Asianet Suvarna News Asianet Suvarna News

ರಾಮನಗರ: ರೋಗಿಗೆ ಎ ಪಾಸಿಟಿವ್ ಬದಲಿಗೆ ಎಬಿ ಪಾಸಿಟಿವ್ ರಕ್ತ ನೀಡಿ ಎಡವಟ್ಟು..!

ಎಬಿ ಪಾಸಿಟಿವ್, ಇಂದು ಎ ಪಾಸಿಟಿವ್ ವರದಿ ನೀಡಿದ್ದೀರಲ್ಲ ಎಂಬ ಪ್ರಶ್ನೆಗೆ ಡಯೋಗ್ನೋಸ್ಟಿಕ್ ಸೆಂಟರ್ ಸಿಬ್ಬಂದಿ ಉಡಾಫೆಯಿಂದ ಉತ್ತರಿಸಿದ್ದಾರೆ. ಜೀವದ ಜೊತೆ ಚಲ್ಲಾಟವಾಡುತ್ತಿರುವ ಪೂಜಿತಾ ಡಯೋಗ್ನೋಸ್ಟಿಕ್ ಸೆಂಟರ್ ಸಿಬ್ಬಂದಿ ವಿರುದ್ಧ ಶಿವಮ್ಮ ಪುತ್ರ ವಿಷಕಂಠಮೂರ್ತಿ ಐಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Paramedic who gave AB Positive Blood to Patient Instead of A Positive in Ramanagara grg
Author
First Published Dec 1, 2023, 10:23 PM IST

ರಾಮನಗರ(ಡಿ.01): ಪೂಜಿತ ಡಯಾಗ್ನೋಸ್ಟಿಕ್ ಸೆಂಟರ್ ಸಿಬ್ಬಂದಿ ಅನಾರೋಗ್ಯದಿಂದ ಬಳುತ್ತಿದ್ದ ಮಹಿಳೆಗೆ ಎ ಪಾಸಿಟಿವ್ ಬದಲಿಗೆ ಎಬಿ ಪಾಸಿಟಿವ್ ರಕ್ತ ನೀಡಿದ್ದರಿಂದ ಆಕೆ ಸಾವು ಬದುಕಿನ ನಡುವೆ ಹೋರಾಟ ನಡೆಸುವಂತಹ ಘಟನೆ ಅರೆ ವೈದ್ಯಕೀಯ ಸಿಬ್ಬಂದಿ ಎಡವಟ್ಟಿನಿಂದಾಗಿದೆ.

ಘಟನೆ ವಿವರ: 

ಶಿವಮ್ಮ ಆರೋಗ್ಯ ಸರಿ ಇಲ್ಲದ ಕಾರಣ ಸೆ.2ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಸಿಬ್ಬಂದಿ ಇಲ್ಲದ ಕಾರಣ ವೈದ್ಯರ ಸೂಚನೆ ಮೇರೆಗೆ ಕುಟುಂಬಸ್ಥರು, ರಾಮನಗರದ ಪೂಜಿತಾ ಡಯಾಗ್ನೋಸ್ಟಿಕ್‌ನಲ್ಲಿ ರೋಗಿಯ ರಕ್ತ ಗುಂಪಿನ ಮಾದರಿ ಪರೀಕ್ಷೆ ಮಾಡಿಸಿದ್ದರು. ಪರೀಕ್ಷೆ ಮಾಡಿದ್ದ ಲ್ಯಾಬ್ ಸಿಬ್ಬಂದಿ ರಕ್ತದ ಗುಂಪು ಎಬಿ ಪಾಸಿಟಿವ್ ಎಂದು ವರದಿ ನೀಡಿದ್ದರು.

ಗೃಹಲಕ್ಷ್ಮಿ ಹಣ ಇನ್ನೂ ಬಂದಿಲ್ವಾ?: ಫಲಾನುಭವಿಗಳಿಗೆ ದುಡ್ಡು ತಲುಪಲು ಹೊಸ ಪ್ಲಾನ್‌..!

ಈ ವರದಿ ಆಧರಿಸಿ ಶಿವಮ್ಮ ಅವರಿಗೆ ಎಬಿ ಪಾಸಿಟಿವ್‌ನ 2 ಬಾಟಲ್ ರಕ್ತವನ್ನು ವೈದ್ಯರು ನೀಡಿದ್ದರು. ಇದಾದ ನಂತರ 10 ದಿನಗಳ ಕಾಲ ಶಿವಮ್ಮ ಅವರಿಗೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಿ ನಂತರ ಡಿಸ್ಚಾರ್ಜ್ ಮಾಡಲಾಗಿತ್ತು.
ಆಸ್ಪತ್ರೆಯಿಂದ ಡಿಸ್ಚಾರ್ಚ್ ಆದ ಬಳಿಕವೂ ಶಿವಮ್ಮ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡು ಬರಲಿಲ್ಲ. ಬದಲಿಗೆ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿತು. ನಡೆದಾಡಲು ಕಷ್ಟ ಪಡಬೇಕಾದ ಸ್ಥಿತಿ ಬಂದಿತ್ತು. ಹಾಗಾಗಿ ಇವರ ಪುತ್ರ ಮತ್ತೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು.

ನ.28ರಂದು ಆಸ್ಪತ್ರೆಗೆ ದಾಖಲಿಸಿದ ನಂತರ ರಕ್ತ ಪರೀಕ್ಷೆ ನಡೆಸಿದಾಗ ಶಿವಮ್ಮ ಅವರ ರಕ್ತದ ಗುಂಪು ಎ ಪಾಟಿಸಿವ್ ಎಂದು ಬಂದಿತ್ತು. ಇದರಿಂದ ಗಾಬರಿಗೊಂಡ ಪುತ್ರ ಮತ್ತೆ ಪೂಜಿತಾ ಡಯೋಗ್ನೋಸ್ಟಿಕ್ ಸೆಂಟರ್‌ನಲ್ಲಿ ರಕ್ತ ಪರೀಕ್ಷೆ ಮಾಡಿಸಿದರೆ ಅಲ್ಲಿಯೂ ಸಹ ಎ ಪಾಸಿಟಿವ್ ಎಂದು ವರದಿ ಬಂದಿದೆ. ಈ ಅನುಮಾನ ಬಗೆಹರಿಸಿಕೊಳ್ಳುವ ಸಲುವಾಗಿ ಮತ್ತೊಂದು ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ರಕ್ತ ಪರೀಕ್ಷೆ ಮಾಡಿಸಿದಾಗಲು ಎ ಪಾಸಿಟಿವ್ ಎಂದು ವರದಿ ಬಂದಿತ್ತು.

ಪುಲ್ವಾಮಾ ದಾಳಿಯಾಗದಿದ್ದರೆ ಮೋದಿ ಗೆಲ್ಲುತ್ತಿರಲಿಲ್ಲ: ಶಾಸಕ ಬಾಲಕೃಷ್ಣ ಕೀಳು ಹೇಳಿಕೆ

ಸೆ.2ರಂದು ಎಬಿ ಪಾಸಿಟಿವ್, ಇಂದು ಎ ಪಾಸಿಟಿವ್ ವರದಿ ನೀಡಿದ್ದೀರಲ್ಲ ಎಂಬ ಪ್ರಶ್ನೆಗೆ ಡಯೋಗ್ನೋಸ್ಟಿಕ್ ಸೆಂಟರ್ ಸಿಬ್ಬಂದಿ ಉಡಾಫೆಯಿಂದ ಉತ್ತರಿಸಿದ್ದಾರೆ. ಜೀವದ ಜೊತೆ ಚಲ್ಲಾಟವಾಡುತ್ತಿರುವ ಪೂಜಿತಾ ಡಯೋಗ್ನೋಸ್ಟಿಕ್ ಸೆಂಟರ್ ಸಿಬ್ಬಂದಿ ವಿರುದ್ಧ ಶಿವಮ್ಮ ಪುತ್ರ ವಿಷಕಂಠಮೂರ್ತಿ ಐಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ಕುರಿತು ವಿಷಕಂಠಮೂರ್ತಿ ಮಾತನಾಡಿ, ಪೂಜಿತಾ ಡಯಗ್ನೋಸ್ಟಿಕ್ ಸಿಬ್ಬಂದಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಬೇರೆ ಗುಂಪಿನ ರಕ್ತ ನೀಡಿದ ಕಾರಣ ತಾಯಿ ಆರೋಗ್ಯದಲ್ಲಿ ಏರುಪೇರಾಗಿ ನಡೆದಾಡಲು ಸಾಧ್ಯವಾಗುತ್ತಿಲ್ಲ. ದೇಹದಲ್ಲಿ ರಕ್ತ ಕಡಿಮೆ ಇರುವ ಕಾರಣ ಮೊತ್ತೊಮ್ಮೆ ರಕ್ತ ನೀಡಲು ವೈದ್ಯರು ಸೂಚಿಸಿದ್ದರು. ಆದರೆ, ಈವರೆಗೂ ನೀಡಿಲ್ಲ ಎಂದು ತಿಳಿಸಿದರು.

Follow Us:
Download App:
  • android
  • ios