ಕಾರವಾರ [ಜ.11]: ದೇಶದಲ್ಲಿ ಇತ್ತೀಚೆಗೆ ಜಾರಿಯಾದ ಪೌರತ್ವ ಕಾಯ್ದೆ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. 

ಕೇಂದ್ರ ಸರ್ಕಾರ ಜಾರಿ ಮಾಡಿದ ಪೌರತ್ವ ಕಾಯ್ದೆ ಬಗ್ಗೆ ಇದೀಗ ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿ ನಡೆದ ವಿವಾಹ ಮಹೋತ್ಸವವೊಂದರಲ್ಲಿಯೂ ವಿರೋಧ ವ್ಯಕ್ತವಾಗಿದೆ. 

ಭಟ್ಕಳದಲ್ಲಿ ಬುಧವಾರ ನಡೆದ ಮುಸ್ಲಿಂ ಕುಟುಂಬದ ವಿವಾಹ ಕಾರ್ಯಕ್ರಮ ಒಂದರಲ್ಲಿ ಸಿಎಎ ಹಾಗೂ NRC ವಿರುದ್ಧ ಧ್ವನಿ ಎತ್ತಿದ್ದಾರೆ. 

ಪೌರತ್ವದಿಂದ ಒಬ್ಬ ಮುಸ್ಲಿಂಗೆ ತೊಂದರೆಯಾದ್ರೂ ನಾನೇ ಹೊಣೆ: ಸಿಎಂ ಯಡಿಯೂರಪ್ಪ...

ಸುಫ್ ಹಾಗೀ ಶಾಬಂದ್ರಿ ಅಬ್ದುಲ್ ರವೂಫ್ ಕುಟುಂಬದ ಮದುವೆ ಕಾರ್ಯಕ್ರಮವು ಅಲ್ ಅಫ್ರಾ ಸಭಾಂಗಣದಲ್ಲಿ ನಡೆದಿದ್ದು ಈ ವೇಳೆ ಕೆಲವು ಪೋಸ್ಟರ್ ಗಳನ್ನು ಪ್ರದರ್ಶಿಸಲಾಗಿದೆ.

ಪೌರತ್ವ ಕಾಯ್ದೆ ಜಾರಿ: ಕೇಂದ್ರದಿಂದ ಗೆಜೆಟ್‌ ಅಧಿಸೂಚನೆ!...

ಈಗಾಗಲೇ ದೇಶದಾದ್ಯಂತ ಹಲವು ಕಡೆ ಸಿಎಎ ವಿರುದ್ಧ ಪ್ರತಿಭಟನೆ ನಡೆದಿದೆ. ಹಲವರು ಬೀದಿಗಿಳಿದು ಪೌರತ್ವ ಕಾಯ್ದೆ ವಿರೋಧಿಸಿದ್ದು, ಇದೀಗ ವಿರೋಧದ ಬಿಸಿ ಮದುವೆ ಸಮಾರಂಭಗಳಲ್ಲಿಯೂ ಕಾಣಿಸುತ್ತಿದೆ.