Dharwad: ಜೈಲಿನಲ್ಲಿ ಪಾಕ್ ಮೂಲದ ಖೈದಿಯಿಂದ ಉಪವಾಸ ಸತ್ಯಾಗ್ರಹ: ಕಿಮ್ಸ್ ಆಸ್ಪತ್ರೆಗೆ ದಾಖಲು!

ಧಾರವಾಡ ಕೇಂದ್ರ ಕಾರಾಗೃಹದಲ್ಲಿದ್ದ ಪಾಕಿಸ್ತಾನ ಮೂಲದ ಉಗ್ರನ ಹುಚ್ಚಾಟ ಹೆಚ್ಚಾಗಿದ್ದು, ವಿವಿಧ ಬೇಡಿಕೆಯಿಟ್ಟು ಏಳು ದಿನಗಳಿಂದ ಉಪವಾಸ ಮಾಡಿ ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರಿದ್ದಾನೆ.

pakistani prisoner on hunger strike at karnatakas dharwad jail admitted to hospital gvd

ಹುಬ್ಬಳ್ಳಿ (ಮೇ.11): ಧಾರವಾಡ (Dharwad) ಕೇಂದ್ರ ಕಾರಾಗೃಹದಲ್ಲಿದ್ದ (Jail) ಪಾಕಿಸ್ತಾನ (Pakistan) ಮೂಲದ ಉಗ್ರನ (Terrorist) ಹುಚ್ಚಾಟ ಹೆಚ್ಚಾಗಿದ್ದು, ವಿವಿಧ ಬೇಡಿಕೆಯಿಟ್ಟು ಏಳು ದಿನಗಳಿಂದ ಉಪವಾಸ (Hunger Strike) ಮಾಡಿ ಅಸ್ವಸ್ಥಗೊಂಡು ಆಸ್ಪತ್ರೆಗೆ (Hospital) ಸೇರಿದ್ದಾನೆ.  ಅಸ್ವಸ್ಥಗೊಂಡ ಉಗ್ರನಿಗೆ ಚಿಕಿತ್ಸೆಗಾಗಿ ಹುಬ್ಬಳ್ಳಿಯ (Hubballi) ಕಿಮ್ಸ್ ಆಸ್ಪತ್ರೆಗೆ (KIMS Hospital) ದಾಖಲಿಸಲಾಗಿದೆ. ಕೆ.ಆರ್.ಎಸ್.ಡ್ಯಾಂ ಸೇರಿದಂತೆ ದೇಶದ ವಿವಿಧ ಕಡೆ ವಿಧ್ವಂಸಕ ಕೃತ್ಯ ಮಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಪಾಕಿಸ್ತಾನದ ಉಗ್ರ ಮೊಹಮ್ಮದ್ ಫಹಾದ್ (42) ನನ್ನು 2006ರ ಅಕ್ಟೋಬರ್ 26ರಲ್ಲಿ ಬಂಧಿಸಲಾಗಿತ್ತು.

ಮೈಸೂರು (Mysuru) ಜೈಲಿನಿಂದ ಕಳೆದ ವರ್ಷ ಧಾರವಾಡ ಜೈಲಿಗೆ ಸ್ಥಳಾಂತರಿಸಲಾಗಿತ್ತು.ಶೀಘ್ರದಲ್ಲೇ ಪ್ರಕರಣದ ತನಿಖೆ ಪೂರ್ಣಗೊಳಿಸಿ. ತನ್ನ ಸಹಚರರು ಇರುವ ಬೆಂಗಳೂರು (Bengaluru) ಅಥವಾ ಕಾಶ್ಮೀರ (Kashmir) ಜೈಲಿಗೆ ಸ್ಥಳಾಂತರಿಸಬೇಕು. ಬೇರೆ ಖೈದಿಗಳ ಜೊತೆಗೆ ಬೆರೆಯುವ ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿದ್ದ ಉಗ್ರ ಕಳೆದ ಏಳು ದಿನಗಳಿಂದ ಉಪವಾಸ ಮಾಡಿ, ಮಾನಸಿಕ ಸ್ಥಿಮೀತಿ  ಕಳೆದುಕೊಂಡಿಕೊಂಡಿದ್ದು ಎನ್ನಲಾಗಿದೆ. ಇದೇ ಕಾರಣಕ್ಕೆ ಕಿಮ್ಸ್ ಬಂಧಿಖಾನೆ ವಾರ್ಡ್‌ನಲ್ಲಿ ಉಗ್ರನಿಗೆ ಚಿಕಿತ್ಸೆ (Treatment) ನೀಡಲಾಗುತ್ತಿದೆ. 

ಕಸದಲ್ಲಿಯೇ ರಸ ತೆಗೆಯುವಲ್ಲಿ ಯಶಸ್ವಿಯಾದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ..!

ಧಾರವಾಡ ಜೈಲು ಅಧೀಕ್ಷಕ ಎಂ.ಎ.ಮರಿಗೌಡ ಮಾತನಾಡಿ, ಮೇ 5ರಂದು ಸಂಜೆ ಆತನ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಸಕ್ಕರೆ ಪ್ರಮಾಣ ತೀವ್ರವಾಗಿ ಕುಸಿತಗೊಂಡಿತ್ತು. ವೈದ್ಯರ ಸಲಹೆ ಮೇರೆಗೆ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಆಸ್ಪತ್ರೆಗೆ ಸ್ಥಳಾಂತರಿಸುವ ಮೊದಲು, ನಾವು ಅವರ ಮುಷ್ಕರದ ಬಗ್ಗೆ ಉನ್ನತ ಅಧಿಕಾರಿಗಳು, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇತರ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಸಂಪೂರ್ಣ ಭದ್ರತೆಯೊಂದಿಗೆ ಆತ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆಂದು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios