಿ ಡಿಸಿಪಿ ಡಾ.ವಿಕ್ರಮ ಅಮಟೆ ಸಹಾಯಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬಸ್ಸಿಗೆ ಹಣವಿಲ್ಲದೇ ಪರದಾಡುತ್ತಿದ್ದ ಕೊಡಗು ಮೂಲದ ಅಂಧ ವ್ಯಕ್ತಿ ಕಲ್ಲಪ್ಪ ಬಸಪ್ಪ ಬೂದಿಹಾಳ ಎಂಬುವರು ಪರದಾಡುತ್ತಿದ್ದರು. ಕೊನೆಗೆ ಈತ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಭೇಟಿಗೆ ನಿರ್ಧರಿಸಿ, ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ. ಈ ವೇಳೆ ಈತನನ್ನು ಗಮನಿಸಿದ ಡಿಸಿಪಿ ಡಾ.ವಿಕ್ರಮ ಅಮಟೆ ಆತನ ಬಳಿ ತೆರಳಿ, ವಿಚಾರಿಸಿದ ವೇಳೆ ತಾನು ಹಣ, ಬಸ್ ಪಾಸ್ ಮತ್ತು ಗುರುತಿನ ಪತ್ರ ಕಳೆದುಕೊಂಡಿರುವುದು ಗಮನಕ್ಕೆ ಬಂದಿತು. ಬಳಿಕ ಆತನಿಗೆ ಧೈರ್ಯ ಹೇಳಿ ಕೊಡಗು ಜಿಲ್ಲೆಯ ಕುಶಾಲನಗರ ತಲುಪಲು ನೆರವಾದರು. ಆತನಿಗೆ ತಮ್ಮ ಊರಿಗೆ ಪ್ರಯಾಣ ಬೆಳೆಸಲು ಬಸ್ಸಿನ ಟಿಕೆಟ್ಖರ್ಚು ಹಾಗೂ ಆಹಾರದ ವ್ಯವಸ್ಥೆಯನ್ನು ಮಾಡಿ ಗಮನ ಸೆಳೆದರು. ಅಮಟೆ ಅವರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಬೆಳಗಾವಿಯಲ್ಲಿ 70 ಪೊಲೀಸರಿಗೆ ಕೊರೋನಾ ಸೋಂಕು
ಡಿಸಿಪಿ ವಿಕ್ರಮ ಅಮಟೆ ಅವರ ಸೂಚನೆ ಮೇರೆಗೆ ಮಾರ್ಕೆಟ್ ಠಾಣೆ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ ತುಳಸಿಗೇರಿ ಮತ್ತು ಎಎಸ್ಐ ಜೆ.ಎಂ.ಮಗದುಮ್ ಅವರು ಅಂಧ ವ್ಯಕ್ತಿಗೆ ಸಹಾಯ ಮಾಡಿ, ಆತನನ್ನು ಕುಶಾಲನಗರಕ್ಕೆ ತಲುಪಲು ನೆರವಾದರು.