Asianet Suvarna News Asianet Suvarna News

ಕೆಇಎ ಪರೀಕ್ಷಾ ಅಕ್ರಮ: ಆರ್‌ಡಿಪಿಗೆ ಫ್ಲಾಟ್‌ ಬಾಡಿಗೆ ಕೊಟ್ಟ ಅಪಾರ್ಟ್‌ಮೆಂಟ್‌ ಮಾಲೀಕ ಸೇರಿ ಹಲವರ ಬಂಧನ

ಕಿಂಗ್‌ಪಿಎನ್‌ ಆರ್‌ಡಿ ಪಾಟೀಲ್‌ ಪರೀಕ್ಷೆಗಳಲ್ಲಿ ಹಗರಣ ಮಾಡಿರುವ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದರೂ ಅದ್ಯಾವುದಕ್ಕೂ ಗಮನ ಹರಿಸದೆ ಆತನ ಪೂರ್ವಾಪರಗಳನ್ನು ಅರಿಯದೆ ಮನೆಯನ್ನು ಬಾಡಿಗೆ ಕೊಟ್ಟ ಆರೋಪದ ಮೇಲೆ ಇವರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Owner of the Apartment who Rented the Flat to the RD Patil in Kalaburagi grg
Author
First Published Nov 11, 2023, 6:30 AM IST

ಕಲಬುರಗಿ(ನ.11): ಕೆಇಎ ನೇಮಕಾತಿ ಪರೀಕ್ಷೆಯಲ್ಲಿ ನಡೆದಂತಹ ಅಕ್ರಮದ ಕಿಂಗ್‌ಪಿನ್‌ ಆರ್‌.ಡಿ. ಪಾಟೀಲನಿಗೆ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್‌ ಬಾಡಿಗೆ ನೀಡಿರುವ ಆರೋಪದ ಮೇಲೆ ಪೊಲೀಸರು ಮಾಲೀಕ ಶಂಕರಗೌಡ ರಾಮಚಂದ್ರ ಯಾಳವಾರ್‌, ಅಲ್ಲಿನ ಮ್ಯಾನೆಜರ್‌ ಹಾಗೂ ಸೆಕ್ಯೂರಿಟಿ ನೋಡಿಕೊಳ್ಳುತ್ತಿದ್ದ ಉಸ್ತುವಾರಿ ಶಹಾಬಾದ್‌ ಮೂಲದ ಜದಿಲೀಪ್‌ ಪವಾರ್‌ ಎಂಬುವವರನ್ನು ಅಫಜಲ್ಪುರ ಪೊಲೀಸರು ವಿಚಾರಣೆಗೆಂದು ವಶಕ್ಕೆ ಪಡೆದಿದ್ದಾರೆ.

ಕಿಂಗ್‌ಪಿನ್‌ ಆರ್‌ಡಿ ಪಾಟೀಲ್‌ ಪರೀಕ್ಷೆಗಳಲ್ಲಿ ಹಗರಣ ಮಾಡಿರುವ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದರೂ ಅದ್ಯಾವುದಕ್ಕೂ ಗಮನ ಹರಿಸದೆ ಆತನ ಪೂರ್ವಾಪರಗಳನ್ನು ಅರಿಯದೆ ಮನೆಯನ್ನು ಬಾಡಿಗೆ ಕೊಟ್ಟ ಆರೋಪದ ಮೇಲೆ ಇವರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೆಇಎ ಪರೀಕ್ಷಾ ಅಕ್ರಮ: ಮೊಬೈಲ್‌ ಬದಲಿಸುತ್ತ ಯಾಮಾರಿಸುತ್ತಿರುವ ಕಿಂಗ್‌ಪಿನ್‌ ಆರ್‌.ಡಿ.ಪಾಟೀಲ್‌

ನೇಮಕಾತಿ ಪರೀಕ್ಷೆಯಲ್ಲಿನ ಹಗರಣದ ಬಗ್ಗೆ ಇಷ್ಟೆಲ್ಲಾ ಸುದ್ದಿಯಾಗುತ್ತಿದ್ದರೂ ಅದ್ಯಾವುದನ್ನು ಗಮನಿಸದೆ, ಕಿಂಗ್‌ಪಿನ್‌ ತಲೆಮರೆಸಿಕೊಳ್ಳಲು, ಅಲ್ಲಿಂದ ಪರಾರಿಯಾಗಲು ಸಹಕರಿಸಿದ್ದೀರಿ ಎಂಬ ಆರೋಪವನ್ನು ಪೊಲೀಸರು ಇವರಿಬ್ಬರ ಮೇಲೆ ಹೊರಿಸಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಲಬುರಗಿಯ ಅಶೋಕ ನಗರ ಪೊಲೀಸರು ಆರ್‌ಡಿ ಪಾಟೀಲ್‌ ಕಲಬುರಗಿಯಿಂದ ತಪ್ಪಿಸಿಕೊಂಡು ನೆಲೋಗಿಯಲ್ಲಿ ಅಡಗಲು ಸಹಕರಿಸಿದ್ದ ಅಲ್ಲಿನ ಗುತ್ತೇದಾರ್‌ ಶಿವರಾಜ್‌ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

Follow Us:
Download App:
  • android
  • ios