ಇಳಿದ ವರುಣನ ಆರ್ಭಟ, ಕೆಆರ್‌ಎಸ್‌ನಲ್ಲಿ ಇಳಿದ ನೀರು

https://static.asianetnews.com/images/authors/6f8849cd-9048-5bda-bb9d-ff23f95aa5cb.jpg
First Published 21, Aug 2018, 4:46 PM IST
Out flow in KRS reduced as rain gets break
Highlights

ಕುಂಭದ್ರೋಣ ಮಳೆಗೆ ಆದ ಅನಾಹುತ ಅಷ್ಟಿಷ್ಟಲ್ಲ. ದಕ್ಷಿಣ ಕಾಶಿ ಕೊಡಗು ಬಹುತೇಕ ಜಖಂಗೊಂಡಿದೆ. ಮತ್ತೆ ಮುಂಚಿನ ಪರಿಸ್ಥಿತಿಗೆ ಬರಲು ಎಷ್ಟು ದಿನಗಳು ಬೇಕೋ. ಎಡಬಿಡದೇ ಸುರಿದ ಮಳೆ ಇದೀಗ ತುಸು ನಿಂತಿದ್ದು, ಕೃಷ್ಣರಾಜ ಸಾಗರದಲ್ಲಿಯೂ ಒಳ ಹರಿವು ಕಡಿಮೆಯಾಗಿದೆ.

ಮಂಡ್ಯ: ಕಳೆದೆರಡು ವಾರಗಳಿಂದ ಎಡಬಿಡದೇ ಆರ್ಭಟಿಸುತ್ತಿದ್ದ ವರುಣ, ತುಸು ತಣ್ಣಗಾಗಿದ್ದಾನೆ. ಜನಜೀವನವೂ ಸಹಜ ಸ್ಥಿತಿಯತ್ತ ಮರಳುತ್ತಿದೆ. ಕೃಷ್ಣ ರಾಜ ಸಾಗರದಲ್ಲಿ ಹೊರ ಹರಿವಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿದೆ.

ಕೊಡಗು ಜಿಲ್ಲೆಯಲ್ಲಿ ಮಳೆ ಪ್ರಮಾಣ ತಗ್ಗಿದ್ದು, ಕೆಆರ್‌ಎಸ್ ಜಲಾಶಯದಿಂದ ಕೇವಲ 11 ಸಾವಿರ ಕ್ಯೂಸೆಕ್ ನೀರನ್ನು ಮಾತ್ರ ಹೊರ ಬಿಡಲಾಗುತ್ತಿದೆ. ಜಲಾಶಯದ ಐದು ಗೇಟ್‌ಗಳನ್ನು ತೆಗೆಯಲಾಗಿದೆ.

2500 ಕ್ಯೂಸೆಕ್ ನೀರನ್ನು ನಾಲೆಗೆ ಬಿಡುತ್ತಿದ್ದು, 8,500 ಕ್ಯೂಸೆಕ್ ನೀರನ್ನು ನದಿ ಮೂಲಕ ತಮಿಳುನಾಡಿಗೆ ಬಿಡಲಾಗುತ್ತಿದೆ. ಕಾವೇರಿ ನದಿ ಪಾತ್ರದ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, 70 ಗೇಟ್‌ಗಳ ಮೂಲಕ 1 ಲಕ್ಷದ 30 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿತ್ತು. 

ಮಂಡ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

loader