ಹಳೆ ಪಿಂಚಣಿ ಯೋಜನೆ ಜಾರಿಗೆ ಆದೇಶ: ಸರ್ಕಾರಕ್ಕೆ ಅಭಿನಂದನೆ ಸಲ್ಲಿಕೆ
: 2006 ರ ಏಪ್ರಿಲ್ 1ರ ಪೂರ್ವದಲ್ಲಿ ರಾಜ್ಯ ಸರ್ಕಾರದಿಂದ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆಯಾಗಿ ನಂತರ ರಾಜ್ಯ ಸರ್ಕಾರದ ಸೇವೆಗೆ ಸೇರಿ ನೂತನ ಪಿಂಚಣಿ ಯೋಜನೆಗೆ ಒಳಪಟ್ಟಿರುವ ನೌಕರರನ್ನು ಹಳೆಯ ಪಿಂಚಣಿ ಯೋಜನೆಗೆ ಒಳಪಡಿಸಲು ರಾಜ್ಯ ಸರಕಾರ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಯಿತು.
ಶಿರಾ : 2006 ರ ಏಪ್ರಿಲ್ 1ರ ಪೂರ್ವದಲ್ಲಿ ರಾಜ್ಯ ಸರ್ಕಾರದಿಂದ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆಯಾಗಿ ನಂತರ ರಾಜ್ಯ ಸರ್ಕಾರದ ಸೇವೆಗೆ ಸೇರಿ ನೂತನ ಪಿಂಚಣಿ ಯೋಜನೆಗೆ ಒಳಪಟ್ಟಿರುವ ನೌಕರರನ್ನು ಹಳೆಯ ಪಿಂಚಣಿ ಯೋಜನೆಗೆ ಒಳಪಡಿಸಲು ರಾಜ್ಯ ಸರಕಾರ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಯಿತು.
ನಗರದ ಸರ್ಕಾರಿ ನೌಕರರ ಸಂಘದಲ್ಲಿ ಸಭೆ ಸೇರಿದ ನೌಕರರು ಸುಮಾರು 17 ವರ್ಷಗಳಿಂದ ನೂತನ ಪಿಂಚಣಿ ಯೋಜನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಸರ್ಕಾರದ ಈ ಆದೇಶ ನೆಮ್ಮದಿ ಹಾಗೂ ಭವಿಷ್ಯಕ್ಕೆ ಹೊಸ ಆಶಾಕಿರಣ ತಂದಿದ್ದು, ಆದಷ್ಟು ಬೇಗ ಇಲಾಖೆಗಳ ಮುಖ್ಯಸ್ಥರು ತಮ್ಮ ಅಧೀನದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕಕರಿಂದ ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ, ಮೇಲಾಧಿಕಾರಿಗಳಿಗೆ ಸಲ್ಲಿಸಲು ಮನವಿ ಮಾಡಲಾಯಿತು.
ಏಪ್ರಿಲ್ 1 2006 ಕ್ಕಿಂತ ಪೂರ್ವದಲ್ಲಿಯೇ ಅಧಿಸೂಚನೆಯನ್ನು ಹೊರಡಿಸಿ, ಕಾರಣಾಂತರಗಳಿಂದ 2006 ಏಪ್ರಿಲ್ 1 ರ ನಂತರ ನೇಮಕಗೊಂಡು, ಶಿರಾ ತಾಲುಕಿನ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರರು ತಮ್ಮ ಇಲಾಖೆಗಳ ಮುಖ್ಯಸ್ಥರಿಗೆ ಅಭಿಮತ ಪತ್ರವನ್ನು ಸಲ್ಲಿಸುವ ಮೂಲಕ ಅನುಕೂಲ ಪಡೆದುಕೊಳ್ಳಲು ತಿಳಿಸಲಾಯಿತು.
ಈ ಸಭೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಎನ್. ಜಯಚಂದ್ರ, ಪಿಡಿಒ ರಮೇಶ್, ಸಿ.ಆರ್.ಪಿ.ಎನ್. ಧರ್ಮೇಂದ್ರ, ಶಿಕ್ಷಕರಾದ ಆರ್. ತಿಪ್ಪೇಸ್ವಾಮಿ, ಕೆ.ಎಸ್. ಉಮೇಶ್, ನರೇಶಬಾಬು, ಪಿ.ಜಿ. ಗಿರೀಶ್, ವಿಶಾಲಾಕ್ಷಮ್ಮ, ಪಿ.ಎಂ. ಜಯಶ್ರೀ, ಕವಿತಾ, ರಾಧಿಕಾ, ಲಕ್ಷ್ಮೀದೇವಿ, ಜಿ.ಟಿ. ಚಿರಂಜೀವಿ, ಷಂಷೀರ್ ಬೇಗ್, ಡಿ.ಜಿ. ನರಸಿಂಹಮೂರ್ತಿ, ಕೇಶವಮೂರ್ತಿ, ಹನುಂತೇಗೌಡ, ರಂಗನಾಥ್ ಸೇರಿದಂತೆ ಹಲವರು ಹಾಜರಿದ್ದರು.