ಕೊಪ್ಪಳ(ಡಿ.12): ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿರುವ ವಿವಾದಿತ ಪದ್ಮನಾಭ ತೀರ್ಥರ ಆರಾಧನೆ ಆರಂಭವಾಗಿದೆ. ಮಂತ್ರಾಲಯ ಮಠದಿಂದ ಪೂರ್ವಾರಾಧನೆ ಆರಂಭಗೊಂಡಿದೆ. ಒಟ್ಟು ಮೂರು ದಿನಗಳ ಕಾಲ ಆರಾಧನೆ ನಡೆಯಲಿದೆ. 

ಪ್ರತಿವರ್ಷ ಪದ್ಮನಾಭ ತೀರ್ಥರ ಆರಾಧನೆ ವೇಳೆ ಉತ್ತರಾಧಿ ಮಠ ಹಾಗೂ ಮಂತ್ರಾಲಯ ಮಠದ ನಡುವೆ ವಿವಾದ ಉಂಟಾಗುತ್ತಿತ್ತು. ಈ ಬಾರಿ ಹೈಕೋರ್ಟ್‌ ಆದೇಶದ ಹಿನ್ನಲೆಯಲ್ಲಿ ಆರಾಧನೆ ಜರಗುತ್ತಿದೆ. 

ಗಂಗಾವತಿ: ತುಂಗಭದ್ರಾ ನದಿಯಲ್ಲಿ ಪುಷ್ಕರ, ತೀರ್ಥಸ್ನಾನ

ಎರಡೂ ಮಠಗಳಿಗೆ ತಲಾ ಒಂದೂವರೆ ದಿನ ಆರಾಧನೆ ಆಚರಿಸಲು ಹೈಕೋರ್ಟ್ ಆದೇಶ ನೀಡಿದೆ. ಮೊದಲ ಒಂದೂವರೆ ದಿನದ ಆರಾಧನೆ ನೆರವೆರಿಸಲು ಮಂತ್ರಾಲಯ ಮಠಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೈಕೋರ್ಟ್‌ ಆದೇಶದ ಹಿನ್ನಲೆಯಲ್ಲಿ ಮಂತ್ರಾಲಯದ ಮಠ ಪೂರ್ವಾರಾಧೆ ನೆರೆವರಿಸುತ್ತಿದೆ. 

ಹೈಕೋರ್ಟ್ ಆದೇಶದಂತೆ ಮಂತ್ರಾಲಯ ಮಠದಿಂದ ಶನಿವಾರ ಬೆಳಿಗ್ಗೆ 5 ಗಂಟೆಗೆ ವೃಂದಾವನಕ್ಕೆ ಪಂಚಾಮೃತಾಭಿಷೇಕ,ವಿಶೇಷ ಹೂವಿನ ಅಲಂಕಾರ ,ಅಲಂಕಾರ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. 
ಭಾನುವಾರ ಮಧ್ಯಾರಾಧನೆ ಬೆಳಿಗ್ಗೆ 12.30 ರವರಿಗೆ ಜರುಗಲಿದೆ. 

ಈ ಸಂದರ್ಭದಲ್ಲಿ  ದಿವಾನ ರಾಜಾ ಸುಧೀಂದ್ರ ಚಾರ್,ಮಠಾಧಿಕಾರಿಗಳಾದ ಭೀಮಸೇನಚಾರ,ಪುಷ್ಕರಚಾರ, ಮಠದ ವ್ಯವಸ್ಥಾಪಕ ಸುಮಂತ ಕುಲಕರ್ಣಿ, ವಿಜಯಚಾರ ಚಳ್ಳಾರಿ,  ರಾಮಕೃಷ್ಣ ಜಾಹಗಿರದಾರ,ವಿಜಯ ಡಣಾಪುರ ಸೇರಿದಂತೆ ಮಠದ ಸಿಬ್ಬಂದಿಗಳು ಭಾಗವಹಿಸಿದ್ದರು.