Asianet Suvarna News Asianet Suvarna News

Karnataka politics : ಪ್ರಮುಖ ರಾಜ​ಕೀಯ ಪಕ್ಷ​ಗ​ಳಿಗೆ ಆಪ​ರೇ​ಷನ್‌ ಭೀತಿ!

ವಿಧಾ​ನ​ಸಭಾ ಚುನಾ​ವ​ಣೆಗೆ ಇನ್ನು ಮೂರು - ನಾಲ್ಕು ತಿಂಗಳುಗಳ ಕಾಲಾ​ವ​ಕಾಶವಿದ್ದು, ಈಗಾ​ಗಲೇ ತಯಾರಿ ಆರಂಭಿ​ಸಿ​ರುವ ಪ್ರಮುಖ ರಾಜ​ಕೀಯ ಪಕ್ಷ​ಗ​ಳಿಗೆ ಆಪ​ರೇ​ಷನ್‌ ಭೀತಿ ಕಾಡತೊಡ​ಗಿದೆ.

 Operation fear for major political parties snr
Author
First Published Dec 6, 2022, 7:29 AM IST

 -ಎಂ.ಅ​ಫ್ರೋಜ್‌ ಖಾನ್‌

  ರಾಮ​ನ​ಗರ (ಡಿ.06): ವಿಧಾ​ನ​ಸಭಾ ಚುನಾ​ವ​ಣೆಗೆ ಇನ್ನು ಮೂರು - ನಾಲ್ಕು ತಿಂಗಳುಗಳ ಕಾಲಾ​ವ​ಕಾಶವಿದ್ದು, ಈಗಾ​ಗಲೇ ತಯಾರಿ ಆರಂಭಿ​ಸಿ​ರುವ ಪ್ರಮುಖ ರಾಜ​ಕೀಯ ಪಕ್ಷ​ಗ​ಳಿಗೆ ಆಪ​ರೇ​ಷನ್‌ ಭೀತಿ ಕಾಡತೊಡ​ಗಿದೆ.

ಚುನಾವಣೆಗೂ (Election)  ಮುನ್ನ ಪಕ್ಷವನ್ನು ತಳಮಟ್ಟ ಹಾಗೂ ನಾಯಕತ್ವ ಮಟ್ಟದಲ್ಲಿ ಬಲಪಡಿಸುವುದು ಕಾಂಗ್ರೆಸ್‌ (Congress) , ಬಿಜೆಪಿ ಹಾಗೂ ಜೆಡಿ​ಎಸ್‌ ಪಕ್ಷ​ಗಳ ಗುರಿ. ಹಾಗಾಗಿ ಅದು ಇತರೆ ಪಕ್ಷಗಳಲ್ಲಿನ ಜನ ಬೆಂಬಲವಿರುವ ಮುಖಂಡರನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನ ನಡೆಸಿವೆ.

ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ, ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಹಾಗೂ ಮಾಜಿ ಸಚಿವ ಸಿ.ಪಿ.​ಯೋ​ಗೇ​ಶ್ವರ್‌ ಅವ​ರ ಪಾಲಿಗೆ ವಿಧಾ​ನ​ಸಭಾ ಚುನಾ​ವಣೆ ಪ್ರತಿ​ಷ್ಠೆಯ ಕಣ​ವಾ​ಗಿದ್ದು, ತಾವು ಸ್ಪರ್ಧಿಸುವ ಕ್ಷೇತ್ರ​ವಿ​ರುವ ಜಿಲ್ಲೆ​ಯಲ್ಲಿ ಹೆಚ್ಚಿನ ಸಂಖ್ಯೆ​ಯಲ್ಲಿ ಶಾಸ​ಕ​ರನ್ನು ಗೆಲ್ಲಿ​ಸಿ​ಕೊಂಡು ತಮ್ಮ ಸಾಮ​ಥ್ಯ​ರ್‍ ಸಾಬೀತು ಪಡಿ​ಸುವ ಸವಾ​ಲಿದೆ.

ಜೆಡಿ​ಎಸ್‌ ಮತ್ತು ಕಾಂಗ್ರೆಸ್‌ ನ ಭದ್ರ​ಕೋ​ಟೆ​ಯಾ​ಗಿರುವ ರೇಷ್ಮೆ​ನ​ಗರಿ ರಾಮ​ನ​ಗರ ಜಿಲ್ಲೆಯಲ್ಲಿ ​ಉ​ಭಯ ಪಕ್ಷ​ಗಳು ಸಾಂಪ್ರ​ದಾ​ಯಿಕ ಎದು​ರಾ​ಳಿಗಳು. ಕೈ ಮತ್ತು ದಳದ ಕೋಟೆ​ಯನ್ನು ಬೇಧಿಸಿ ಕಮಲ ಅರ​ಳಿ​ಸಲು ಬಿಜೆಪಿ ಇನ್ನಿ​ಲ್ಲದ ಕಸ​ರತ್ತು ಆರಂಭಿ​ಸಿದೆ. ಇದ​ಕ್ಕಾಗಿ ಜೆಡಿ​ಎಸ್‌ - ಕಾಂಗ್ರೆಸ್‌ ನಾಯ​ಕರ ವಿರುದ್ಧ ಅಸ​ಮಾ​ಧಾ​ನ​ಗೊಂಡಿ​ರುವ ಮುಖಂಡ​ರಿಗೆ ಗಾಳ ಹಾಕು​ತ್ತಿದೆ. ಇದಕ್ಕೆ ಪ್ರತಿ​ಯಾಗಿ ಕೈ ದಳ ನಾಯ​ಕರು ರಿವರ್ಸ್‌ ಆಪ​ರೇ​ಷನ್‌ನಲ್ಲಿ ಹಿಂದೆ ಬಿದ್ದಿಲ್ಲ.

ಕೈಯಿಂದ ಮುನಿ​ದ​ವ​ರಿಗೆ ಗಾಳ:

ರಾಮ​ನ​ಗರ ಕ್ಷೇತ್ರ​ ದೇವೇ​ಗೌಡರ ಕುಟುಂಬಕ್ಕೆ ರಾಜ​ಕೀ​ಯ​ವಾಗಿ ಮರು ಜನ್ಮ ನೀಡಿದ ಅದೃ​ಷ್ಟದ ಕ್ಷೇತ್ರ. ಈ ಮಣ್ಣಿನ ಗುಣ ತಮಗೆ ಅಧಿ​ಕಾರ ಕೊಡಿಸು​ತ್ತದೆ ಎಂಬ ವಿಶ್ವಾ​ಸ​ದಿಂದಲೇ ಕುಮಾ​ರ​ಸ್ವಾ​ಮಿ​ರ​ವರು ಪ್ರತಿ ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ಜೆಡಿ​ಎಸ್‌ನಿಂದ ಮುಖ್ಯ​ಮಂತ್ರಿ ಅಭ್ಯ​ರ್ಥಿ​ಯಾಗಿ ಪರೀ​ಕ್ಷೆಗೆ ಮುಂದಾ​ಗು​ತ್ತಿ​ದ್ದ​ರು. ಆದ​ರೆ, ಈ ಬಾರಿ ಅವರು ಚನ್ನ​ಪ​ಟ್ಟಣ ಕ್ಷೇತ್ರಕ್ಕೆ ಫಿಕ್ಸ್‌ ಆಗಿ​ದ್ದಾರೆ.

ಹಾಲಿ ಶಾಸಕಿ ಅನಿತಾ ಕುಮಾ​ರ​ಸ್ವಾಮಿ ತಾವೇ ಜೆಡಿ​ಎಸ್‌ ಹುರಿ​ಯಾಳೆಂದು ಹೇಳಿ​ಕೊಂಡು ಕ್ಷೇತ್ರ ತುಂಬೆಲ್ಲ ಪ್ರವಾಸ ನಡೆ​ಸು​ತ್ತಿ​ದ್ದು, ಇವ​ರಿಗೆ ಪುತ್ರ ನಿಖಿಲ್‌ ಕುಮಾ​ರ​ಸ್ವಾಮಿ ಸಾಥ್‌ ನೀಡು​ತ್ತಿ​ದ್ದಾರೆ. ಕಾಂಗ್ರೆಸ್‌ ಮತ್ತು ಬಿಜೆಪಿಗೆ ಹೋಲಿ​ಸಿ​ದರೆ ಜೆಡಿ​ಎಸ್‌ ಪಕ್ಷ ಅನ್ಯ ಪಕ್ಷ​ಗಳ ಮುಖಂಡ​ರನ್ನು ಸೆಳೆ​ಯಲು ಆರಂಭಿ​ಸಿದೆ. ಕೈ ನಾಯ​ಕರು ಕೂಡ ದಳ​ಪ​ತಿ​ಗ​ಳಿಂದ ಮುನಿದು ಮನೆ ಸೇರಿ​ರುವ ಮುಖಂಡ​ರಿಗೆ ಗಾಳ ಹಾಕಿದೆ. ಇನ್ನು ಪಕ್ಷ ಸಂಘ​ಟ​ನೆಗೆ ಸಮ​ರ್ಥ​ರೆ​ನಿ​ಸಿದ ಸೇನಾ​ನಿ​ಗ​ಳನ್ನು ನೇಮಿ​ಸಿ​ಕೊ​ಳ್ಳು​ವಲ್ಲಿ ಎಡ​ವು​ತ್ತಲೇ ಇರುವ ಕಮಲ ಪಾಳಯ ಮೌನ​ವಾ​ಗಿದೆ.

ಅನ್ಯ ಪಕ್ಷ​ದ​ವ​ರನ್ನು ಸೆಳೆ​ಯಲು ಪೈಪೋ​ಟಿ:

ಮಾಗಡಿ ಕ್ಷೇತ್ರ​ದಲ್ಲಿ ಜೆಡಿ​ಎಸ್‌ ಶಾಸಕ ಎ.ಮಂಜು​ನಾಥ್‌ ಮತ್ತು ಕಾಂಗ್ರೆಸ್‌ ನ ಮಾಜಿ ಶಾಸಕ ಎಚ್‌.ಸಿ.​ಬಾ​ಲ​ಕೃಷ್ಣ ರವರು ಅನ್ಯಪಕ್ಷ​ಗಳ ಮುಖಂಡರು, ಕಾರ್ಯ​ಕ​ರ್ತ​ರನ್ನು ಪಕ್ಷಕ್ಕೆ ಸೇರಿ​ಸಿ​ಕೊ​ಳ್ಳಲು ಪೈಪೋ​ಟಿಗೆ ಇಳಿ​ದಿ​ದ್ದಾರೆ. ಇವ​ರಿ​ಬ್ಬರ ಅಬ್ಬ​ರದ ಎದುರು ಬಿಜೆಪಿ ನಾಯ​ಕರು ಮಂಕಾ​ಗಿದ್ದಾರೆ. ಮಂಜು​ನಾಥ್‌ ರವರು ಮನೆ ಮನೆಗೆ ಮಂಜಣ್ಣ ಹಾಗೂ ಬಾಲ​ಕೃಷ್ಣರವರು ಜನಾ​ಶೀ​ರ್ವಾದ ಭೇಟಿಯ ಹೆಸ​ರಿ​ನಲ್ಲಿ ಚುನಾ​ವಣಾ ಪ್ರಚಾ​ರಕ್ಕೆ ಚಾಲನೆ ನೀಡಿ​ದ್ದಾರೆ. ಪ್ರತಿ ಹಳ್ಳಿ​ಗ​ಳಲ್ಲಿ ಇಬ್ಬರು ನಾಯ​ಕ​ರಿಗೂ ಅಭೂತ ಪೂರ್ವ ಸ್ವಾಗತ ದೊರ​ಕು​ತ್ತಿದೆ. ಉಭಯ ನಾಯ​ಕರು ಗ್ರಾಮದ ಪ್ರಮು​ಖ​ರಿಗೆ ಹೂವಿನ ಹಾರ ಹಾಕಿ ಪಕ್ಷ ಸೇರ್ಪ​ಡೆಗೆ ಆಹ್ವಾನ ನೀಡು​ತ್ತಿ​ದ್ದಾರೆ. ಇನ್ನು ಆಡ​ಳಿತರೂಢ ಬಿಜೆ​ಪಿ ಸ್ಥಿತಿ ಮನೆ​ಯೊಂದು ಮೂರು ಬಾಗಿಲು ಎನ್ನು​ವಂತಾ​ಗಿದೆ.

ಪಕ್ಷಾಂತ​ರದ ಗದ್ದ​ಲವೇ ಇಲ್ಲ :

ಕನಕಪುರ ಕ್ಷೇತ್ರದ ಜತೆಗೆ ಜಿಲ್ಲೆಯ ಉಳಿದ ಮೂರು ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಗೆಲ್ಲಿಸಿ ಡಿ.ಕೆ.​ಶಿ​ವ​ಕು​ಮಾರ್‌ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬೇಕಿದೆ. ಹೀಗಾಗಿ ಅವ​ರಿಗೆ ತಮ್ಮ ಕ್ಷೇತ್ರಕ್ಕಿಂತ ಹೆಚ್ಚಾಗಿ ಬೇರೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲವಿಗಾಗಿ ರಣತಂತ್ರ ರೂಪಿಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿರುವ ಕಾರಣ ಡಿ.ಕೆ.ಶಿವಕುಮಾರ್‌ ಅವರಿಗೆ ಜಿಲ್ಲೆ ಮಾತ್ರವಲ್ಲದೆ ರಾಜ್ಯಾದ್ಯಂತ ಪಕ್ಷದ ಪರವಾಗಿ ಪ್ರಚಾರ ರೂಪಿಸುವ ಹೊಣೆ ಹೆಗಲ ಮೇಲಿದೆ. ಈ ಕ್ಷೇತ್ರ​ದಲ್ಲಿ ಜೆಡಿ​ಎಸ್‌ ಮತ್ತು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರು​ವ​ವರ ಸಂಖ್ಯೆಯೇ ಹೆಚ್ಚಾ​ಗಿ​ದೆ. ಜೆಡಿ​ಎಸ್‌ ಮತ್ತು ಬಿಜೆಪಿ ಅಭ್ಯರ್ಥಿ ಹೆಸರು ಅಂತಿ​ಮ​ಗೊ​ಳ್ಳದ ಕಾರಣ ಪಕ್ಷ ಸಂಘ​ಟ​ನೆ​ಗೂ ಹಿನ್ನ​ಡೆ​ಯಾ​ಗಿದೆ.

ಆಪ​ರೇ​ಷನ್‌ ಜೊತೆಗೆ ರಿವರ್ಸ್‌ ಆಪ​ರೇಷನ್‌

ಬೊಂಬೆನಾಡು ಚನ್ನ​ಪ​ಟ್ಟಣ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಒಂದೆಡೆ ಅಪರೇಷನ್‌, ಮತ್ತೊಂದೆಡೆ ರಿವರ್ಸ್‌ ಆಪರೇಷನ್‌ ಹೆಚ್ಚಿದ್ದರೆ, ಮಗ​ದೊಂದು ಕಡೆ ಮುಖಂಡರು - ಕಾರ್ಯ​ಕ​ರ್ತ​ರನ್ನು ಹಿಡಿದಿಟ್ಡುಕೊಳ್ಳುವುದೇ ಪಕ್ಷಗಳಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

ಈ ಬಾರಿಯ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ಯೋಗೇಶ್ವರ್‌ ಕಳೆದ ಅರು ತಿಂಗಳಿನಿಂದ ಕ್ಷೇತ್ರದಲ್ಲೇ ಬೀಡು ಬಿಟ್ಟು ಬಿಜೆಪಿ ಸಂಘಟನೆ ಬಲಿಷ್ಠಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ವಿರೋಧಿ ಪಾಳಯದವ​ರನ್ನು ಸೆಳೆಯುವ ಮೂಲಕ ಆಪರೇಷನ್‌ ಕಮಲದಲ್ಲಿ ನಿರತರಾಗಿದ್ದಾರೆ.

ಯೋಗೇಶ್ವರ್‌ ರವ​ರ ಸತತ ಆಪರೇಷನ್‌ನಿಂದ ಜೆಡಿಎಸ್‌ ಕೊಂಚ ಕಳೆಗುಂದಿತ್ತಾದರೂ, ಇದೀಗ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕ್ಷೇತ್ರ ಸಂಘಟನೆಯ ಹೊಣೆ ಹೊತ್ತ ಮೇಲೆ ಕಾರ್ಯಕರ್ತರಲ್ಲಿ ಕೊಂಚ ಹುರುಪು ಮೂಡಿದೆ. ಕೂಡ್ಲೂರು ಗ್ರಾಮದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಜೆಡಿಎಸ್‌ ನಿಂದ ಆಪರೇಷನ್‌ ಕಾರ್ಯಾಚರಣೆ ಚುರುಕುಗೊಳ್ಳುವ ಸೂಚನೆ ನೀಡಿದೆ.

ಇನ್ನು ಕಾಂಗ್ರೆಸ್‌ ನಲ್ಲಿ ಪಕ್ಷ ಸಂಘಟನೆ ಚುರುಕುಗೊಳಿಸುವ ಕಾರ್ಯವಾಗಲಿ ಆಪರೇಷನ್‌ ಮಾತಾಗಲಿ ಕೇಳಿ ಬರುತ್ತಿಲ್ಲ. ಇರುವ ಕಾರ್ಯಕರ್ತರು ಕೈ ಬಿಟ್ಟು ಹೋಗ​ದಂತೆ ಹಿಡಿದಿಟ್ಟುಕೊಳ್ಳುವ ಕಾರ್ಯದಲ್ಲಿ ಮಗ್ನವಾಗಿದೆ.

Follow Us:
Download App:
  • android
  • ios