ಹುಬ್ಬಳ್ಳಿ(ಫೆ.28): ಇನ್ಸ್ಟಾಗ್ರಾಮ್‌ ತೆಯೊಂದರಲ್ಲಿ ಐಫೋನ್‌ ಜಾಹೀರಾತು ನೋಡಿ ಖರೀದಿಗೆ ಮುಂದಾದ ಗ್ರಾಹಕನಿಗೆ ಸಾಧಾರಣ ಬೇಸಿಕ್‌ ಮೊಬೈಲ್‌ ಕಳಿಸಿ ಮೋಸ ಮಾಡಿದ ಬಗ್ಗೆ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಧಾರವಾಡದ ಗಾಂಧಿ ಚೌಕದ ಬಳಿಯ ಕಾಮನಕಟ್ಟಿ ಸರ್ಕಲ್‌ ನಿವಾಸಿ ಕಮಲ್‌ ಜಗದೀಶ ಬೋರಕರ್‌ ಮೋಸ ಹೋಗಿದ್ದಾರೆ. ಲಲವಾನಿ ಎಂಬಾತ ತನ್ನ ಇನ್ಸ್ಟಾಗ್ರಾಮ್‌ ಖಾತೆ the-iphone-shopನಲ್ಲಿ ಐಫೋನ್‌-11 ಅನ್ನು 55 ಸಾವಿರಕ್ಕೆ ಮಾರುವುದಾಗಿ ಜಾಹೀರಾತು ಹಾಕಿದ್ದ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದನ್ನು ನೋಡಿ ತನ್ನ ಅಣ್ಣ ಯಶ್‌ ಗೆಳೆಯ ಚಿರಾಗ ಎಂಬುವವರಿಗೆ ಮೊಬೈಲ್‌ ಬೇಕಾಗಿದ್ದರಿಂದ 53 ಸಾವಿರಕ್ಕೆ ನೀಡುವುದಾಗಿ ತಿಳಿಸಿದ್ದೆ. ಬಳಿಕ 44 ಸಾವಿರ ಮೊತ್ತವನ್ನು ತನ್ನ ಗೆಳೆಯ ಸಿದ್ದಲಿಂಗೇಶ್ವರ ಎಂಬಾತನ ಪೋನ್‌ ಪೇ ಖಾತೆಯಿಂದ ಲಲವಾನಿ ಐಡಿಬಿಐ ಬ್ಯಾಂಕ್‌ಗೆ ಕಳಿಸಿದ್ದೇನೆ. 

ಬಳಿಕ ಕೋರಿಯರ್‌ ಮೂಲಕ ಬಂದ ಮೊಬೈಲ್‌ಗೆ 9 ಸಾವಿರ ನೀಡಿ ಪಡೆದಿದ್ದೇವೆ. ಮನೆಗೆ ಬಂದು ಬಾಕ್ಸ್‌ ತೆರೆದಾಗ ಐಫೋನ್‌ ಬದಲಾಗಿ ಬೇಸಿಕ್‌ ಮೊಬೈಲ್‌ ಇದ್ದುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಸೈಬರ್‌ ಠಾಣೆಯಿಂದ ತನಿಖೆ ಮುಂದುವರೆದಿದೆ.