ಹೊಸದಾಗಿ ಕೇವಲ 1 ಕೋವಿಡ್ ಪಾಸಿಟಿವ್‌ ಕೇಸ್‌ ವರದಿ ದಾವಣಗೆರೆ ಜಿಲ್ಲೆಯಲ್ಲಿ ಸಕ್ರಿಯ ಕೇಸ್‌ಗಳ ಸಂಖ್ಯೆ ಸಂಖ್ಯೆ 215ಕ್ಕೆ

ದಾವಣಗೆರೆ (ಆ.24): ಹೊಸದಾಗಿ ಸೋಮವಾರ ಕೇವಲ 1 ಪಾಸಿಟಿವ್‌ ಕೇಸ್‌ ವರದಿಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸಕ್ರಿಯ ಕೇಸ್‌ಗಳ ಸಂಖ್ಯೆ ಸಂಖ್ಯೆ 215ಕ್ಕೆ ತಲುಪಿದೆ.

ಜಿಲ್ಲೆಯಲ್ಲಿ ಈವರೆಗೆ 50649 ಪಾಸಿಟಿವ್‌ ಕೇಸ್‌ ವರದಿಯಾಗಿದ್ದು, 598 ಜನ ಕೊರೋನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. 49836 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. 215 ಸಕ್ರಿಯ ಕೇಸ್‌ಗಳಲ್ಲಿ ಸೋಂಕಿತರಿಗೆ ಜಿಲ್ಲಾ, ತಾಲೂಕು, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಾವಣಗೆರೆ ಜಿಲ್ಲೆಯ ಯಾವುದೇ ತಾಲೂಕಿನಿಂದ ಒಂದೇ ಒಂದು ಪಾಸಿಟಿವ್‌ ಕೇಸ್‌ ಬಂದಿಲ್ಲ, ಗುಣಮುಖರಾದ ಯಾರೊಬ್ಬರೂ ಬಿಡುಗಡೆಯಾಗಿಲ್ಲ.

ಹಾಸನದಲ್ಲಿ ಹೆಚ್ಚಿರುವ ಕೋವಿಡ್ ಪಾಸಿಟಿವಿಟಿ ರೇಟ್

 ಅನ್ಯ ಜಿಲ್ಲೆಯಿಂದ 1 ಪಾಸಿಟಿವ್‌ ಕೇಸ್‌ ಮಾತ್ರ ವರದಿಯಾಗಿದೆ. ದಾವಣಗೆರೆ ತಾಲೂಕಿನಲ್ಲಿ ಈವರೆಗೆ 26680 ಪಾಸಿಟಿವ್‌ ಕೇಸ್‌ ಬಂದಿದ್ದು, 26251 ಜನ ಬಿಡುಗಡೆಯಾಗಿದ್ದಾರೆ. ಹರಿಹರ 6884 ಕೇಸ್‌, 6777 ಬಿಡುಗಡೆ, ಜಗಳೂರು 2727 ಕೇಸ್‌, 2694 ಬಿಡುಗಡೆ, ಚನ್ನಗಿರಿ 6383 ಪಾಸಿಟಿವ್‌, 6304 ಬಿಡುಗಡೆ, ಹೊನ್ನಾಳಿ 6422 ಪಾಸಿಟಿವ್‌, 6308 ಬಿಡುಗಡೆ, ಅನ್ಯ ಜಿಲ್ಲೆಯಿಂದ 1555 ಪಾಸಿಟಿವ್‌ ಕೇಸ್‌ ಈವರೆಗೆ ಬಂದಿದ್ದು, 1502 ಜನ ಇಲ್ಲಿವರೆಗೆ ಬಿಡುಗಡೆಯಾಗಿದ್ದಾರೆ. ಕೊರೋನಾ 1 ಮತ್ತು 2ನೇ ಅಲೆಯಿಂದ ನಿನ್ನೆವರೆಗೆ ಜಿಲ್ಲೆಯಲ್ಲಿ 598 ಜನರು ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona