ಮೈಸೂರು: ಅಂಗಾಂಗ ದಾನ ಮಾಡಿ 9 ಜೀವಗಳನ್ನು ಉಳಿಸಿದ ಮದನ್‌ ಕುಮಾರ್‌

ಮದನ್‌ ಕುಮಾರ್‌ ಅವರ ಹೃದಯ, ಶ್ವಾಸಕೋಶಗಳು, 2 ಮೂತ್ರಪಿಂಡಗಳು, ಯಕೃತ್ತು ಮತ್ತು ಕಾರ್ನಿಯಾಗಳನ್ನು ದಾನ ಮಾಡಲಾಗಿದೆ.

Organ Donation Who Person Brain Dead on Accident in Mysuru grg

ಮೈಸೂರು(ಅ.09): ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೆದುಳಿನ ನಿಷ್ಕ್ರೀಯಗೊಂಡಿದ್ದ 25 ವರ್ಷದ ಮದನ್‌ಕುಮಾರ್‌ ಅವರ ಅಂಗಾಂಗ ದಾನದಿಂದ 9 ಜೀವಗಳನ್ನು ಉಳಿಸಲಾಗಿದೆ. ಮದನ್‌ ಕುಮಾರ್‌ ಅವರ ಹೃದಯ, ಶ್ವಾಸಕೋಶಗಳು, 2 ಮೂತ್ರಪಿಂಡಗಳು, ಯಕೃತ್ತು ಮತ್ತು ಕಾರ್ನಿಯಾಗಳನ್ನು ದಾನ ಮಾಡಲಾಗಿದೆ.

ಸೋಮವಾರ ರಾತ್ರಿ ಸಿದ್ದಾರ್ಥನಗರದ ಬಳಿ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮದನ್‌ಕುಮಾರ್‌ ಅವರನ್ನು ಕಾವೇರಿ ಆಸ್ಪತ್ರೆ ದಾಖಲಿಸಲಾಗಿತ್ತು. ನಂತರ ಬುಧವಾರ ಬೆಳಗ್ಗೆ ಅಪೋಲೊ ಬಿಜಿಎಸ್‌ ಆಸ್ಪತ್ರೆಗೆ ಕರೆತರಲಾಯಿತು. ಆರಂಭಿಕ ಸಿಟಿ ಸ್ಕ್ಯಾ‌ನಿಂಗ್‌ನಲ್ಲಿ ಮೆದುಳಿನ ಕಾಂಡದ ಇನ್ಫಾಕ್ಟ್ರ್‍ ಗೋಚರಿಸಿತು. ಜೀವ ಬೆಂಬಲ ಮತ್ತು ತೀವ್ರ ನಿಗಾಗಾಗಿ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಯಿತು. ಬಹಳ ಗಂಭೀರ ಸ್ಥಿತಿಯಲ್ಲಿ 2 ದಿನ ಲೈಫ್‌ ಸಪೋರ್ಚ್‌ನಲ್ಲಿ ಇರಿಸಲಾಗಿತ್ತು. ಶುಕ್ರವಾರ ರಾತ್ರಿ ಮೆದುಳಿನ ನಿಷ್ಕ್ರೀಯ ಎಂದು ಅಪೋಲೊ ಆಸ್ಪತ್ರೆಯ ವೈದ್ಯರು ಘೋಷಿಸಿದರು.

Belagavi; ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಅಥಣಿ ಯುವಕ

ಈ ಘಟನೆಯ ಮೊದಲು ಮದನ್‌ ಅವರು ಆರೋಗ್ಯವಾಗಿದ್ದರು ಮತ್ತು ಹಲವಾರು ಪರೀಕ್ಷೆಗಳಿಂದ ಅವರು ಅಂಗಾಂಗ ದಾನಕ್ಕೆ ಅರ್ಹರು ಎಂದು ಖಚಿತ ಪಡಿಸಲಾಯಿತು. ಅಂಗಾಂಗ ದಾನಕ್ಕೆ ಮದನ್‌ ಪತ್ನಿ ಮುಂದೆ ಬಂದರು. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಅಪೋಲೊ ಆಸ್ಪತ್ರೆಯಲ್ಲಿ ಮದನ್‌ ಅವರ ಅಂಗಾಂಗಗಳನ್ನು ಕಸಿ ಮಾಡಿ,

ಹೃದಯ ಮತ್ತು ಶ್ವಾಸಕೋಶಗಳನ್ನು ಬೆಂಗಳೂರುನ ಎನ್‌ಎಚ್‌, ಲಿವರ್‌ ಮತ್ತು ಎಡ ಕಿಡ್ನಿ ಅಪೋಲೊ ಮೈಸೂರು, ಬಲ ಕಿಡ್ನಿಯನ್ನು ಬೆಂಗಳೂರಿನ ಐಎನ್‌ಯು, ಕಾರ್ನಿಯಾಸ್‌ಗಳನ್ನು ಮೈಸೂರಿನ ಕೆ.ಆರ್‌. ಆಸ್ಪತ್ರೆಗೆ ವರ್ಗಾಯಿಸಲಾಯಿತು. ಹೃದಯ ಮತ್ತು ಇತರೆ ಅಂಗಾಂಗವನ್ನು ಗ್ರೀನ್‌ ಕಾರಿಡಾರ್‌ನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ವರ್ಗಾಯಿಸಲಾಯಿತು ಎಂದು ಅಪೋಲೋ ಆಸ್ಪತ್ರೆಯ ಉಪಾಧ್ಯಕ್ಷ ಎನ್‌.ಜಿ. ಭರತೀಶ ರೆಡ್ಡಿ ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios