Chamarajanagar: ಕಾಣೆಯಾಗಿದ್ದ ಸ್ವಾಮೀಜಿ ಶವವಾಗಿ ಪತ್ತೆ!
ಸುತ್ತೂರು ಜಾತ್ರೆಗೆ ಹೋಗಿಬರುವುದಾಗಿ ಹೇಳಿ ಹೋಗಿದ್ದ ಪಿಜಿ ಪಾಳ್ಯ ಗ್ರಾಮದ ಹೊಸ ಮಠದ ಸ್ವಾಮೀಜಿ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ಕಾವೇರಿ ನದಿಯಲ್ಲಿ ಸ್ವಾಮೀಜಿಗಳ ಶವ ಪತ್ತೆಯಾಗಿದೆ.
ಕೊಳ್ಳೇಗಾಲ (ಜ.21) : ಪಿಜಿ ಪಾಳ್ಯ ಗ್ರಾಮದ ಹೊಸ ಮಠದ ಸ್ವಾಮೀಜಿ ಶವವು ಕಾವೇರಿ ತೀರದ ವೆಸ್ಲಿ ಸೇತುವೆ ಶುಕ್ರವಾರ ಪತ್ತೆಯಾಗಿದೆ. ಹನೂರು ತಾಲೂಕಿನ ಪಿಜಿ ಪಾಳ್ಯ ಹೊಸ ಮಠದ ರಾಜಶೇಖರ ಸ್ವಾಮೀಜಿ (70) ಮೃತರು. ಶುಕ್ರವಾರ ಕಾವೇರಿ ನದಿ ತೀರದಲ್ಲಿ ಅಪರಿಚಿತ ಮೃತ ದೇಹ ದೊರೆತಿದೆ ಎಂಬ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್‌ಐ ಮಂಜುನಾಥ್ ಭೇಟಿ ನೀಡಿದ್ದು, ಮೃತ ದೇಹವನ್ನು ನೀರಿನಿಂದ ಮೇಲಕ್ಕೆ ಎತ್ತಿಸಿದ್ದಾರೆ.
ಬಳಿಕ ಮೃತರು ಯಾರೆಂದು ವಿಚಾರಣೆ ಮಾಡಿದ್ದು ಪಿಜಿ ಪಾಳ್ಯ ಗ್ರಾಮದ ಹೊಸ ಮಠದ ರಾಜಶೇಖರ ಸ್ವಾಮೀಜಿ ಎಂದು ತಿಳಿದಿದೆ. ಈ ಸಂಬಂಧಪಟ್ಟವರಿಗೆ ಮಾಹಿತಿ ರವಾನಿಸಲಾಗಿದೆ. ನಂತರ ರಾಜಶೇಖರ ಸ್ವಾಮೀಜಿ ಸಹೋದರನಾದ ಪ್ರಕಾಶ್ ಎಂಬುವರು ರಾಜಶೇಖರ ಸ್ವಾಮೀಜಿ ಅನಾರೋಗ್ಯ ಪೀಡಿತರಾಗಿದ್ದರು.
Chamarajangara: ತನಗಾಗದವರು ರಕ್ತಕಾರಿ ಸಾಯಲಿ : ದೇವರ ಹುಂಡಿಯಲ್ಲಿ ವಿಕೃತಿಯ ಹರಕೆ ಪತ್ರ
ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಸ್ವಾಮೀಜಿ:
ಜ.17 ರಂದು ಸುತ್ತೂರು ಜಾತ್ರೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಮತ್ತೆ ಮಠಕ್ಕೆ ಹಿಂತಿರುಗಿಲ್ಲ. ಮೊದಲೇ ಅನಾರೋಗ್ಯಪೀಡಿತರಾಗಿದ್ದ ಸ್ವಾಮೀಜಿ ವಾಪಸ್ ಹಿಂತಿರುಗಿ ಬರದಿರುವುದರಿಂದ ಸ್ವಾಮೀಜಿಯವರಿಗಾಗಿ ಎಲ್ಲ ಕಡೆ ಹುಡುಕಾಡಿದ್ದರೂ ಆದರೂ ಸ್ವಾಮೀಜಿಯ ಪತ್ತೆ ಆಗಿರಲಿಲ್ಲ. ಅಷ್ಟರಲ್ಲಿ ಕಾವೇರಿ ವೆಸ್ಲಿ ಸೇತುವೆಯ ಬಳಿ ಅವರ ಮೃತದೇಹ ಸಿಕ್ಕಿದೆ ಎಂಬ ಮಾಹಿತಿ ತಿಳಿಯಿತು. ಅನಾರೋಗ್ಯವಿದ್ದ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ನೀರಿನಲ್ಲಿ ಮುಳುಗಿರಬಹುದು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ. ಸ್ವಾಮಿಜಿ ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವರಸುದಾರಿಗೆ ಒಪ್ಪಿಸಲಾಯಿತು.
ಹೊಟ್ಟೆ ನೋವೆಂದು ವೈದ್ಯರ ಬಳಿ ಹೋದ ಬಾಲಕ: ಎಕ್ಸ್-ರೇ ರಿಪೋರ್ಟ್ ನೋಡಿ ವೈದ್ಯರೇ ಶಾಕ್..!
ಹೊಟ್ಟೆನೋವು ತಾಳಲಾರದೆ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:
ಭಾರತೀನಗರ: ಇಲ್ಲಿಗೆ ಅರೆಚಾಕನಹಳ್ಳಿಯಲ್ಲಿ ಹೊಟ್ಟೆನೋವು ತಾಳಲಾರದೆ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ. ಗ್ರಾಮದ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕುಮಾರ್ ಹಲವು ದಿನಗಳಿಂದ ತೀವ್ರವಾಗಿ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ವಿಷ ಸೇವಿಸಿ ಅಸ್ಪಸ್ಥಗೊಂಡ ಕುಮಾರ್ ಅವರನ್ನು ತಕ್ಷಣವೇ ಮನೆಯವರು ಕೆ.ಎಂ.ದೊಡ್ಡಿ ಆಸ್ಪತ್ರೆಗೆ ದಾಖಲುಪಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲುಪಡಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಕುಮಾರ್ ಮೃತಪಟ್ಟಿದ್ದಾರೆ. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.