ಬೆಂಗಳೂರು(ಡಿ.30):  ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ನಿವೃತ್ತರಾಗುತ್ತಿಗಿದ್ದು ಅವರ  ಜಾಗಕ್ಕೆ ಹೊಸ ನೇಮಕವಾಗಿದೆ.  ಹಿರಿಯ ಐಎಎಸ್ ಅಧಿಕಾರಿ , ಹೆಚ್ಚುವರಿ  ಮುಖ್ಯ ಕಾರ್ಯದರ್ಶಿಯಾಗಿದ್ದ ಪಿ ರವಿಕುಮಾರ್ ಅವರನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

ನಿವೃತ್ತಿಯಾದ ವಿಜಯ್ಭಾಸ್ಕರ್‌ಗೆ ಸಿಎಂ ಸನ್ಮಾನ

 1984 ರ ಬ್ಯಾಚ್ ಕರ್ನಾಟಕ ಕೇಡರ್  ಐಎಎಸ್ ಅಧಿಕಾರಿ ರವಿಕುಮಾರ್.  ಒಂದೂವರೆ ವರ್ಷದ ಅವಧಿಗೆ ಅವರ ನೇಮಕವಾಗಿದೆ.

ಪಾವಗಡದ ಸೌರಶಕ್ತಿ ವಿದ್ಯುತ್ ಸ್ಥಾವರ  ಯೋಜನೆ ವೇಳೆ ರವಿಕುಮಾರ್ ಇಂಧನ ಇಲಾಖೆ ಕಾರ್ಯದರ್ಶಿಯಾಗಿದ್ದರು.  ಉತ್ತಮ ಹೆಸರು ಸಂಪಾದನೆ ಮಾಡಿರುವ ರವಿಕುಮಾರ್ ಮೇಲೆ ಕೊರೋನಾ ಸೇರಿದಂತೆ ಹಲವು ಸವಾಲುಗಳು ಇವೆ.