ಉತ್ತರ ಕರ್ನಾಟಕದ ನಾಯಕನಿಗೆ ಸಿಗುತ್ತಾ BSY ಸಂಪುಟದಲ್ಲಿ ಸ್ಥಾನ ?
ರಾಜ್ಯದಲ್ಲಿ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿ ಹಲವು ದಿನಗಳು ಕಳೆದಿದ್ದು ಇನ್ನಾದರೂ ಸಂಪುಟ ವಿಸ್ತರಣೆ ಪ್ರಕ್ರಿಯೆ ಮುಗಿದಿಲ್ಲ. ಆದರೆ ದಿನದಿನಕ್ಕೂ ಆಕಾಂಕ್ಷಿಗಳ ಸಂಖ್ಯೆ ಮಾತ್ರ ಹೆಚ್ಚಾಗುತ್ತಲೇ ಇದೆ.
ವಿಜಯಪುರ [ಡಿ.20]: ಬಸನಗೌಡ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಪಂಚಮ ಸಾಲಿ ಪೀಠದ ಶ್ರೀಗಳು ಸರ್ಕಾರಕ್ಕೆ ತಿಳಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಪಂಚಮಸಾಲಿ ಪೀಠದ ಶ್ರೀಗಳು, ಯತ್ನಾಳ್ ಅವರು ಪಂಚಮಸಾಲಿ ನಾಯಕರು ಮಾತ್ರವಲ್ಲ. ಅವರು ಉತ್ತರ ಕರ್ನಾಟಕ ಜನರ ಪರವಾಗಿ ನಿಂತಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಸಚಿವ ಸ್ಥಾನ ಸಿಬೇಕು ಎಂದು ಆಗ್ರಹಿಸಿದ್ದಾರೆ.
ಜನಸಂಖ್ಯೆಗೆ ಅನುಗುಣವಾಗಿ ಮೂವರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವುದು ನಮ್ಮ ಆಗ್ರಹ ಸದಾ ಯಡಿಯೂರಪ್ಪ ಬೆನ್ನಿಗೆ ನಿಂತವರು ಯತ್ನಾಳ್, ಅವರೂ ಹಿರಿಯರಾಗಿರುವುದರಿಂದ ಸಚಿವ ಸ್ಥಾನ ನೀಡುವುದರಲ್ಲಿ ತಪ್ಪಿಲ್ಲ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮುರುಗೇಶ್ ನಿರಾಣಿ, ಸವದಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವುದು ಪಂಚಮಸಾಲಿ ಜನರ ಅಭಿಪ್ರಾಯವಾಗಿದೆ. ಎಲ್ಲರಿಗೂ ಅವಕಾಶ ಕೊಡಲು ಆಗಲ್ಲ. ಆದರೆ ಪ್ರಯತ್ನಿಸುತ್ತೇನೆ ಎಂದು ಸಿಎಂ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಒಂದ ವೇಳೆ ಸಚಿವ ಸ್ಥಾನ ನೀಡಲು ಆಗಲ್ಲ ಎಂದರೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪಂಚಮಸಾಲಿ ಪೀಠದ ಶ್ರೀಗಳು ಹೇಳಿದರು.