ಕೊಟ್ಟ ಮಾತಿಗೆ ತಪ್ಪಿದ BSY:ಕಮಲ ಹಿಡಿದು ಬಂದವರಿಗೆ ಯಡಿಯೂರಪ್ಪ ಅನ್ಯಾಯ

ಸಚಿವ ಸಂಪುಟ ವಿಸ್ತರಣೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯ| ಪಂಚಮಸಾಲಿ ಸಮಾಜದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಬಿ.ಎಸ್‌.ಪಾಟೀಲ ನಾಗರಾಳ ಆಕ್ರೋಶ|ನಮ್ಮ ಸಮಾಜದಲ್ಲಿ ಮುಖ್ಯಮಂತ್ರಿಯಾಗುವ ಯೋಗ್ಯತೆಯುಳ್ಳವರು ಸಾಕಷ್ಟು ಜನ ಇದ್ದಾರೆ|

Panchamasali State Vice President of Youth Unit B S Patil Nagaral Talks Over Cabinet expansion

ದೇವರಹಿಪ್ಪರಗಿ(ಫೆ.07): ಸಚಿವ ಸಂಪುಟ ರಚನೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯವಾಗಿದ್ದು, ಮುಖ್ಯಮಂತ್ರಿಗಳು ಕೊಟ್ಟಮಾತಿಗೆ ತಪ್ಪಿದ್ದಾರೆ ಎಂದು ಪಂಚಮಸಾಲಿ ಸಮಾಜದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಬಿ.ಎಸ್‌.ಪಾಟೀಲ ನಾಗರಾಳ ಹುಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ಪ್ರಕಟಣೆ ನೀಡಿರುವ ಅವರು, ರಾಜೀನಾಮೆ ನೀಡಿ ಬಿಜೆಪಿ ಆಡಳಿತಕ್ಕೆ ಬರಲು ಕಾರಣಿಕರ್ತರಾಗಿದ್ದವರಲ್ಲಿ ಅಥಣಿ ಮತಕ್ಷೇತ್ರದ ಕುಮಟಳ್ಳಿ ಅವರೂ ಒಬ್ಬರಾಗಿದ್ದಾರೆ. ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ಮತ್ತೇ ಆಯ್ಕೆಯಾದ​ವ​ರೆ​ಲ್ಲ​ರಿಗೂ ಮಂತ್ರಿ ಮಾಡುತ್ತೇನೆ ಎಂದು ಹೇಳಿ ಈಗ ಏಕಾಏಕಿ ಇವರೊಬ್ಬರನ್ನೇ ಕೈಬಿಟ್ಟಿರುವುದು ಖಂಡನೀಯ. ಕುಮಟಳ್ಳಿಯವರ ತ್ಯಾಗ ಮರೆತು ಬಿಟ್ಟಿದ್ದಾರೆ. ಪಂಚಮಸಾಲಿ ಸಮಾಜದವರು ಮಾಡಿದ ತಪ್ಪಾದರೂ ಏನು ಎನ್ನುವಂತಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಮ್ಮ ಸಮಾಜದಲ್ಲಿ ಮುಖ್ಯಮಂತ್ರಿಯಾಗುವ ಯೋಗ್ಯತೆಯುಳ್ಳವರು ಸಾಕಷ್ಟು ಜನ ಇದ್ದಾರೆ. ಆದರೆ ಮುಖ್ಯಮಂತ್ರಿಗಳು ಹಿರಿಯರು ಅನುಭವಿಕರು ಇದ್ದಾರೆ ಎಂದು ಅವಕಾಶ ನೀಡಿದರೆ ಅಧಿಕಾರಕ್ಕೆ ತಂದವರನ್ನೇ ಮರೆತು ಬಿಟ್ಟಿದ್ದಾರೆ. ಬಹುದಿನಗಳಿಂದ ರಾಜ್ಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯವಾಗುತ್ತಲೇ ಇದೆ. ಇದೇ ರೀತಿ ಸ್ವಾಭಿಮಾನಿ ಪಂಚಮಸಾಲಿ ಸಮುದಾಯ ತುಳಿಯಲು ಪ್ರಯತ್ನಿಸಿ​ದರೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಯುವ ಘಟಕದ ರಾಜ್ಯ ಉಪಾಧ್ಯಕ್ಷ ಬಿ.ಎಸ್‌.ಪಾಟೀಲ ನಾಗರಾಳಹುಲಿ, ಡಾ. ಸಿ.ಎಸ್‌. ಸೋಲಾಪೂರ, ರವಿ ಖಾನಾಪೂರ, ಮಲ್ಲನಗೌಡ ಬಿರಾದಾರ ಕೋರವಾರ, ಸಂತೋಷ ಬಿರಾದಾರ, ಕಲ್ಲು ಬಳ್ಳಾರಿ ಸೇರಿದಂತೆ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios