ಶಿವಮೊಗ್ಗದಲ್ಲಿ ವ್ಯಾಕ್ಸಿನ್ ಕೊರತೆ : ಸೆಕೆಂಡ್ ಡೋಸ್‌ಗೆ ಆದ್ಯತೆ
- ಕೊರೊನಾ ವಾಕ್ಸಿನೇಷನ್ ಎರಡನೇ ಡೋಸ್ ಲಸಿಕೆ ಕೊರತೆ
- ಹೊಸದಾಗಿ ಮೊದಲನೇ ಡೋಸ್ ಹಾಕುವುದಿಲ್ಲ ಎಂದ ಸಚಿವ ಈಶ್ವರಪ್ಪ
- ಹೊಸದಾಗಿ ಮೊದಲನೇ ಡೋಸ್ ಹಾಕುವುದಿಲ್ಲ ಎಂದು ಸಚಿವ ಈಶ್ವರಪ್ಪ
ಶಿವಮೊಗ್ಗ (ಮೇ.13): ಕೊರೊನಾ ವಾಕ್ಸಿನೇಷನ್ ಎರಡನೇ ಡೋಸ್ ಲಸಿಕೆ ಕೊರತೆ ಹಿನ್ನೆಲೆಯಲ್ಲಿ ಹೊಸದಾಗಿ ಮೊದಲನೇ ಡೋಸ್ ಹಾಕುವುದಿಲ್ಲ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿಂದು ಮಾತನಾಡಿದ ಈಶ್ವರಪ್ಪ ಹೈ ಕೋರ್ಟ್ ಗೆ ರಾಜ್ಯ ಸರ್ಕಾರದ ಕಾರ್ಯದರ್ಶಿ ರವಿ ಕುಮಾರ್ ಕೂಡ ನಮ್ಮಲ್ಲಿ ವಾಕ್ಸಿನೇಷನ್ ಸ್ಟಾಕ್ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಪ್ರಸ್ತುತ ಮೊದಲ ಡೋಸ್ ಪಡೆದವರಿಗೆ ಮಾತ್ರ ವಾಕ್ಸಿನೇಷನ್ ನಮ್ಮ ಆದ್ಯತೆ ಎಂದರು.
ಜಿಲ್ಲೆಯಲ್ಲಿ ಕೋವಿಡ್ ಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ 776 ಬೆಡ್ ಗಳನ್ನು , ಖಾಸಗಿ ಆಸ್ಪತ್ರೆಗಳಲ್ಲಿ 999 ಬೆಡ್ ಗಳನ್ನು , ಒಟ್ಟು 1775 ಬೆಡ್ ಗಳನ್ನು ಕಾಯ್ದಿರಿಸಲಾಗಿದೆ . ಇದರಲ್ಲಿ 216 ICU ಬೆಡ್ ಗಳಿದ್ದು , 964 ಆಕ್ಸಿಜನ್ ಬೆಡ್ ಗಳಿವೆ. ಜಿಲ್ಲೆಯಲ್ಲಿ ಎಲ್ಲಾ ತಾಲೂಕು ಕೇಂದ್ರಗಳಲ್ಲಿ COVID CARE CENTRE ಗಳನ್ನು ಗುರುತಿಸಲಾಗಿದೆ. ಪ್ರಸ್ತುತ ಶಿವಮೊಗ್ಗ , ಶಿಕಾರಿಪುರ , ಸಾಗರದಲ್ಲಿ ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಕೋವಿಡ್ ಕೇರ್ ಕೇಂದ್ರ [ Ccc] ಗಳು ಕಾರ್ಯನಿರ್ವಹಿಸುತ್ತಿವೆ ಎಂದರು .
ಏರುತ್ತಿರುವ ಕೊರೋನಾ : ವಾರದಲ್ಲಿ 4 ದಿನ ಶಿವಮೊಗ್ಗ ಸಂಪೂರ್ಣ ಬಂದ್
ಕೋವಿಡ ಲಸಿಕೆ ಜಿಲ್ಲೆಗೆ ಕೋವಿಶೀಲ್ಡ್ - 2,69,600 ಡೋಸ್ ಗಳು ಕೋವಾಕ್ಸಿನ್ - 20,460 ಡೋಸ್ ಗಳು ಬಂದಿದೆ. ಇದರಲ್ಲಿ ಕೋವಿಶೀಲ್ಡ್ - 2,67,060 ಡೋಸ್ ನೀಡಲಾಗಿದ್ದು , ಉಳಿಕೆ 2,540 ಇದೆ. ಕೋವಾಕ್ಸಿನ್ 20,460 ಡೋಸ್ ನೀಡಲಾಗಿದೆ. ಆದರೆ ಇದರಲ್ಲಿ ಉಳಿದಿಲ್ಲ ಎಂದರು.
ವ್ಯಾಕ್ಸಿನ್ ಕೊರತೆ : ಶಿವಮೊಗ್ಗದಲ್ಲಿ ಸದ್ಯ ಕೋವ್ಯಾಕ್ಸಿನ್ ಕೊರತೆ ಉಂಟಾಗಿದ್ದು ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಸಿಗುತ್ತಿಲ್ಲ. ಕೋವಾಕ್ಸಿನ್ ಮೊದಲ ಡೋಸ್ ಪಡೆದ 28 ದಿನಗಳ ನಂತರ ಎರಡನೇ ಡೋಸ್ ಪಡೆಯುವಂತೆ ಸೂಚಿಸಲಾಗಿತ್ತು. ಆದರೆ ಮೊದಲ ಡೋಸ್ ಪಡೆದು 43 ದಿನಗಳೇ ಕಳೆದರೂ ಎರಡನೇ ಡೋಸ್ ಸಿಗದೆ ಪರದಾಡಿವಂತಾಗಿದೆ.
ಶಿವಮೊಗ್ಗ : ಗುಣಮುಖರಾದ್ರೂ ಆಸ್ಪತ್ರೆಯಿಂದ ಮನೆಗೆ ಹೋಗುತ್ತಿಲ್ಲ ರೋಗಿಗಳು
ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಾತ್ರ ಕೋವಾಕ್ಸಿನ್ ಕೊಡಲಾಗುತ್ತಿದೆ. ಇದೀಗ ಮೆಗ್ಗಾನ್ ಅಸ್ಪತ್ರೆ ಗೆ ಮೊದಲ ಡೋಸ್ ಪಡೆದ ವಯೋವೃದ್ದರು ಲಸಿಕೆಗಾಗಿ ಅಲೆದಾಡುತ್ತಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona