Asianet Suvarna News Asianet Suvarna News

ಬಸ್‌ ಪಥದಲ್ಲಿ ಬೇರೆ ವಾಹನ ನಿಷೇಧ : ಚಲಿಸಿದ್ರೆ ಭಾರೀ ದಂಡ

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಸುಗಳಿಗಾಗಿ ನಿರ್ಮಿಸಲಾದ ಪಥದಲ್ಲಿ ಬೇರೆ ವಾಹನಗಳ ನಿಷೇಧಿಸಲಾಗಿದೆ. ಒಂದು ವೇಳೆ ಸಂಚರಿಸಿದಲ್ಲಿ ಭಾರೀ ದಂಡ ಹಾಕಲಾಗುತ್ತದೆ. 

Other Vehicle Strictly Ban in BMTC Lane
Author
Bengaluru, First Published Nov 16, 2019, 8:45 AM IST

ಬೆಂಗಳೂರು [ನ.16]:  ಬಿಎಂಟಿಸಿ ಬಸ್‌ಗಳ ಸುಗಮ ಸಂಚಾರಕ್ಕೆ ಅನುವಾಗುವಂತೆ ಕೆ.ಆರ್‌.ಪುರಂನ ಟಿನ್‌ ಫ್ಯಾಕ್ಟರಿ-ಸೆಂಟ್ರಲ್‌ ಸಿಲ್‌್ಕ ಬೋರ್ಡ್‌ವರೆಗೆ ನಿರ್ಮಿಸಿರುವ ಪ್ರತ್ಯೇಕ ಬಸ್‌ ಪಥದಲ್ಲಿ ಶುಕ್ರವಾರದಿಂದ ಅನ್ವಯವಾಗುವಂತೆ ಎಲ್ಲ ಮಾದರಿಯ ವಾಹನಗಳ ಸಂಚಾರ ಹಾಗೂ ನಿಲುಗಡೆ ನಿಷೇಧಿಸಿ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಆದೇಶ ಹೊರಡಿಸಿದ್ದಾರೆ.

ಈ ಪ್ರತ್ಯೇಕ ಪಥ ಕೆ.ಆರ್‌.ಪುರಂ, ಎಚ್‌ಎಎಲ್‌ ಏರ್‌ಪೋರ್ಟ್‌ ಹಾಗೂ ಎಚ್‌ಎಸ್‌ಆರ್‌ ಲೇಔಟ್‌, ಮಡಿವಾಳ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಹಾದು ಹೋಗುವುದರಿಂದ ಸದರಿ ಸಂಚಾರ ಮಾರ್ಗದಲ್ಲಿ ವಾಹಗಳ ಸಂಚಾರ ಬದಲಾವಣೆ, ಏಕಮುಖ ಸಂಚಾರ ಸೇರಿದಂತೆ ಹಲವು ಬದಲಾವಣೆಗಳನ್ನು ಮಾಡಿ ಆದೇಶಿಸಿದ್ದಾರೆ. ಪ್ರತ್ಯೇಕ ಬಸ್‌ ಪಥದಲ್ಲಿ ಬಿಎಂಟಿಸಿ ಬಸ್‌ಗಳು, ತುರ್ತು ಸೇವಾ ವಾಹನಗಳು, ಆ್ಯಂಬುಲೆನ್ಸ್‌ ಮತ್ತು ಅಗ್ನಿ ಶಾಮಕ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಏಕಮುಖ ಸಂಚಾರ

*ಮಾರತಹಳ್ಳಿ ಸೇತುವೆಯಿಂದ ಎಚ್‌.ಡಿ.ಎಫ್‌.ಸಿ ಹೋಮ್‌ಲೋನ್‌ ಕಟ್ಟಡದವರೆಗಿನ ಸವೀರ್‍ಸ್‌ ರಸ್ತೆಯಲ್ಲಿ ದಕ್ಷಿಣದಿಂದ ಉತ್ತರ ದಿಕ್ಕಿಗೆ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದು, ವಿರುದ್ಧ ದಿಕ್ಕಿನ ಸಂಚಾರ ನಿಷೇಧಿಸಲಾಗಿದೆ. ಹಾಗೆಯೇ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವವರು ಎಚ್‌ಡಿಎಫ್‌ಸಿ ಕಟ್ಟಡದ ಮುಂಭಾಗದ ಮುಖ್ಯರಸ್ತೆ ಮತ್ತು ಸರ್ವೀಸ್ ರಸ್ತೆಗೆ ಹೊಂದಿಕೊಂಡಿರುವ ರಸ್ತೆಯಲ್ಲಿ ಯೂಟರ್ನ್‌ ಪಡೆದು ಮಾರತಹಳ್ಳಿ ಸೇತುವೆ ಕಡೆಗೆ ಸಾಗಬೇಕು.

*ಈ ಝೋನ್‌ ಕ್ಲಬ್‌ನಿಂದ ಮಾರತ್ತಹಳ್ಳಿ ಸೇತುವೆ ವರೆಗೆ ಉತ್ತರದಿಂದ ದಕ್ಷಿಣ ದಿಕ್ಕಿಗೆ ಮಾತ್ರ ವಾಹನಗಳ ಸಂಚರಿಸಬೇಕು.

*ಈ ಝೋನ್‌ ಕ್ಲಬ್‌ನಿಂದ ಜೀವಿಕಾ ಆಸ್ಪತ್ರೆವರೆಗೆ ಉತ್ತರದಿಂದ ದಕ್ಷಿಣ ದಿಕ್ಕಿಗೆ ಮಾತ್ರ ಸಂಚರಿಸಲು ಅವಕಾಶವಿದೆ.

*ಮಾರತ್ತಹಳ್ಳಿ ಸೇತುವೆಯಿಂದ ಕಾಡುಬೀಸನಹಳ್ಳಿ ಜಂಕ್ಷನ್‌ವರೆಗೆ ಸರ್ವೀಸ್‌ ರಸ್ತೆಯ ಮಾರ್ಗದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಸಂಚರಿಸಲು ಮಾತ್ರ ಅವಕಾಶ.

*ಕಾಡುಬೀಸನಹಳ್ಳಿ ಜಂಕ್ಷನ್‌ನಿಂದ ದೇವರಬೀಸನಹಳ್ಳಿ ಜಂಕ್ಷನ್‌ವರೆಗೆ ಉತ್ತರದಿಂದ ದಕ್ಷಿಣ ದಿಕ್ಕಿನ ಸವೀರ್‍ಸ್‌ ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದು ವಿರುದ್ಧ ದಿಕ್ಕಿನ ಸಂಚಾರವನ್ನು ನಿಷೇಧಿಸಲಾಗಿದೆ.

*ದೇವರಬೀಸನಹಳ್ಳಿ ಜಂಕ್ಷನ್‌ನಿಂದ ಕಾಡುಬೀಸನಹಳ್ಳಿ ಜಂಕ್ಷನ್‌ವರೆಗೆ ದಕ್ಷಿಣದಿಂದ ಉತ್ತರಕ್ಕೆ ಸಂಚರಿಸಬಹುದು.

*ಕಾಡುಬೀಸನಹಳ್ಳಿ ಜಂಕ್ಷನ್‌ನಿಂದ ಮಾರತಹಳ್ಳಿ ಸೇತುವೆವರೆಗೆ ಸವೀರ್‍ಸ್‌ ರಸ್ತೆ ಮಾರ್ಗದಲ್ಲಿ ದಕ್ಷಿಣದಿಂದ ಉತ್ತರಕ್ಕೆ ಮಾತ್ರ ಅವಕಾಶವಿದ್ದು ವಿರುದ್ಧ ದಿಕ್ಕಿನ ಸಂಚಾರ ನಿಷೇಧಿಸಲಾಗಿದೆ.

*ಸಿಲ್ಕ್ ಬೋರ್ಡ್‌ ಬಸ್‌ ನಿಲ್ದಾಣದಿಂದ 14ನೇ ಮುಖ್ಯರಸ್ತೆ ಜಂಕ್ಷನ್‌ವರೆಗೆ ಪಶ್ಚಿಮದಿಂದ ಪೂರ್ವಕ್ಕೆ ಸಾಗುವ ಸಂಚಾರವನ್ನು ನಿಷೇಧಿಸಿ ಪೂರ್ವದಿಂದ ಪಶ್ಚಿಮಕ್ಕೆ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

*14ನೇ ಮುಖ್ಯರಸ್ತೆ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್‌ ಜಂಕ್ಷನ್‌ ಕಡೆಗೆ ಪಶ್ಚಿಮದಿಂದ ಪೂರ್ವಕ್ಕೆ ಮಾತ್ರ ವಾಹನಗಳು ಸಂಚರಿಸಬಹುದಾಗಿದೆ.

*14ನೇ ಮುಖ್ಯ ರಸ್ತೆ ಜಂಕ್ಷನ್‌ನಿಂದ ಅಗರ ಜಂಕ್ಷನ್‌ವರೆಗೆ ಪಶ್ಚಿಮದಿಂದ ಪೂರ್ವಕ್ಕೆ ಸಾವುದನ್ನು ನಿಷೇಧಿಸಿ ವಿರುದ್ಧ ದಿಕ್ಕಿನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

*ಅಗರ ಜಂಕ್ಷನ್‌ನಿಂದ ಇಬ್ಬಲೂರು ಬಸ್‌ ನಿಲ್ದಾಣವರೆಗೆ ಪಶ್ಚಿಮದಿಂದ ಪೂರ್ವಕ್ಕೆ ಸಂಚರಿಸಲು ಅವಕಾಶವಿಲ್ಲ. ವಿರುದ್ಧ ದಿಕ್ಕಿನ ಸಂಚಾರಕ್ಕೆ ಮಾತ್ರ ಅವಕಾಶ.

*ಇಬ್ಬಲೂರು ಜಂಕ್ಷನ್‌ನಿಂದ ಅಗರ ಜಂಕ್ಷನ್‌ವರೆಗೆ ಪಶ್ಚಿಮದಿಂದ ಪೂರ್ವಕ್ಕೆ ಮಾತ್ರ ಸಂಚಾರಕ್ಕೆ ಅವಕಾಶ.

*ಇಬ್ಬಲೂರು ಲೇಕ್‌ನಿಂದ ಇಕೋಸ್ಪೇಸ್‌ ಫ್ಲೈಓವರ್‌ ಆಪ್‌ರಾರ‍ಯಂಪ್‌ವರೆಗೆ ದಕ್ಷಿಣದಿಂದ ಉತ್ತರಕ್ಕೆ ಸಾಗುವ ಸಂಚಾರವನ್ನು ನಿಷೇಧಿಸಿದ್ದು, ವಿರುದ್ಧ ದಿಕ್ಕಿನ ಸಂಚಾರಕ್ಕೆ ಅವಕಾಶವಿದೆ.

*ಇಕೋಸ್ಪೇಸ್‌ ಜಂಕ್ಷನ್‌ನಿಂದ ಇಬ್ಬಲೂರು ಜಂಕ್ಷನ್‌ವರೆಗೆ ದಕ್ಷಿಣದಿಂದ ಉತ್ತರಕ್ಕೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

* ಸಿಲ್ಕ್ ಬೋರ್ಡ್‌ ಜಂಕ್ಷನ್‌ನಿಂದ ಆಗರ ಕಡೆಗೆ ಸರ್ವಿಸ್‌ ರಸ್ತೆಯಲ್ಲಿ 13ನೇ ಮೈನ್‌ವರೆಗೆ ಪಶ್ಚಿಮದಿಂದ ಪೂರ್ವದ ಕಡೆಗೆ ಸಾಗುವ ಸಂಚಾರವನ್ನು ಯಥಾ ಸ್ಥಿತಿಯಲ್ಲಿ ಉಳಿಸಿಕೊಂಡು ವಿರುದ್ಧ ದಿಕ್ಕಿನ ಸಂಚಾರ ಅಂದರೆ ಅಗರ ಕಡೆಯಿಂದ ಸಿಲ್‌್ಕಬೋರ್ಡ್‌ ಕಡೆಗೆ ಸವೀರ್‍ಸ್‌ ರಸ್ತೆಯ ಸಂಚಾರ ನಿಷೇಧಿಸಲಾಗಿದೆ.

835 ಬಸ್‌ ಸಂಚಾರ

ಕೆ.ಆರ್‌.ಪುರಂನ ಟಿನ್‌ ಫ್ಯಾಕ್ಟರಿ- ಸೆಂಟ್ರಲ್‌ ಸಿಲ್‌್ಕ ಬೋರ್ಡ್‌ವರೆಗಿನ ಪ್ರತ್ಯೇಕ ಬಸ್‌ ಪಥದಲ್ಲಿ ಅ.20ರಿಂದಲೇ ಬಿಎಂಟಿಸಿ ಪರೀಕ್ಷಾರ್ಥ ಬಸ್‌ ಕಾರ್ಯಾಚರಣೆ ಮಾಡುತ್ತಿದೆ. ಈಗ ನಗರ ಪೊಲೀಸ್‌ ಆಯುಕ್ತರು ಸದರಿ ಮಾರ್ಗದಲ್ಲಿ ಇತರೆ ವಾಹನಗಳು ಪ್ರತ್ಯೇಕ ಪಥ ಬಳಕೆ ನಿಷೇಧಿಸಿ ಆದೇಶಿಸಿದ್ದಾರೆ. ಇದರಿಂದ ಬಸ್‌ ಸಂಚಾರ ಸುಗಮವಾಗಲಿದೆ. ಪ್ರತಿ ದಿನ ಈ ಮಾರ್ಗದಲ್ಲಿ 835 ಬಸ್‌ಗಳು ಸಂಚರಿಸುತ್ತಿವೆ. ಈ ಬಸ್‌ಗಳಿಗೆ ‘ನಿಮ್ಮ ಬಸ್‌’ ಎಂಬ ಸ್ಟಿಕ್ಕರ್‌ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಈ ಬಸ್‌ಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುವುದು. ಈಗಾಗಲೇ ಪ್ರತ್ಯೇಕ ಪಥ ಬಳಕೆ ಸಂಬಂಧ ಸಂಚಾರ ಪೊಲೀಸರು, ನಿಗಮದ ಸಿಬ್ಬಂದಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ನಿರತರಾಗಿದ್ದಾರೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರತ್ಯೇಕ ಪಥದಲ್ಲಿ ಸಂಚರಿಸಿದರೆ ದಂಡ

ಪ್ರತ್ಯೇಕ ಬಸ್‌ ಪಥದಲ್ಲಿ ಸಂಚರಿಸುವ ಇತರೆ ವಾಹನಗಳಿಗೆ ಮೋಟಾರ್‌ ಕಾಯ್ದೆ ಪ್ರಕಾರ ಮೊದಲ ಬಾರಿಗೆ 500 ಹಾಗೂ ಎರಡನೇ ಬಾರಿಗೆ 1 ಸಾವಿರ ರು. ದಂಡ ವಿಧಿಸಲಾಗುತ್ತಿದೆ. ಈ ದಂಡದ ಮೊತ್ತವನ್ನು ಹೆಚ್ಚಿಸುವಂತೆ ಸಹ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.

-ಡಾ.ಬಿ.ಆರ್‌.ರವಿಕಾಂತೇಗೌಡ, ಜಂಟಿ ಆಯುಕ್ತ (ಸಂಚಾರ), ಬೆಂಗಳೂರು ನಗರ.

Follow Us:
Download App:
  • android
  • ios