ಕೂಡ್ಲಿಗಿ ಆಸ್ಪತ್ರೆಯ ಕೋವಿಡ್‌ ವಾರ್ಡಿನಲ್ಲಿ ಈಗ 26 ಪಾಸಿಟಿವ್‌ ಪ್ರಕರಣಗಳಿದ್ದು ಆದರಲ್ಲಿ 12 ಕೋವಿಡ್‌ ರೋಗಿಗಳಿಗೆ ಆಕ್ಸಿಜನ್‌ ಟ್ರೀಟ್‌ಮೆಂಟ್‌| ಆಸ್ಪತ್ರೆಗೆ ಹೆಚ್ಚುವರಿ ಸಿಬ್ಬಂದಿ ಅವಶ್ಯಕವಾಗಿದ್ದು ಸದ್ಯದಲ್ಲೇ ಈ ಸಿಬ್ಬಂದಿ ನೇಮಕದ ಬಗ್ಗೆ ತಾಲೂಕು ಆಡಳಿತ ಕ್ರಮ ತೆಗೆದುಕೊಳ್ಳುವ ಭರವಸೆ| 

ಕೂಡ್ಲಿಗಿ(ಮೇ.03): ತಾಲೂಕಿನಲ್ಲಿ ಕೋವಿಡ್‌ ಪಾಸಿಟಿವ್‌ ಹೆಚ್ಚಾಗುತ್ತಿರುವದ ಹಿನ್ನೆಲೆಯಲ್ಲಿ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮುಂಜಾಗ್ರತೆಯಾಗಿ ಕೋವಿಡ್‌ ಬೆಡ್‌ಗಳನ್ನು 21 ರಿಂದ 32ಕ್ಕೆ ಹೆಚ್ಚಿಸಲಾಗಿದೆ. ಆಕ್ಸಿಜನ್‌ ಯೂನಿಟ್‌ ತಯಾರಿಕಾ ಘಟಕ ಪ್ರಾರಂಭಿಸಲು ಆಸ್ಪತ್ರೆ ಆವರಣದಲ್ಲಿ ಸ್ಥಳ ಪರಿಶೀಲನೆ ಮಾಡಿದ್ದು ಸದ್ಯದಲ್ಲೇ ಆರಂಭವಾಗಲಿದೆ ಎಂದು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ವಿನಯ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ 21 ಕೋವಿಡ್‌ ಬೆಡ್‌ ನಿರ್ಮಿಸಲಾಗಿತ್ತು. ಎರಡನೇ ಅಲೆ ಹೆಚ್ಚಾದ ಪರಿಣಾಮ ಶಾಸಕ ಎನ್‌.ವೈ. ಗೋಪಾಲಕೃಷ್ಣ, ತಹಸೀಲ್ದಾರ್‌ ಮಹಾಬಲೇಶ್ವರ ಹಾಗೂ ತಾಲೂಕು ವೈದ್ಯಾಧಿಕಾರಿಗಳ ಕಾಳಜಿಯಿಂದ ಕೋವಿಡ್‌ ಬೆಡ್‌ ಹೆಚ್ಚಿಸಲಾಗಿದೆ. ತಾಲೂಕಿನ ಕೊರೋನಾ ರೋಗಿಗಳಿಗೆ ತೊಂದರೆಯಾಗದಂತೆ ಈ ಹಿಂದೆ ಇದ್ದ ಜನರಲ್‌ ರೋಗಿಗಳಿಗೆ ಬಳಸಲಾಗುತ್ತಿದ್ದ ವಾರ್ಡ್‌ನ್ನು ಕೋವಿಡ್‌ ವಾರ್ಡ್‌ಗೆ ಬಳಸಿಕೊಂಡು ಮೇಲ್ಮಹಡಿಯಲ್ಲಿ ಜನರಲ್‌ ವಾರ್ಡ್‌ ತೆಗೆದಿರುವುದಾಗಿ ತಿಳಿಸಿದರು.

"

ಮದುವೆಯ ಮರುದಿನವೇ ಮದುಮಗನ ಬಲಿಪಡೆದ ಮಹಾಮಾರಿ!

ಕೋವಿಡ್‌ ವಾರ್ಡ್‌ನ 32 ನಾರ್ಮಲ್‌ ಬೆಡ್‌ನಲ್ಲಿ 7 ಐಸಿಯು, 6 ವೆಂಟಿಲೇಟರ್‌ ಬೆಡ್‌ಗಳಿವೆ, ಕೂಡ್ಲಿಗಿ ಆಸ್ಪತ್ರೆಯ ಕೋವಿಡ್‌ ವಾರ್ಡಿನಲ್ಲಿ ಈಗ 26 ಪಾಸಿಟಿವ್‌ ಪ್ರಕರಣಗಳಿದ್ದು ಆದರಲ್ಲಿ 12 ಕೋವಿಡ್‌ ರೋಗಿಗಳು ಆಕ್ಸಿಜನ್‌ ಟ್ರೀಟ್‌ಮೆಂಟ್‌ ತೆಗೆದುಕೊಳ್ಳುತ್ತಿದ್ದರೆ. ಆಸ್ಪತ್ರೆಗೆ ಹೆಚ್ಚುವರಿ ಸಿಬ್ಬಂದಿ ಅವಶ್ಯಕವಾಗಿದ್ದು ಸದ್ಯದಲ್ಲೇ ಈ ಸಿಬ್ಬಂದಿ ನೇಮಕದ ಬಗ್ಗೆ ತಾಲೂಕು ಆಡಳಿತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona