ಬೆಂಗಳೂರು(ಫೆ.  22)    ನೀವು ಮಾತುಕೊಟ್ಟಂತೆ ನಡೆದುಕೊಂಡಿದ್ದರೆ ನಿರಾಣಿ ನಡೆದುಕೊಂಡಿದ್ದರೆ ನಾವು ಹೋರಾಟದ ಹಾದಿ ಹಿಡಿಯಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ. ನಮ್ಮ  ಹೋರಾಟಕ್ಕೆ ಬಲ ನೀಡಿದ್ದು ಬಸನಗೌಡ ಪಾಟೀಲ್ ಯತ್ನಾಳ್.. ಪಂಚಮಸಾಲಿ ಮೀಸಲು ಹೋರಾಟದ ನೇತೃತ್ವ ವಹಿಸಿಕೊಂಡಿರುವ ಜಯಮೃತ್ಯುಂಜಯ ಸ್ವಾಮೀಜಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ  ಕಿಡಿ ಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅನೇಕ ವಿಚಾರಗಳನ್ನು ಹೇಳಿದ್ದಾರೆ. ನಿರಾಣಿ ಅವರು ಶುಗರ್ ಫ್ಯಾಕ್ಟರಿ ಒತ್ತಡದಲ್ಲಿ ಇದ್ದರು. ನಾವು ರಾಜಕಾರಣಿಗಳಂತೆ ಮಾತು ತಪ್ಪುವವರಲ್ಲ. ನಿಮ್ಮ ಮಾತನ್ನು ಕೇಳಿಯೇ ಸತ್ಯಾಗ್ರಹ ಮಾಡುತ್ತಿದ್ದೇನೆ ಎಂದಿದ್ದಾರೆ.

'ಪಂಚಮಸಾಲಿ ಹೋರಾಟ ಕಾಂಗ್ರೆಸ್ ಸಮಾವೇಶವಾಗಿತ್ತು'

ಪಂಚಮಸಾಲಿ ಹೋರಾಟ ದಿಕ್ಕು ತಪ್ಪಿದೆ ಎಂದು ಸಚಿವರು ಹೇಳುತ್ತಿದ್ದಾರೆ.  ನಾವು ಸರಿಯಾದ ದಿಕ್ಕಿನಲ್ಲಿಯೇ ಹೋರಾಟ ಮಾಡುತ್ತಿದ್ದೇವೆ. ಯಾವ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ವಾಮೀಜಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ .

"

 

"

 

"

 

"

 

"

 

"