Asianet Suvarna News Asianet Suvarna News

ಬಾಗಿಲು ತೆರೆದು ಬೆತ್ತಲೆ ಸ್ನಾನ, ಉತ್ತರ ಕನ್ನಡದಲ್ಲಿ ವ್ಯಕ್ತಿ ವಿರುದ್ಧ ಬಿತ್ತು ಕೇಸ್

ಬಾಗಿಲು ಹಾಕಿಕೊಳ್ಳದೇ ಬೆತ್ತಲೆಯಾಗಿ ಸ್ನಾನ ಮಾಡುತ್ತಿದ್ದುದಲ್ಲದೇ, ಬಾಗಿಲು ಹಾಕಿಕೊಂಡು ಸ್ನಾನ ಮಾಡು ಎಂದು ಹೇಳಿದ ಸಹೋದರನ ಪತ್ನಿಯನ್ನು ಅವಾಚ್ಯವಾಗಿ ಬೈದು, ಕೈಹಿಡಿದು ಎಳೆದಾಡಿದ ವಿಲಕ್ಷಣ ವ್ಯಕ್ತಿ ವಿರುದ್ಧ ಪೊಲೀಸ್‌ ಪ್ರಕರಣ ದಾಖಲಾಗಿದೆ.

Open door and naked bath case registered against man in Uttara Kannada gow
Author
First Published Feb 6, 2024, 1:48 PM IST

ಅಂಕೋಲಾ (ಫೆ.6): ಬಾಗಿಲು ಹಾಕಿಕೊಳ್ಳದೇ ಬೆತ್ತಲೆಯಾಗಿ ಸ್ನಾನ ಮಾಡುತ್ತಿದ್ದುದಲ್ಲದೇ, ಬಾಗಿಲು ಹಾಕಿಕೊಂಡು ಸ್ನಾನ ಮಾಡು ಎಂದು ಹೇಳಿದ ಸಹೋದರನ ಪತ್ನಿಯನ್ನು ಅವಾಚ್ಯವಾಗಿ ಬೈದು, ಕೈಹಿಡಿದು ಎಳೆದಾಡಿದ ವಿಲಕ್ಷಣ ವ್ಯಕ್ತಿ ವಿರುದ್ಧ ಪೊಲೀಸ್‌ ಪ್ರಕರಣ ದಾಖಲಾಗಿದೆ.

ತಾಲೂಕಿನ ಕಾಕರಮಠದ ಇಸಾಕ್ ಅಹಮ್ಮದ ಶೇಖ (45) ತನ್ನ ತಮ್ಮನ ಹೆಂಡತಿಯ ಜತೆಗೆ ಅಸಭ್ಯವಾಗಿ ವರ್ತಿಸಿದ್ದು, ನೊಂದ ಮಹಿಳೆ ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ಕನ್ನಡದ ಸೂಪರ್ ಡೂಪರ್ ಹಿಟ್‌ ಚಿತ್ರದಲ್ಲಿ ಪಡ್ಡೆ ಹುಡುಗ್ರ ನಿದ್ದೆ ಕದ್ ...

2024 ಜ. 29ರಂದು ಮಧ್ಯಾಹ್ನ  1 ಗಂಟೆಗೆ ಈ ಘಟನೆ ನಡೆದಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ. ಇಸಾಕ್ ಅಹ್ಮದ ಶೇಖ ಬಾತ್‌ರೂಮ್‌ನಲ್ಲಿ ಬಾಗಿಲು ಹಾಕಿಕೊಳ್ಳದೇ ಬೆತ್ತಲೆಯಾಗಿ ಸ್ನಾನ ಮಾಡುತ್ತಿದ್ದನು. ಅಡುಗೆ ಕೋಣೆಯಲ್ಲಿದ್ದ ತಾನು, ಬಾಗಿಲು ಹಾಕಿಕೊಂಡು ಸ್ನಾನ ಮಾಡುವಂತೆ ಹೇಳಿದ್ದೇನೆ. ಆಗ ಮನೆಯಲ್ಲಿ ಬೇರೆ ಸದಸ್ಯರು ಇರಲಿಲ್ಲ. ಬಾತ್‌ರೂಂನಿಂದ ಬಟ್ಟೆ ಹಾಕಿಕೊಂಡು ಬಂದ ಇಸಾಕ್‌ ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲೆ, ಕೈ ಹಿಡಿದು ತಿರುಗಿಸಿ, ಮೈ ಮೇಲಿದ್ದ ಚೂಡಿದಾರದ ವೇಲನ್ನು ಎಳೆದು ಅವಮಾನ ಪಡಿಸಿದ್ದಾನೆ. ಜೀವ ಬೆದರಿಕೆಯನ್ನೂ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಗಂಡನ ತಮ್ಮ ಮೋಸಿನ ಶೇಖ ಬಂದು ಜಗಳ ಬಿಡಿಸಿದ್ದಾನೆ.

ಬ್ಲಾಕ್‌ಬ್ಲಸ್ಟರ್‌ ಹಿಟ್‌ ಸಿನೆಮಾ ನೀಡಿದ ನಂತರ ಸಲ್ಮಾನ್ ಖಾನ್‌ ಜತೆ ನ ...

ಆರೋಪಿ ಇಸಾಕ್ ಅಹಮ್ಮದ ಶೇಖ ವಿರುದ್ಧ ಐಪಿಸಿ 506, 504, 323, 354 ಕಲಂ ಅಡಿಯಲ್ಲಿ ಪಿಎಸೈ ಉದ್ದಪ್ಪ ಧರೆಪ್ಪನವರ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.

Follow Us:
Download App:
  • android
  • ios