ತಾಯಿಯ ಅನೈತಿಕ ಸಂಬಂಧ ಅರಿತಿದ್ದ ಹೆತ್ತ ಮಗಳನ್ನೇ ಕೊಲೆ ಮಾಡಿದ ಪೋಷಕರ
- ತನ್ನ ತಾಯಿಯ ಅನೈತಿಕ ಸಂಬಂಧ ತಿಳಿದಿದ್ದ ಮಗಳನ್ನ ಕೊಂದ ಪೋಷಕರು
- ಕತ್ತು ಹಿಸುಕಿ ಕೊಲೆ ಮಾಡಿದ ಹೆತ್ತ ತಂದೆ, ತಾಯಿ ಹಾಗೂ ಆಕೆಯ ದೊಡ್ಡಪ್ಪ
ಚಿಕ್ಕಬಳ್ಳಾಪುರ (ಸೆ.28): ತನ್ನ ತಾಯಿಯ ಅನೈತಿಕ ಸಂಬಂಧ ತಿಳಿದಿದ್ದ ಮಗಳನ್ನ ಹೆತ್ತ ತಂದೆ, ತಾಯಿ ಹಾಗೂ ಆಕೆಯ ದೊಡ್ಡಪ್ಪ ಕತ್ತು ಹಿಸುಕಿ ಕೊಲೆ ಮಾಡಿದ್ದ ಪ್ರಕರಣವನ್ನು ಭೇದಿಸುವಲ್ಲಿ ಜಿಲ್ಲೆಯ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು (police) ಯಶಸ್ವಿಯಾಗಿದ್ದು, ಈ ಸಂಬಂಧ ಮೂವರು ಕೊಲೆ (Murder) ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆಗೀಡಾದ ಮಹಿಳೆ ಗೌರಿಬಿದನೂರು (Gouribidanuru) ತಾಲೂಕಿನ ಮಣಿವಾಲ ಗ್ರಾಮದ ಪರ್ವಿನ್ ಮುಬಾರಕ್. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ದೊಡ್ಡಪ್ಪ ಪ್ಯಾರೇಜಾನ್(60), ಮೃತಳ ತಾಯಿ ಗುಲ್ಜಾರ್ ಬಾನು(45) ಮತ್ತು ತಂದೆ ಫಯಾಜ್‌ನನ್ನು ಬಂಧಿಸಲಾಗಿದೆ.
ಜೆರಾಕ್ಸ್‌ಗೆ ಬಂದ ವಿದ್ಯಾರ್ಥಿನಿಯರ ಮೇಲೆ ಸೈಬರ್ ಕೆಫೆಯಲ್ಲಿ ಎರಗಿದ ಕಾಮಾಂಧರು
ಸೆ.5 ರಂದು ಮಣಿವಾಲದ ನಿವಾಸಿ ರಾಜಶೇಖರ್ ಎಂಬುವರು ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು (Complaint) ನೀಡಿ ವಾಟದಹೊಸಹಳ್ಳಿ ಬಾವಿಯಲ್ಲಿ ಪರ್ವಿನ್ ಮುಬಾರಕ್ ಮೃತ ದೇಹ ಕುತ್ತಿಗೆಗೆ ನೇಣು ಬಿಗಿದಿರುವ ರೀತಿಯಲ್ಲಿ ಪತ್ತೆಯಾಗಿರುವುದಾಗಿ ತಿಳಿಸಿದ್ದರು. ಈ ಸಂಬಂಧ ಚಿಕ್ಕಬಳ್ಳಾಪುರ ಡಿವೈಎಸ್‌ಪಿ ವಾಸುದೇವ್ ನೇತೃತ್ವದಲ್ಲಿ ಗೌರಿಬಿದನೂರು ಠಾನೆ ವೃತ್ತ ನಿರೀಕ್ಷಕ ಶಶಿಧರ್, ಪಿಎಸ್‌ಐ ವಿಜಯ ಕುಮಾರ್, ಲಲಿತಮ್ಮ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದಾಗ ಪರ್ವಿನ್ ಮುಬಾರಕ್‌ರನ್ನು ಅವರ ತಾಯಿ, ತಂದೆ ಹಾಗೂ ದೊಡ್ಡಪ್ಪನೇ ಕೊಲೆ ಮಾಡಿರುವ ಸಂಗತಿ ಬಯಲಾಗಿದೆ.
ತಾಯಿಯ ಅನೈತಿಕ ಸಂಬಂಧ ತಿಳಿಸಿದ್ದ ಮಗಳು
ಪವೀರ್‍ನ್ ಮುಬಾರಕ್‌ಗೆ 10 ವರ್ಷದ ಹಿಂದೆ ಮದುವೆಯಾಗಿದ್ದು, ಮದುವೆಯಾದ ಕೂಡಲೇ ತನ್ನ ಗಂಡನನ್ನು ಬಿಟ್ಟು ತಾನು ಪ್ರೀತಿಸಿದ್ದ ಮಣಿವಾಲದ ಶಿವಪ್ಪ ಜೊತೆ ಜೀವನ ಸಾಗಿಸುತ್ತಿದ್ದಳು. ಆತ ಮೃತಪಟ್ಟಬಳಿಕ ವಿನಯ್ ಕುಮಾರ್ ಜೊತೆ ಸಂಸಾರ ನಡೆಸುತ್ತಿದ್ದಳು. ಆದರೆ ಆತನೂ ಮೃತಪಟ್ಟಬಳಿಕ ಪವೀರ್‍ನ್ ತನ್ನ ತವರಿಗೆ ಹಿಂತಿರುಗಿದ್ದಳು. ಆಗ ತನ್ನ ತಾಯಿ ಗುಲ್ಜಾರ್ ಬಾನು ತನ್ನ ಅಕ್ಕನ ಗಂಡ ಪ್ಯಾರೇಜಾನ್ ಅರೊಂದಿಗೆ ಅನೈತಿಕ ಸಂಬಂದ (Illicit Relationship) ಹೊಂದಿದ್ದರ ಬಗ್ಗೆ ಪರ್ವಿನ್ ಮುಬಾರಕ್‌ಗೆ ತಿಳಿದಿತ್ತು. ಈ ವಿಚಾರ ಎಲ್ಲಿ ಬಯಲು ಮಾಡುತ್ತಾಲೋ ಎಂಬ ಕಾರಣಕ್ಕೆ ತಾಯಿ, ತಂದೆ, ದೊಡ್ಡಪ್ಪ ಸೇರಿ ಮಗಳನ್ನೆ ಕೊಲೆ ಮಾಡಿ ಈಗ ಸಿಕ್ಕಿಬಿದ್ದಿದ್ದಾರೆ.