ಮಂಗಳೂರು(ಜೂ. 03): ನಿಸರ್ಗ ಚಂಡಮಾರುತ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಕಡಲು ಬುಧವಾರ ಪ್ರಕ್ಷುಬ್ಧಗೊಂಡಿತ್ತು. ಉಳ್ಳಾಲದಾದ್ಯಂತ ಪ್ರಕ್ಷುಬ್ಧಗೊಂಡಿದ್ದ ಸಮುದ್ರ ತೀರ ಬುಧವಾರ ಸಂಜೆ ಹೊತ್ತಿಗೆ ಸಹಜ ಸ್ಥಿತಿಯತ್ತ ಮರಳಿದೆ. ಕಡಲ್ಕೊರೆತ ತಡೆಗೆ ಹಾಕಲಾಗಿದ್ದ ಬಮ್ಸ್‌ರ್‍ ಹಾಗೂ ಕಲ್ಲುಗಳಿಗೆ ಅಲೆಗಳು ಬಡಿಯುತ್ತಿದ್ದರೂ ವೇಗ ಕಡಿಮೆಯಾಗಿದೆ.

ಕೋಟೆಪುರ, ಕೋಡಿ, ಮೊಗವೀರಪಟ್ನ, ಕೈಕೋ, ಕಿಲಿರಿಯಾನಗರ, ಸೋಮೇಶ್ವರ, ಉಚ್ಚಿಲ ಭಾಗಗಳಲ್ಲಿ ಸಮುದ್ರ ತೀರ ಚಂಡಾಮಾರುತದ ಪರಿಣಾಮದಿಂದ ಪ್ರಕ್ಷುಬ್ಧವಾಗಿತ್ತು. ಉಚ್ಚಿಲ ಭಾಗಗಳಲ್ಲಿ ಕಡಲ್ಕೊರೆತ ತಡೆಗೆ ಹಾಕಲಾದ ಕಲ್ಲುಗಳು ಸಮುದ್ರ ಪಾಲಾಗಿದೆ. ಉಳಿದ ಪ್ರದೇಶಗಳಲ್ಲಿ ಬಮ್ಸ್‌ರ್‍ ಅಳವಡಿಕೆಯಿಂದಾಗಿ ಮನೆಗಳಿಗೆ ಅಪ್ಪಳಿಸುವುದು ಕಡಿಮೆಯಾಗಿತ್ತು. ಮುಂಜಾಗ್ರತಾ ಕ್ರಮವಾಗಿ ನಾಡದೋಣಿ ಮೀನುಗಾರರು ಬುಧವಾರ ಕೂಡ ಸಮುದ್ರಕ್ಕೆ ಇಳಿಯಲಿಲ್ಲ. ಅಪಾಯದಂಚಿನಲ್ಲಿರುವ ಸಮ್ಮರ್‌ ಸ್ಯಾಂಡ್‌ ರೆಸಾರ್ಟ್‌ಗೆ ಅಲೆಗಳು ಹೊಡೆಯುವುದು ಮುಂದುವರಿದಿದೆ. ತಾತ್ಕಾಲಿಕ ತಡೆಗೋಡೆಯಾಗಿ ಕಲ್ಲುಗಳನ್ನು ಹಾಕಿದರೂ, ಅದನ್ನು ಸಮುದ್ರ ನುಂಗಿದ ಪರಿಣಾಮ ಅಲೆಗಳ ಅಪ್ಪಳಿಸುವಿಕೆ ಮುಂದುವರಿದಿದೆ. ಸಮುದ್ರ ತೀರದತ್ತ ಯಾರೂ ಪ್ರವೇಶಿಸದಂತೆ ಉಳ್ಳಾಲ ಪೊಲೀಸರು ಹಾಗೂ ಕರಾವಳಿ ಕಾವಲು ಪಡೆ ಬಂದೋಬಸ್‌್ತ ಏರ್ಪಡಿಸಿದೆ.

ಉಡುಪಿ: ಮತ್ತೆ 62 ಮಂದಿಗೆ ‘ಮಹಾ’ ಸೋಂಕು

ಬುಧವಾರ ಮಂಗಳೂರು ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಚಂಡಮಾರುತ ಪ್ರಭಾವದ ಮಳೆ ಕಾಣಿಸಿದೆ. ಬುಧವಾರ ನಸುಕಿನ ಜಾವ ಸತತ ಮೂರನೇ ದಿನವೂ ಧಾರಾಕಾರ ಮಳೆ ಸುರಿದಿದೆ. ಇದು ಬೆಳಗ್ಗೆಯೂ ಮುಂದುವರಿದಿತ್ತು. ಹಗಲು ಮೋಡ, ಬಿಸಿಲು, ತುಂತುರು ಮಳೆ ಕಾಣಿಸಿತ್ತು.

ದಡಕ್ಕೆ ಮರಳಿದ ಮೀನುಗಾರರು:

ಮುಂದಿನ 24 ಗಂಟೆಯಲ್ಲಿ ಕರಾವಳಿಯಲ್ಲಿ ಭಾರಿ ಮಳೆಯ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಬಗ್ಗೆ ಜಿಲ್ಲಾಡಳಿತ ಕೂಡ ಸೂಚನೆ ನೀಡಿರುವುದರಿಂದ ಸಾಂಪ್ರದಾಯಿಕ ಮೀನುಗಾರರು ಬೋಟಿನೊಂದಿಗೆ ದಡಕ್ಕೆ ಮರಳಿದ್ದಾರೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ಜಿಲ್ಲಾಡಳಿತ ಅವಕಾಶ ನೀಡಿರಲಿಲ್ಲ. ದ.ಕ. ಜಿಲ್ಲೆಯಲ್ಲಿ ಈಗ ಅರೇಂಜ್‌ ಅಲರ್ಟ್‌ ಘೋಷಿಸಲಾಗಿದ್ದು, ಕಡಲ ತೀರದ ಜನತೆಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಇದೇ ವೇಳೆ ಮುಂಜಾಗ್ರತಾ ಕ್ರಮವಾಗಿ ಎನ್‌ಡಿಆರ್‌ಎಫ್‌ ಕೇಂದ್ರ ತಂಡ ಮಂಗಳೂರಿಗೆ ಆಗಮಿಸಿದೆ.

ಪ್ರವಾಸಿಗರ ಅಪಾಯದ ಸೆಲ್ಫಿ ಹುಚ್ಚು:

ಉಳ್ಳಾಲದ ಬೀಚ್‌ನಲ್ಲಿ ವಿಹರಿಸುತ್ತಿರುವ ಪ್ರವಾಸಿಗರು ಅಪಾಯಕಾರಿಯಾಗಿ ಸೆಲ್ಫಿ ತೆಗೆಯುತ್ತಿದ್ದ ದೃಶ್ಯ ಬುಧವಾರ ಕಂಡುಬಂದಿದೆ. ಲಾಕ್‌ಡೌನ್‌ ಸಡಿಲಿಕೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಆಗಮಿಸಿದ ಪ್ರವಾಸಿಗರು ಸಮುದ್ರಕ್ಕೆ ಇಳಿದು ಆಳೆತ್ತರದ ಅಲೆಗಳಿಗೆ ಬೆನ್ನುಹಾಕಿ ನಿಂತುಕೊಂಡು ಸೆಲ್ಫಿ ತೆಗೆಯುತ್ತಿರುವ ಅಪಾಯಕಾರಿ ಸಾಹಸ ಕಂಡುಬಂದಿದೆ.

ಖಾಸಗಿ ಬಸ್‌ ಪ್ರಯಾಣದಲ್ಲಿ ಅಂತರ ಇಲ್ಲದೆ ಸೋಂಕಿಗೆ ಆಹ್ವಾನ!

ಸಮುದ್ರಕ್ಕೆ ಹಾಕಿದ ಕಲ್ಲುಗಳ ಮೇಲೆಯೇ ನಿಂತು ಯುವತಿಯರು ಸೆಲ್ಫಿ ಕ್ರೇಜ್‌ಗೆ ಒಳಗಾಗುತ್ತಿರುವ ಆತಂತಕಕಾರಿ ವಿದ್ಯಮಾನ ಕಂಡುಬಂದಿದೆ. ಬೀಚ್‌ನಲ್ಲಿ ಜೀವರಕ್ಷಕರನ್ನು ಹೊರತುಪಡಿಸಿದರೆ, ಪೊಲೀಸ್‌ ಕಾವಲು ಇಲ್ಲ. ಇದು ಪ್ರವಾಸಿಗರ ಹುಚ್ಚಾಟಕ್ಕೆ ವರವಾಗಿ ಪರಿಣಮಿಸಿದೆ.