ಉಡುಪಿ(ಸೆ.11): ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಪರವಾಗಿ ಮಾತನಾಡುತ್ತಿರುವುದು ಜಿ.ಟಿ. ದೇವೆಗೌಡರು ಮಾತ್ರವಲ್ಲ, ಇನ್ನೂ ಬೇರೆ ಬೇರೆ ಪಕ್ಷಗಳ ಅನೇಕ ನಾಯಕರಿಗೆ ರಾಜ್ಯದಲ್ಲಿ ಅಭಿವೃದ್ಧಿಯಾಗುವುದಿದ್ದರೆ ಅದು ಬಿಜೆಪಿ ಸರ್ಕಾರದಿಂದ ಮಾತ್ರ ಅನ್ನುವ ಭಾವನೆ ಬಂದಿದೆ. ಆದ್ದರಿಂದ ಅವರೆಲ್ಲರೂ ಬಿಜೆಪಿಯತ್ತ ವಾಲುತ್ತಿದ್ದಾರೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮಂಗಳವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬೆಳವಣಿಗೆಯನ್ನು ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಮತ್ತು ಬಿಜೆಪಿ ಬಹಳ ಸೂಕ್ಷ್ಮವಾಗಿ ಗಮನಿಸುತಿದ್ದಾರೆ. ಈ ಬೆಳವಣಿಗೆಯಿಂದ ಮುಂದಿನ ದಿನಗಳಲ್ಲಿ ಬಿಜೆಪಿಗೆ ಶುಭದಾಯಕ ದಿನಗಳು ಬರಲಿವೆ ಎಂದು ಅವರು ಹೇಳಿದರು.

ಉಡುಪಿ: SSLC ವಿದ್ಯಾರ್ಥಿಗಳಿಗಾಗಿ ಮಿಷನ್‌-100

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರ 4 - 5 ತಿಂಗಳಲ್ಲಿ ಬೀಳಲಿದೆ ಎಂದು ಹೇಳುತ್ತಿರುವುದು ಅವರ ಸುಂದರ ಕನಸಿರಬಹುದು, ಆದರೇಅದು ನನಸಾಗುವುದಿಲ್ಲ, ಬಿಜೆಪಿ ಸರ್ಕಾರ ಇನ್ನು ಮೂರುವರೆ ವರ್ಷ ಉತ್ತಮ ಆಡಳಿತ ನೀಡಲಿದೆ ಮಾತ್ರವಲ್ಲ ಮುಂದಿನ 5 ವರ್ಷವೂ ರಾಜ್ಯದಲ್ಲಿ ಆಡಳಿತ ನಡೆಸಲಿದೆ ಎಂದರು.

ಸಿದ್ದುಗೆ ಕೆಟ್ಟದಾಗೇ ಕಾಣುತ್ತದೆ:

ಬಿಜೆಪಿಯನ್ನು ನಾಟಕ ಕಂಪನಿ, ನಳಿನ್‌ ಕುಮಾರ್‌ ವಿದೂಷಕ ಎಂದೆಲ್ಲ ಹೇಳಿರುವ ಇನ್ನೊಬ್ಬ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಒಳ್ಳೆಯದೆಲ್ಲಾ ಕೆಟ್ಟದಾಗಿ ಕಾಣಿಸುತ್ತದೆ. ನಳಿನ್‌ ಕುಮಾರ್‌ ರಾಜ್ಯಾಧ್ಯಕ್ಷರಾಗಿರುವುದರಿಂದ ರಾಜ್ಯದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತದೆ, ಕಾಂಗ್ರೆಸ್‌ ಖಂಡಿತ ಸೋಲುತ್ತದೆ ಎಂದು ಕೋಟ ಹೇಳಿದರು.

ಡಿಕೆಶಿ ಬಿಡುಗಡೆಗಾಗಿ ಕೊಲ್ಲೂರಿನಲ್ಲಿ ಚಂಡಿಕಾ ಹೋಮ