ಹಾಸನದಲ್ಲಿ ಹೆಚ್ಚಿರುವ ಕೋವಿಡ್ ಪಾಸಿಟಿವಿಟಿ ರೇಟ್
- ಕೊರೋನಾ ಪಾಸಿಟಿವಿಟಿ ದರದಲ್ಲಿ ಹೆಚ್ಚಿರುವ ಐದು ಜಿಲ್ಲೆಗಳ ಪೈಕಿ ಹಾಸನ ಜಿಲ್ಲೆಯು ಒಂದು
- ಸೋಂಕು ಸಂಪೂರ್ಣವಾಗಿ ಇಳಿಮುಖವಾಗುವವರೆಗೂ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇಂದ್ರಗಳಿಗೆ ವರ್ಗಾಯಿಸಲು ಸೂಚನೆ
ಹಾಸನ (ಆ.24): ಕೊರೋನಾ ಪಾಸಿಟಿವಿಟಿ ದರದಲ್ಲಿ ಹೆಚ್ಚಿರುವ ಐದು ಜಿಲ್ಲೆಗಳ ಪೈಕಿ ಹಾಸನ ಜಿಲ್ಲೆಯು ಒಂದಾಗಿದ್ದು ಸೋಂಕು ಸಂಪೂರ್ಣವಾಗಿ ಇಳಿಮುಖವಾಗುವವರೆಗೂ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇಂದ್ರಗಳಿಗೆ ವರ್ಗಾಯಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಸೂಚನೆ ನೀಡಿದರು.
ಜಿಲ್ಲಾ ಸಭಾಂಗಣದಲ್ಲಿ ಸೋಮವಾರದ ಸಭೆಯಲ್ಲಿ ಮಾತನಾಡಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಲಸಿಕೆ ಯಾವುದೇ ರೀತಿಯ ಸಮಸ್ಯೆಯಾಗಿಲ್ಲ ಎರಡನೆ ಡೋಸ್ ಪಡೆಯುವವರಿಗೆ ಆದ್ಯತೆ ನೀಡಿ ಮೊದಲನೇ ಡೋಸ್ ಪಡೆಯುವವರೆಗು ಲಸಿಕೆ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನೆಮ್ಮದಿಯ ಸುದ್ದಿ: ಬೆಂಗಳೂರಿನಲ್ಲಿ ಕೊರೋನಾ ಸಾವಿನ ಪ್ರಮಾಣ ಶೂನ್ಯ
ಶಾಲೆ ಕಾಲೇಜಿಗೆ ಹಾಜರಾಗುವ ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸಿ ಆರೋಗ್ಯ ಸುರಕ್ಷತೆಗೆ ಅದ್ಯತೆ ನೀಡಿ ಶೌಚಾಲಯಗಳ ಸ್ವಚ್ಛತೆ ಬಗ್ಗೆ ಗಮನ ಹರಿಸಿ ಪ್ರತೀ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿ ನಾಳೆ ಸಂಜೆಯೊಳಗೆ ವಾಸ್ತವ ಸ್ಥಿತಿ ಬಗ್ಗೆ ವರದಿ ನೀಡುವಂತೆ ನಿರ್ದೇಶನ ನೀಡಿದರು.
ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡ ಮಾತನಾಡಿ ಮಳೆಯಿಂದಾಗಿ ಅರಸೀಕೆರೆ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಶಾಲಾ ಕಾಲೆಜು ಕಟ್ಟಡ ಹಾನಿಯಾಗಿದೆ. ಅದ್ದರಿಂದ ತರಗತಿಗಳು ಆರಂಭವಾಗುವ ಮುನ್ನ ಸರಿಪಡಿಸಿ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.