Ramanagara: ಪಾಲನಹಳ್ಳಿ ಮಠಕ್ಕೆ 3 ಸಾವಿರ ಎಕರೆ ಭೂಮಿ ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ ಗಣಿ ಉದ್ಯಮಿ!

ಒಂದು ಇಂಚು ಭೂಮಿಗಾಗಿ ಅಣ್ಣ-ತಮ್ಮಂದಿರು ಹೊಡೆದಾಟ ಮಾಡುವ ಈ ಸಮಯದಲ್ಲಿ ರಾಜಸ್ಥಾನ ಮೂಲದ ಗಣಿ ಉದ್ಯಮಿಯೊಬ್ಬರು ತಮ್ಮ ಹೆಸರಲ್ಲಿದ್ದ 3 ಸಾವಿರ ಎಕರೆ ಭೂಮಿಯನ್ನು ಮಾಗಡಿ ತಾಲೂಕಿನ ಪಾಲನಹಳ್ಳಿ ಮಠಕ್ಕೆ ಬರೆದು ಸಂನ್ಯಾಸತ್ವ ಸ್ವೀಕಾರ ಮಾಡಿದ್ದಾರೆ.

oswal jain businessman donated 3000 acres land to Palanahalli Mutt Bengaluru san

ರಾಮನಗರ (ಅ.8): ರಾಜಸ್ಥಾನದ ಪ್ರಖ್ಯಾತ ಗಣಿ ಉದ್ಯಮಿ ಓಸ್ವಾಲ್‌ ಜೈನ್‌. ರಾಜಸ್ಥಾನ ಮಾತ್ರವಲ್ಲದೆ, ಮುಂಬೈ, ಗುಜರಾತ್‌, ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಅವರ ಹೆಸರಲ್ಲಿ ಇದ್ದಿದ್ದು ಬರೋಬ್ಬರಿ 3 ಸಾವಿರ ಎಕರೆಯ ಭೂಮಿ. ಇದರಲ್ಲಿ ಕಲ್ಲಿದ್ದಲು, ಚಿನ್ನ ಹಾಗೂ ಅದಿರಿನ ಗಣಿಗಾರಿಕೆ ಮಾಡುತ್ತಿದ್ದರು. ಅದರೊಂದಿಗೆ ಜರ್ಮನಿ, ಜಪಾನ್‌ ಹಾಗೂ ಆಸ್ಟ್ರೇಲಿಯಾದಲ್ಲಿ ನಡೆಸುತ್ತಿದ್ದ ಎಲ್ಲಾ ವಿದೇಶಿ ವಹಿವಾಟುಗಳಿದ್ದವು. ಈ ಎಲ್ಲವನ್ನೂ ಓಸ್ವಾಲ್‌ ಜೈನ್‌, ರಾಮನಗರ ಜಿಲ್ಲೆಯ ಮಾಗಡಿಯಲ್ಲಿರುವ ಪಾಲನಹಳ್ಳಿ ಮಠಕ್ಕೆ ದಾನ ಮಾಡಿದ್ದಾರೆ. 78 ವರ್ಷದ ಓಸ್ವಾಲ್‌ ಜೈನ್‌ ಇಷ್ಟು ದೊಡ್ಡ ಪ್ರಮಾಣದ ಜಮೀನನ್ನು ದಾನ ಮಾಡಿ ಸಂನ್ಯಾಸತ್ವ ಸ್ವೀಕಾರ ಮಾಡಿದ್ದಾರೆ. ಅವರು ನೀಡಿರುವ ಭೂಮಿಯಲ್ಲಿ ಈಗಾಗಲೇ ಗಣಿಗಾರಿಕೆ ನಡೆಯತ್ತಿದ್ದು, ಇದರಲ್ಲಿ ಬರುವ ಆದಾಯದಿಂದ ಆಸ್ಪತ್ರೆ, ಗೋಶಾಲೆ, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಲೋಕ ಕಲ್ಯಾಣಕ್ಕೆ ಮತ್ತು ಸಮಾಜ ಸೇವೆಗೆ ಬಳಸುವುದು ಮಠದ ಉದ್ದೇಶವಾಗಿದೆ" ಎಂದು ಪಾಲನಹಳ್ಳಿ ಮಠದ ಪೀಠಾಧ್ಯಕ್ಷರಾದ ಡಾ. ಸಿದ್ದರಾಜ ಸ್ವಾಮೀಜಿ ಹೇಳಿದ್ದಾರೆ.

ರಾಜಸ್ಥಾನದ ಗಣಿ ಉದ್ಯಮಿಯಾಗಿರುವ ಓಸ್ವಾಲ್‌ ಜೈನ್‌ಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ವಿದೇಶದಲ್ಲಿದ್ದರೆ, ಮಗಳು ರಾಜಸ್ಥಾನದಲ್ಲಿ ಸಿಎ ವೃತ್ತಿಯಲ್ಲಿದ್ದಾಳೆ. ಇಬ್ಬರೂ ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿ ನೀಡಿರುವ ಓಸ್ವಾಲ್‌ ಜೈನ್‌, ತಾವು ಬದುಕಿನಲ್ಲಿ ದುಡಿದು ಗಳಿಸಿದ ಸ್ವಯಾರ್ಜಿತ ಆಸ್ತಿಯಾಗಿರುವ 3 ಸಾವಿರ ಎಕರೆ ಆಸ್ತಿಯನ್ನು ಮಾತ್ರವೇ ದಾನ ಮಾಡಿದ್ದಾರೆ.

ಪಾಲನಹಳ್ಳಿ ಮಠದ ಪೀಠಾಧ್ಯಕ್ಷರಾದ ಡಾ. ಸಿದ್ದರಾಜ ಸ್ವಾಮೀಜಿಗೆ ಕಾನೂನು ಪ್ರಕಾರ ಆಸ್ತಿ‌ ಪತ್ರ ಹಸ್ತಾಂತರ ಮಾಡಿದ್ದಾರೆ. ಎಲ್ಲಾ ಪ್ರಕ್ರಿಯೆಗಳನ್ನು ಕಾನೂನಾತ್ಮಕವಾಗಿ ಮಾಡಿರುವುದಾಗಿ ಪಿ.ಬಿ. ಓಸ್ವಾಲ್‌ ಜೈನ್‌ ತಿಳಿಸಿದ್ದಾರೆ. ಕಳೆದ 27 ವರ್ಷಗಳಿಂದ ಪಾಲನಹಳ್ಳಿ ಮಠದ ಜೊತೆ ನನಗೆ ಒಡನಾಟವಿದೆ. 'ಓಸ್ವಾಲ್‌ ಕಂಪನಿ ಆರಂಭವಾದಾಗಿನಿಂದ ಸತತ 27 ವರ್ಷ ಪಾಲನಹಳ್ಳಿ ಮಠದ ಶ್ರೀಗಳ ಮಾರ್ಗದರ್ಶನ ಮತ್ತು ಅವರ ಒಡನಾಟವಿದ್ದ ಕಾರಣ ಮಠಕ್ಕೆ ಆಸ್ತಿ ಬರೆದುಕೊಟ್ಟಿದ್ದೇನೆ ಎಂದು ಹೇಳಿದ್ದಾರೆ. ನನಗೆ ಈಗಾಗಲೇ ವರ್ಷವಾಗಿದೆ. ಜೈನ ವ್ರತಾಚರಣೆ ಮಾಡಿ ಅಹಿಂಸಾ ಪರಮೋಧರ್ಮ ಮತ್ತು ಮೋಕ್ಷ ಸಾಧನೆಗಾಗಿ ಮಠಕ್ಕೆ ಆಸ್ತಿಯನ್ನು ದಾನ ಮಾಡಿದ್ದೇನೆ ಎಂದು ಪಿಬಿ ಓಸ್ವಾಲ್‌ ಜೈನ್‌ ಹೇಳಿದ್ದಾರೆ.

ಜೈನ ಸನ್ಯಾಸ ದೀಕ್ಷೆ ಪಡೆದ ಯುವತಿ: ಇಪ್ಪತ್ತರ ಹರೆಯದಲ್ಲೇ ಆಧ್ಯಾತ್ಮದತ್ತ ಒಲವು

ಆಸ್ತಿ ಸ್ವೀಕರಿಸಿ ಸಮಾಜ ಸೇವೆಗೆ ಬಳಕೆ ಮಾಡಿಕೊಳ್ಳುತ್ತೇನೆ ಎಂದು ಡಾ. ಸಿದ್ದರಾಜ ಸ್ವಾಮೀಜಿ ತಿಳಿಸಿದ್ದಾರೆ. ಮಠದ ನಿರ್ವಹಣೆ, ಶಾಲೆ, ಕಾಲೇಜು, ಆಸ್ಪತ್ರೆ, ಗೋಶಾಲೆ, ದೇಗುಲಗಳ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತದೆ. ಗಣಿ ಉದ್ಯಮಿ ನಡೆಗೆ ಪಾಲನಹಳ್ಳಿ ಮಠದ ಭಕ್ತರಿಂದ ಶ್ಲಾಘನೆ ವ್ಯಕ್ತವಾಗಿದೆ. ಗಣಿಯಿಂದ ಬರುವ ಆದಾಯ ಎಲ್ಲವೂ ತೆರಿಗೆ ವ್ಯಾಪ್ತಿಗೆ ಬರುತ್ತದೆ. ಈ ಬಗ್ಗೆ ತೆರಿಗೆ ಆಯುಕ್ತರ ಬಗ್ಗೆ ಚರ್ಚಿಸಿ ಇದರ ಆದಾಯವನ್ನು ಹೇಗೆ ಬಳಕೆ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ತೀರ್ಮಾನ ಮಾಡಲಿದ್ದೇನೆ ಎಂದು ಹೇಳಿದ್ದಾರೆ.

ಆಡೋ ವಯಸ್ಸಿಗೆ ಅಧ್ಯಾತ್ಮದತ್ತ ಒಲವು: ಪೋಷಕರೊಂದಿಗೆ ಸನ್ಯಾಸತ್ವ ಸ್ವೀಕರಿಸಲಿರುವ 9 ವರ್ಷದ ಪೋರ

Latest Videos
Follow Us:
Download App:
  • android
  • ios