ರಾಜ್ಯದಲ್ಲಿ ಈಗಾಗಲೇ ಕೊರೋನಾ ಲಸಿಕಾ ಕಾರ್ಯಕ್ರಮ ಆರಂಭವಾಗುತ್ತಿದೆ. ಲಕ್ಷಾಂತರ ಜನರಿಗೆ ಲಸಿಕೆ ಈಗಾಗಲೇ ನೀಡಲಾಗಿದ್ದು ಪಾಸಿಟಿವ್ ಕೇಸ್‌ಗಳು ಇಳಿಯುತ್ತಿದೆ. ಇದೀಗ ಇಲ್ಲಿ ಒಂದೇ ಒಂದು ಪ್ರಕರಣ ಪತ್ತೆಯಾಗಿದೆ.
ಚಿಕ್ಕಮಗಳೂರು (ಜ.21): ಜಿಲ್ಲೆಯಲ್ಲಿ ಇಳಿಮುಖ ಆಗಿರುವ ಕೋವಿಡ್-19 ಪಾಸಿಟಿವ್ ಸಂಖ್ಯೆ ಬುಧವಾರ ಒಂದು ಸಂಖ್ಯೆಗೆ ಕುಸಿದಿದೆ.
ದಿನೇ ದಿನೇ ವೈರಸ್ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 13,876ಕ್ಕೆ ಮುಟ್ಟಿದ್ದು, ಇವರಲ್ಲಿ 13,668 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
139 ಜನ ಮೃತಪಟ್ಟಿದ್ದಾರೆ. 11 ಮಂದಿ ಬುಧವಾರ ಡಿಸ್ಚಾರ್ಜ್ ಆಗಿದ್ದು, ಸದ್ಯ 58 ಸಕ್ರಿಯ ಪ್ರಕರಣಗಳು ಇವೆ. ಜಿಲ್ಲೆಯಲ್ಲಿ ಬುಧವಾರ 708 ಮಂದಿಗೆ ಕೋವಿಡ್ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದ್ದು, ಈ ಪೈಕಿ 477 ಲಸಿಕೆ ಹಾಕಲಾಗಿದೆ.
ಬೆಂಗ್ಳೂರಲ್ಲಿ 20000 ಅಧಿಕ ಮಂದಿಗೆ ಕೊರೋನಾ ಲಸಿಕೆ ..
ಜಿಲ್ಲೆಯಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮ ಮುಂದುವರಿದಿದೆ. ವಿವಿಧೆಡೆ ಲಸಿಕೆ ಕಾರ್ಯ ನಡೆಸಲಾಗುತ್ತಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 21, 2021, 11:58 AM IST