ಸಾವಿನಲ್ಲಿ ಸಾರ್ಥಕತೆ: ಸತ್ತ ಮೇಲೂ ನಾಲ್ವರ ಜೀವ ಉಳಿಸಿದ..!

ಮೈಸೂರಿನ ಯುವಕನೊಬ್ಬನ ಅಂಗಾಗ ದಾನ ಮಾಡುವ ಮೂಲಕ ನಾಲ್ವರ ಜೀವ ಉಳಿಸಿ, ತಮ್ಮ ಪುತ್ರನ ಸಾವಿನಲ್ಲೂ ಪೋಷಕರು ಸಾರ್ಥಕತೆ ಮೆರೆದಿದ್ದಾರೆ. ಅಪಘಾತಕ್ಕೊಳಗಾಗಿ 24 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಿದ್ದರೂ ಅವರ ಮಿದುಳು ನಿಷ್ಕ್ರಿಯಗೊಂಡ ಕಾರಣ ಅಂಗಾಂಗ ದಾನ ಪ್ರಕ್ರಿಯೆ ಅನ್ವಯ ಅವರ ಕುಟುಂಬದವರು ಅಂಗಾಂಗ ದಾನಕ್ಕೆ ಸಮ್ಮತಿ ಸೂಚಿಸಿದ್ದಾರೆ.

Organ donation saves 4 lives in mysore

ಮೈಸೂರು(ಡಿ.18): ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ ಯುವಕನ ಪೋಷಕರು ಅಂಗಾಂಗ ದಾನ ಮಾಡುವ ಮೂಲಕ ನಾಲ್ವರ ಜೀವ ಉಳಿಸಿದ್ದಾರೆ.

ಮೈಸೂರಿನ ನಿವೇದಿತಾ ನಗರದ ಚಂದ್ರಶೇಖರ್‌(27) ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲಿ ಸಾರ್ಥಕತೆ ಮೆರೆದವರು. ಇವರು ಡಿ.14 ರಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಗಣಂಗೂರು ಬಳಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದು, ಅವರನ್ನು ಮೈಸೂರಿನ ಅಪೋಲೋ ಬಿಜಿಎಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಟಾಯ್ಲೆಟ್ ಕಟ್ಟಲು ಹಣ: 4 ವರ್ಷವಾದ್ರೂ ಅನುದಾನ ಖರ್ಚೇ ಆಗಿಲ್ಲ..!

24 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಿದ್ದರೂ ಅವರ ಮಿದುಳು ನಿಷ್ಕ್ರಿಯಗೊಂಡ ಕಾರಣ ಅಂಗಾಂಗ ದಾನ ಪ್ರಕ್ರಿಯೆ ಅನ್ವಯ ಅವರ ಕುಟುಂಬದವರು ಅಂಗಾಂಗ ದಾನಕ್ಕೆ ಸಮ್ಮತಿ ಸೂಚಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ಹೃದಯವನ್ನು ಬೆಂಗಳೂರಿನ ರಾಮಯ್ಯ ಆಸ್ಪತ್ರೆಗೆ ಮತ್ತು ಒಂದು ಕಿಡ್ನಿಯನ್ನು ಬೆಂಗಳೂರಿನ ಎನ್‌ಯು ಆಸ್ಪತ್ರೆಗೆ ಜೀರೋ ಟ್ರಾಫಿಕ್‌ನ ಗ್ರೀನ್‌ ಕಾರಿಡಾರ್‌ನಲ್ಲಿ ರವಾನಿಸಲಾಯಿತು. ಲಿವರ್‌ ಮತ್ತು ಮತ್ತೊಂದು ಕಿಡ್ನಿಯನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ಚಂದ್ರಶೇಖರ್‌ ಪೋಷಕರು ನೀಡಿದ್ದಾರೆ ಎಂದು ಆಸ್ಪತ್ರೆಯ ಆರೋಗ್ಯ ಸೇವೆ ವ್ಯವಸ್ಥಾಪಕ ಸಿ.ಬಿ. ದಕ್ಷ್‌ ತಿಳಿಸಿದ್ದಾರೆ.

ಬೆಂಕಿ ಹಚ್ಚಿಕೊಂಡು ಗೃಹಿಣಿ ಆತ್ಮಹತ್ಯೆ, ನ್ಯಾಯಕೊಡಿಸಿ ಎಂದು ಡಿವೈಎಸ್ಪಿ ಕಾಲಿಗೆ ಬಿದ್ದ ತಂದೆ..!

Latest Videos
Follow Us:
Download App:
  • android
  • ios