Asianet Suvarna News Asianet Suvarna News

ಶಾಸಕರೇ ಹೇಳಿದ್ರೂ ಸಿಗುತ್ತಿಲ್ಲ ಬೆಡ್‌! ಹ್ಯಾರೀಸ್‌ ಮನವಿ ಮಾಡಿದ್ರೂ ಇಲ್ಲ

ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್‌ ಸಿಗದ ಪ್ರಕರಣ ಸಂಖ್ಯೆಯೂ ಹೆಚ್ಚಾಗುತ್ತಿವೆ. ಸ್ವತಃ ಶಾಸಕರೇ ಮನವಿ ಮಾಡಿದರೂ ಬೆಡ್‌ ವ್ಯವಸ್ಥೆ ಮಾಡಲಾಗದ ಅಸಹಾಯಕ ಸ್ಥಿತಿಗೆ ಅಧಿಕಾರಿಗಳು ಜಾರಿದ್ದಾರೆ.

Oxygen bed scarcity in bengaluru For covid patients snr
Author
Bengaluru, First Published Apr 20, 2021, 7:53 AM IST

ಬೆಂಗಳೂರು (ಏ.20):  ನಗರದಲ್ಲಿ ದಿನ ಕಳೆದಂತೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್‌ ಸಿಗದ ಪ್ರಕರಣ ಸಂಖ್ಯೆಯೂ ಹೆಚ್ಚಾಗುತ್ತಿವೆ. ಸ್ವತಃ ಶಾಸಕರೇ ಮನವಿ ಮಾಡಿದರೂ ಬೆಡ್‌ ವ್ಯವಸ್ಥೆ ಮಾಡಲಾಗದ ಅಸಹಾಯಕ ಸ್ಥಿತಿಗೆ ಅಧಿಕಾರಿಗಳು ಜಾರಿದ್ದಾರೆ.

ಹೌದು, ಬೆಂಗಳೂರು ಪೂರ್ವ ವಲಯದಲ್ಲಿ ಕೊರೋನಾ ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ಬೆಡ್‌, ಐಸಿಯು, ಆಕ್ಸಿಜನ್‌ ವ್ಯವಸ್ಥೆ ಮಾಡಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಾಟ್ಸಾಪ್‌ ಗ್ರೂಪ್‌ ಇದೆ.

ಕಾಲಿಗೆ ಬಿದ್ದರೂ ಬೆಡ್‌ ಕೊಡಲಿಲ್ಲ! ಸೋಂಕಿತ ಮಹಿಳೆ ಸಾವು .

ಈ ಗ್ರೂಪ್‌ನಲ್ಲಿ ಶಾಂತಿನಗರ ಶಾಸಕ ಎನ್‌.ಎ.ಹ್ಯಾರಿಸ್‌ ಅವರು ಬೆಡ್‌ಗಾಗಿ ಭಾನುವಾರ ಮಧ್ಯಾಹ್ನ ಮನವಿ ಮಾಡಿದ್ದರು. ಹಿರಿಯ ಅಧಿಕಾರಿಯೊಬ್ಬರು ಇಂದಿರಾನಗರ ಇಎಸ್‌ಐ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು. ಇದಾದ ಮೂರು ಗಂಟೆ ಬಳಿಕವೂ ಬೆಡ್‌ ವ್ಯವಸ್ಥೆ ಆಗಿಲ್ಲ. ತೀವ್ರ ಪ್ರಯತ್ನದ ನಂತರವೂ ಶಾಸಕರು ಸೂಚಿಸಿದವರಿಗೆ ಬೆಡ್‌ ದೊರೆಯಲೇ ಇಲ್ಲ. ಇದರಿಂದ ಬೇಸತ್ತ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

Follow Us:
Download App:
  • android
  • ios