*  ಆಟೋ ಚಾಲಕರಿಂದ ಮಾಮೂಲಿ ಪ್ರಕರಣ ಡಿವೈಎಸ್ಪಿ ತನಿಖೆ: ಎಸ್ಪಿ ರಿಷ್ಯಂತ್‌*  ಕೂಸನ್ನು ತಾಯಿ ಮಡಿಲಿಗೆ ಒಪ್ಪಿಸಿದ ಪೊಲೀಸರು*  ಪ್ರಕರಣದಲ್ಲಿ ಬೇರೆ ವಿಷಯಗಳೂ ಇರುವುದರಿಂದ ತನಿಖೆ ಮುಂದುವರಿದಿದೆ

ದಾವಣಗೆರೆ(ಜೂ.12): ನವಜಾತ ಶಿಶು ಪ್ರಕರಣಕ್ಕೆ ಸಂಬಂಧಿಸಿ ಮಗುವಿನ ಅಜ್ಜ ಬಸಪ್ಪ, ಮಧ್ಯವರ್ತಿ ಪರಶುರಾಮ, ಮಗುವನ್ನು ಖರೀದಿಸಿದ್ದ ಭೀಮವ್ವ, ಬಸಪ್ಪ ಎಂಬುವರನ್ನು ಬಂಧಿಸಿ, ಕೂಸನ್ನು ತಾಯಿ ಮಡಿಲಿಗೆ ಒಪ್ಪಿಸಿಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿನ ನಾಗಮ್ಮ ಕೇಶವಮೂರ್ತಿ ಬಡಾವಣೆಯ ನವಜಾತ ಶಿಶು ಮಾರಾಟಕ್ಕೆ ಸಂಬಂಧಿಸಿದಂತೆ ಬಂಧಿತರ ಕುರಿತು ಮಾಹಿತಿ ನೀಡಿದರು.

Chikkamagaluru: ಆನೆದಂತ ಮಾರಾಟ ಮಾಡಲು ಯತ್ನ: ಐವರ ಬಂಧನ

ಆಟೋ ಚಾಲಕರ ಬಳಿ ಮಾಮೂಲಿ ವಸೂಲಿ ಆರೋಪದ ಹಿನ್ನೆಲೆಯಲ್ಲಿ ಸಂಚಾರ ಪೊಲೀಸ್‌ ಠಾಣೆಯ ಕಾನ್ಸಟೇಬಲ್‌ ಚಂದ್ರಾನಾಯ್ಕ ವಿರುದ್ಧ ಡಿವೈಎಸ್ಪಿ ತನಿಖೆ ನಡೆಸಿದ್ದಾರೆ. ಚಂದ್ರಾನಾಯ್ಕ ಬ್ಯಾಂಕ್‌ ಖಾತೆಗೆ ಹಣ ಏಕೆ ಬಂದು ಎಂಬುದು ಸಾಬೀತಾಗಬೇಕಿದೆ. ಯಾವುದೇ ಸಿಬ್ಬಂದಿ ರಕ್ಷಣೆ ಮಾಡುವ ಉದ್ದೇಶ ಇಲ್ಲ. ಯಾರೇ ತಪ್ಪು ಮಾಡಿದ್ದರೂ ಅಂತಹವರ ವಿರುದ್ಧ ಮುಲಾಜಿಲ್ಲದೇ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು. 

ಪ್ರಕರಣದಲ್ಲಿ ಬೇರೆ ವಿಷಯಗಳೂ ಇರುವುದರಿಂದ ತನಿಖೆ ಮುಂದುವರಿದಿದೆ. ವರದಿ ಬಂದ ನಂತರ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಯಾರೇ ಆಗಲಿ ಒಂದು ಸಲ ಕ್ರಿಮಿನಲ್‌ ಮೊಕದ್ದಮೆ ದಾಖಲಾದರೆ ಅದನ್ನು ವಾಪಸ್‌ ಪಡೆಯಲು ಕಾನೂನಿನಲ್ಲಿ ಅವಕಾಶ ಇಲ್ಲ. ಸಿವಿಲ್‌ ಕೇಸ್‌ ವಾಪಸ್‌ ಪಡೆಯಬಹುದು ಆದರೆ, ಕ್ರಿಮಿನಲ್‌ ಕೇಸ್‌ನಲ್ಲಿ ಅವಕಾಶ ಇಲ್ಲ ಎಂದು ಕೆಆರ್‌ಎಸ್‌ ಪಕ್ಷದ ಮುಖಂಡರ ಆರೋಪಕ್ಕೆ ಎಸ್ಪಿ ಪ್ರತಿಕ್ರಿಯಿಸಿದರು.