ಗಂಗಾವತಿ: ತುಂಗಭದ್ರಾ ನದಿಯಲ್ಲಿ ಪುಷ್ಕರ, ತೀರ್ಥಸ್ನಾನ
ಗಂಗಾವತಿ(ನ.25): ತಾಲೂಕಿನ ಆನೆಗೊಂದಿಯ ಚಿಂತಾಮಣಿ ತುಂಗಭದ್ರಾ ನದಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಪುಷ್ಕರ ಕಾರ್ಯಕ್ರಮಗಳು ಜರುಗುತ್ತಿದ್ದು, ತಮಿಳುನಾಡಿನ ಕಂಚಿ ಕಾಮಕೋಟಿ ಮಠ ಮತ್ತು ಮಂತ್ರಾಲಯ ರಾಘವೇಂದ್ರಸ್ವಾಮಿಗಳ ಮಠದ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭಗೊಂಡಿವೆ.
50ಕ್ಕೂ ಹೆಚ್ಚು ತಮಿಳುನಾಡಿನ ಪಂಡಿತರು ದಿನನಿತ್ಯ ಹೋಮ ಹವನಗಳು ಸೇರಿದಂತೆ ವೇದಘೋಷಗಳು ಮತ್ತು ಗಂಗಾದೇವಿಗೆ ವಿಶೇಷ ಪೂಜೆ ನೆರವೇರಿತು.
ಚಿಂತಾಮಣಿ ದೇವಸ್ಥಾನದ ಆವರಣದಲ್ಲಿ ನಿತ್ಯ ಬೆಳಗ್ಗೆ ಹೋಮ ಜರುಗಿದ ನಂತರ ಗಂಗಾಮಾತೆಗೆ ತೀರ್ಥಸ್ನಾನ ಅಲ್ಲದೆ ಪುಷ್ಕರಕ್ಕೆ ಬಂದ ಭಕ್ತರಿಗೆ ತೀರ್ಥ ಪ್ರೋಕ್ಷಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಗಂಗಾವತಿ ತಾಲೂಕಿನ ಆನೆಗೊಂದಿಯ ಚಿಂತಾಮಣಿ ತುಂಗಭದ್ರಾ ನದಿಯಲ್ಲಿ ಪುಷ್ಕರದ ಅಂಗವಾಗಿ ಗಂಗೆಮಾತೆಗೆ ತಮಿಳುನಾಡಿನ ಪಂಡಿತರು ತೀರ್ಥ ಸ್ನಾನ ಮಾಡಿಸಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತಂದರು.