Asianet Suvarna News Asianet Suvarna News

ಕುವೆಂಪು ಪದ್ಮ ವಿಭೂಷಣ ಪದಕ ಕದ್ದ ಚೋರರಿಗೆ 2 ವರ್ಷ ಜೈಲು

ಕುವೆಂಪು ಮನೆಯಲ್ಲಿ ಪದಕಗಳನ್ನು ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರಿಗೆ 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. 

Padma awards stolen from Kuvempu memorial Conivts Gets 2 Year Jail
Author
Bengaluru, First Published Jan 31, 2020, 9:02 AM IST

ತೀರ್ಥಹಳ್ಳಿ [ಜ.31]:  ಕುಪ್ಪಳಿಯ ಕವಿಮನೆಯಿಂದ ರಾಷ್ಟ್ರಕವಿ ಕುವೆಂಪು ಅವರ ಪದ್ಮವಿಭೂಷಣ ಪದಕ ಸೇರಿ ಇತರೆ ಅಮೂಲ್ಯ ವಸ್ತುಗಳ​ನ್ನು ​ಕ​ಳ​ವು ಮಾಡಿದ್ದ ಆರೋ​ಪಿ​ಗ​ಳಿ​ಗೆ ತೀರ್ಥಹಳ್ಳಿ ನ್ಯಾಯಾಲಯ 2 ವರ್ಷ ಜೈಲುಶಿಕ್ಷೆ ಹಾಗೂ 5 ಸಾವಿರ ರು ದಂಡ ವಿಧಿಸಿದೆ. 

ಪ್ರಕರಣದ ಮೊದಲ ಅಪರಾಧಿ ದಾವಣಗೆರೆಯ ರೇವಣಸಿದ್ದಪ್ಪ ವಿಚಾರಣಾ ಹಂತದಲ್ಲಿಯೇ ಮೃತ ಪಟ್ಟಿದ್ದ. ಕಳ್ಳತನಕ್ಕೆ ಪ್ರೇರಣೆ ನೀಡಿದ್ದ ಕವಿಮನೆಯ ಮಾರ್ಗದರ್ಶಕ ಅಂಜನಪ್ಪ ಹಾಗೂ ಕಳ್ಳತನದ ಮಾಲೆಂದು ತಿಳಿದಿದ್ದರೂ ಅದನ್ನು ಖರೀದಿಸಿದ್ದ ಸವಳಂಗದ ಪ್ರಕಾಶ್‌ಗೆ ನ್ಯಾಯಾಲಯ ತಲಾ 2 ವರ್ಷ ಕಾರಾಗೃಹ ವಾಸ ಹಾಗೂ 5 ಸಾವಿರ ರೂ. ದಂಡ ವಿಧಿಸಿದೆ. 

ಹೆಜ್ಜೇನು ದಾಳಿ​ಯಿಂದ ಮಕ್ಕಳು, ಶಿಕ್ಷಕರನ್ನು ರಕ್ಷಿ​ಸಿದ ಬಾಲ​ಕಿ!..

ದಂಡ ಕಟ್ಟಲು ವಿಫಲರಾದಲ್ಲಿಮತ್ತೆ ಆರು ತಿಂಗಳ ಸಜೆ ಅನುಭವಿಸುವಂತೆ ಆದೇಶಿಸಿದೆ. 2015ರ ನ.23ರಂದು ಕವಿಮನೆಗೆ ನುಗ್ಗಿದ ಆರೋಪಿಗಳು ಒಂದು ಸಾವಿರ ರು. ನಗದು ಹಾಗೂ ಕುವೆಂಪು ಅವರಿಗೆ ಕೇಂದ್ರ ಸರ್ಕಾರ ಪ್ರದಾನ ಮಾಡಿದ್ದ ಪದ್ಮವಿಭೂಷಣ ಪದಕ ಹಾಗೂ ಮೈಸೂರು ವಿಶ್ವವಿದ್ಯಾಲಯ ನೀಡಿದ್ದ 2 ಪದಕಗಳನ್ನು ಅಪಹರಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಕಾರ್ಯಾಚರಣೆಗಿಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. 

ಬಂಧಿತರಿಂದ ಇತರೆ ಪದಕಗಳನ್ನು ವಶ ಪಡಿಸಿಕೊಳ್ಳಲಾಗಿತ್ತಾದರೂ ಪದ್ಮವಿಭೂಷಣ ಪದಕ ಪತ್ತೆಯಾಗಿರಲಿಲ್ಲ. ಇಂದಿಗೂ ಪದ್ಮವಿಭೂಷಣ ಪದಕ ಮಾತ್ರ ಪತ್ತೆಯಾಗಿಲ್ಲ.

Follow Us:
Download App:
  • android
  • ios