Asianet Suvarna News Asianet Suvarna News

ರೈತರಿಗೆ ಪಂಚರತ್ನ ಯೋಜನೆ ವರದಾನ

ಸಕಾಲಕ್ಕೆ ಮಳೆ ಬೀಳದ ಕಾರಣ ಬೇಸಾಯ ನಷ್ಟವಾಗಿದ್ದು, ಕುಮಾರಸ್ವಾಮಿ ಜಾರಿಗೆ ತರುವ ಪಂಚರತ್ನ ಯೋಜನೆಯು ರೈತರಿಗೆ ವರದಾನ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

Pancharatna scheme boon to farmers snr
Author
First Published Mar 26, 2023, 4:46 AM IST

  ಮಧುಗಿರಿ : ಸಕಾಲಕ್ಕೆ ಮಳೆ ಬೀಳದ ಕಾರಣ ಬೇಸಾಯ ನಷ್ಟವಾಗಿದ್ದು, ಕುಮಾರಸ್ವಾಮಿ ಜಾರಿಗೆ ತರುವ ಪಂಚರತ್ನ ಯೋಜನೆಯು ರೈತರಿಗೆ ವರದಾನ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

ಶನಿವಾರ ತಾಲೂಕಿನ ದೊಡ್ಡೇರಿ ಹೋಬಳಿಯ ಸಜ್ಜೆಹೊಸಹಳ್ಳಿಯಲ್ಲಿ ತುಮುಲ್‌ ವತಿಯಿಂದ ಆರಂಭವಾದ ನೂತನ ಬಿಎಂಸಿ ಘಟಕ ಹಾಗೂ ಮಿಶ್ರತಳಿಯ ಕರುಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬೇಸಾಯಕ್ಕೆ ಮಾಡಿದ ಸಾಲ ತಿರೀಸಲಾಗಿದೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದು ಕುಮಾರಸ್ವಾಮಿಯವರ ಸಾಲಮನ್ನಾದಿಂದ ಆತ್ಮಹತ್ಯೆ ನಿಂತಿದೆ. ಇದನ್ನು ಮನಗಂಡು ಮುಂಗಾರು ಆರಂಭಕ್ಕೆ ಮುನ್ನವೇ ಪ್ರತಿ ಎಕರೆಗೆ 10 ಸಾವಿರದಂತೆ 10 ಎಕರೆಗೆ 1 ಲಕ್ಷ ಸಹಾಯಧನ ನೀಡಿ ಬೇಸಾಯವನ್ನು ಪ್ರೋತ್ಸಾಹಿಸುವ ಕಾರ್ಯಕ್ಕೆ ಕುಮಾರಸ್ವಾಮಿ ಮುಂದಾಗಿದ್ದಾರೆ. ಮಕ್ಕಳ ಶಿಕ್ಷಣ, ಪ್ರಜೆಗಳ ಆರೋಗ್ಯ ಉಚಿತವಾಗಲಿದ್ದು, ಸ್ತ್ರೀ ಶಕ್ತಿ ಸಂಘದ ಸಂಪೂರ್ಣ ಸಾಲ ಮನ್ನಾ ಮಾಡುವ ಹಾಗೂ ಪ್ರತಿ ಕುಟುಂಬಕ್ಕೆ ಸೂರು, ವೃದ್ಧರಿಗೆ 5 ಸಾವಿರ, ವಿಧಾವ ಮಹಿಳೆಯರಿಗೆ 2500 ನೀಡಿ ಕ್ಷೇತ್ರದಲ್ಲೇ ಉದ್ಯೋಗ ಕೊಡಿಸುವ ಮಹತ್ವಾಕಾಂಕ್ಷಿ ಯೋಜನೆ ಜಾರಿಯಾಗಲಿದೆ. ಇದಕ್ಕಾಗಿ ಈ ಬಾರಿ ಜೆಡಿಎಸ್‌ ಬೆಂಬಲಿಸಬೇಕು ಎಂದರು.

ಈ ಭಾಗದ ಜೀವನಧಿ ಸುವರ್ಣಮುಖಿಗೆ ಅಡ್ಡಲಾಗಿ 10 ಚೆಕ್‌ಡ್ಯಾಂ ನಿರ್ಮಿಸಿದ್ದು ಅಂತರ್ಜಲದ ಕೊರತೆಯಿಲ್ಲ. ಮುಂದೆ ಇಂತಹ ಕಾರ್ಯಕ್ರಮಗಳನ್ನು ಹೆಚ್ಚಿಸುತ್ತೇನೆ. ಜಿಲ್ಲೆಯಲ್ಲಿ ರೈತರ ಹಿತ ಕಾಪಾಡಿರುವುದು ಹೈನುಗಾರಿಕೆ. ಈ ಉದ್ಯಮವನ್ನು ಸಧೃಡಗೊಳಿಸಿದ್ದು ಕೊಂಡವಾಡಿ ಚಂದ್ರಶೇಖರ್‌. ರೈತ ಕಲ್ಯಾಣ ಟ್ರೆಸ್ಟ್‌ ಸ್ಥಾಪಿಸಿ ವ್ಯವಹಾರಿಕವಾಗಿದ್ದ ಒಕ್ಕೂಟವನ್ನು ಸಮಾಜಮುಖಿಯಾಗಿ ಮಾಡಿದ್ದಾರೆ. ರೈತರು ಧೈರ್ಯದಿಂದ ಹಾಲು ಉತ್ಪಾದನೆಯಲ್ಲಿ ತೊಡಗಿದ್ದು ಜಿಲ್ಲೆಯಲ್ಲಿ ಕ್ಷೀರಕ್ರಾಂತಿಗೆ ಕಾರಣರಾಗಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.

ತುಮುಲ್‌ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್‌ ಮಾತನಾಡಿ, ಹೈನುಗಾರರಿಗೆ ಹಣ ನೀಡಲು ಕಷ್ಟಪಡುತ್ತಿದ್ದ ತುಮುಲ್‌ ಇಂದು ಹಸುಗಳ ವಿಮೆಗೆ 17 ಕೋಟಿ ಹಣ ನೀಡುತ್ತಿದ್ದು, 20.5 ಕೋಟಿ ಪರಿಹಾರ ನೀಡಿದೆ. ನಾನು ಜಾರಿಗೆ ತಂದ ರೈತ ಕಲ್ಯಾಣ ಟ್ರೆಸ್ಟ್‌ ರೈತರ ಕುಟುಂಬದ ಸಮಗ್ರ ಅಭಿವೃದ್ಧಿಗೆ ನೆರವಾಗುತ್ತಿದ್ದು ತೃಪ್ತಿಯಿದೆ. ಮಧುಗಿರಿಯ ಶಾಸಕರು ರೈತಪರವಾಗಿದ್ದು, ನಮ್ಮ ಪ್ರತಿ ಡೇರಿಯ ನೂತನ ಕಟ್ಟಡಕ್ಕೆ ತಲಾ 3 ಲಕ್ಷ ನೀಡಿದ್ದು, ಜಿಲ್ಲೆಯ ಯಾವ ಶಾಸಕರು ಕೊಡದ ಅನುದಾನ ನೀಡಿದ್ದು, ಅವರನ್ನು ಗೌರವಿಸುತ್ತೇನೆ. ಹಾಲು ಗುಣಮಟ್ಟವಾಗಿರಲು ಬಿಎಂಸಿ ಕೇಂದ್ರಗಳ ಅವಶ್ಯಕತೆಯಿದ್ದು ಕ್ಷೇತ್ರದಲ್ಲಿ 21 ಕೇಂದ್ರಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ನನ್ನ ಅವಧಿಯಲ್ಲಿ 110 ಘಟಕಗಳನ್ನು ಆರಂಭಿಸಿದ ಕಾರಣ ಇಂದು ಗುಣಮಟ್ಟದ ಹಾಲು ದೇಶದ ಮೂಲೆಗೂ ಸರಬರಾಜಾಗುತ್ತಿದ್ದು ಲಕ್ಷಾಂತರ ರೈತರಿಗೆ ಆರ್ಥಿಕವಾಗಿ ಶಕ್ತಿ ತುಂಬಿದೆ. ಶಾಸಕರು ಸಹ ರೈತರ ನೆರವಿಗೆ ಬಂದಿದ್ದು ಇಂತಹ ಉತ್ತಮ ಶಾಸಕರು ಕ್ಷೇತ್ರಕ್ಕೆ ಅಗತ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್‌ ಅಧ್ಯಕ್ಷ ಬಸವರಾಜು, ಗ್ರಾ.ಪಂ. ಅಧ್ಯಕ್ಷೆ ಪುಟ್ಟಲಕ್ಷ್ಮಮ್ಮ ಲಿಂಗಪ್ಪ, ಡೇರಿ ಅಧ್ಯಕ್ಷ ವೆಂಕಟೇಶ್‌ ಗೌಡ, ಸದಸ್ಯರು ಹಾಗೂ ಆಡಳಿತ ಮಂಡಳಿಯವರು, ತಾಲೂಕು ವಿಸ್ತರಣಾಧಿಕಾರಿಗಳಾದ ಗಿರೀಶ್‌, ದರ್ಶನ್‌, ಧರ್ಮವೀರ್‌, ಮಾರೇಗೌಡ, ಸುದರ್ಶನ್‌ ಹಾಗೂ ಸಾರ್ವಜನಿಕರು ಇದ್ದರು.

Follow Us:
Download App:
  • android
  • ios