ಗಗನಕ್ಕೇರಿದ ಈರುಳ್ಳಿ ದರ: ಕಂಗಾಲಾದ ಗ್ರಾಹಕ..!
ಈರುಳ್ಳಿಯೂ ದಿನನಿತ್ಯದ ಅಗತ್ಯ ಆಹಾರ ವಸ್ತು. ಗ್ರಾಹಕರಿಗೆ ಈರುಳ್ಳಿ ದರ ಏರಿಕೆ ಬಿಸಿ ತಟ್ಟಲಾರಂಬಿಸಿದೆ. ತರಕಾರಿಗಳ ಬೆಲೆಗಳು ದೇಶಾದ್ಯಂತ ಏರುತ್ತಿವೆ. ಟೊಮೆಟೋ ದರ ಇಳಿಕೆ ಆಗುತ್ತಿದ್ದರೆ, ಈರುಳ್ಳಿ ದರ ಏರುಮುಖವಾಗುತ್ತಿದೆ. ದರ ನಿಯಂತ್ರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.
ಚಿಕ್ಕಬಳ್ಳಾಪುರ(ಆ.27): ಟೊಮೆಟೋ ನಂತರ ಈಗ ಈರುಳ್ಳಿ ದರ ಗಗನಕ್ಕೇರಿದೆ. ದೇಶಾದ್ಯಂತ ಈರುಳ್ಳಿ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಕೇಂದ್ರದ ಇತ್ತೀಚಿನ ಮಹತ್ವದ ನಿರ್ಧಾರದಿಂದಾಗಿ ಚಿಕ್ಕಬಳ್ಳಾಪುರದಲ್ಲಿ ಸುಮಾರು 20 ರು.ಗಳಷ್ಟು ಏರಿಕೆಯಾಗಿದೆ
ಈರುಳ್ಳಿಯೂ ದಿನನಿತ್ಯದ ಅಗತ್ಯ ಆಹಾರ ವಸ್ತು. ಗ್ರಾಹಕರಿಗೆ ಈರುಳ್ಳಿ ದರ ಏರಿಕೆ ಬಿಸಿ ತಟ್ಟಲಾರಂಬಿಸಿದೆ. ತರಕಾರಿಗಳ ಬೆಲೆಗಳು ದೇಶಾದ್ಯಂತ ಏರುತ್ತಿವೆ. ಟೊಮೆಟೋ ದರ ಇಳಿಕೆ ಆಗುತ್ತಿದ್ದರೆ, ಈರುಳ್ಳಿ ದರ ಏರುಮುಖವಾಗುತ್ತಿದೆ. ದರ ನಿಯಂತ್ರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ರಪ್ತು ಮೇಲೆ ಶೇ. 40 ಹೆಚ್ಚುವರಿ ತೆರಿಗೆ ವಿಧಿಸಿದೆ, ಮತ್ತ ಕೆಜಿ ಈರುಳ್ಳಿಗೆ 25 ರು.ಗಳಿಗೆ ನೀಡುವುದಾಗಿ ಹೇಳಿತ್ತು. ಆದರೆ ಕಳೆದ ಒಂದು ವಾರದಲ್ಲಿ ಈರುಳ್ಳಿ ಬೆಲೆ ಪ್ರತಿ ಕ್ವಿಂಟಾಲ್‌ಗೆ ಶೇ.50ರಷ್ಟುಏರಿಕೆ ಕಂಡಿದೆ. ಸೆಪ್ಟೆಂಬರ್ ವೇಳೆಗೆ ಈರುಳ್ಳಿ ದರ ಮತ್ತಷ್ಟುಏರಿಕೆ ಆಗಲಿದೆ.
ವರಮಹಾಲಕ್ಷ್ಮಿ ಹಬ್ಬ: ಗಗನಕ್ಕೇರಿದ ಹೂವಿನ ದರ..!
ಬೇಡಿಕೆ ಹೆಚ್ಚಳ, ಪೂರೈಕೆ ಕೊರತೆ
ಪೂರೈಕೆಗೆ ಹೋಲಿಸಿದರೆ ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಮಳೆಯಿಂದಾಗಿ ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿ ಈರುಳ್ಳಿಯ ಹೊಸ ಬೆಳೆ ಬರುವುದು ಒಂದು ತಿಂಗಳು ವಿಳಂಬವಾಗಲಿದೆ. ಅಹ್ಮದ್‌ನಗರದಲ್ಲಿಯೂ ಪೂರೈಕೆ ಕಡಿಮೆ ಇದೆ. ಇದಲ್ಲದೆ, ಹೊರದೇಶಗಳಲ್ಲಿಯೂ ಈರುಳ್ಳಿಗೆ ಹೆಚ್ಚಿನ ಬೇಡಿಕೆ ಇದೆ.
ಚಿಕ್ಕಬಳ್ಳಾಪುರ ಎಪಿಎಂಸಿಯಲ್ಲಿ ಈರುಳ್ಳಿಯ ಸಗಟು ಬೆಲೆ ಹೆಚ್ಚಳವಾಗಿದೆ. ಆ.4ರಂದು ಕ್ವಿಂಟಲ್‌ಗೆ 900ರು.ಗಳಿಂದ 1400 ರು.ಗಳ ವರೆಗೆ ಇದ್ದ ದರ, ಈಗ 2,300ರಿಂದ 3300 ರು. ತಲುಪಿದೆ. ಕಳೆದ ಎಂಟು ತಿಂಗಳಲ್ಲಿ ದಾಖಲಾದ ಈರುಳ್ಳಿಯ ಗರಿಷ್ಠ ಸಗಟು ದರ ಇದಾಗಿದೆ.
ವಯಸ್ಸಾಗಿದೆ, ನನಗೆ ಎಂಪಿ ಟಿಕೆಟ್ ಕೊಡಲ್ಲ: ಸಂಸದ ಬಚ್ಚೇಗೌಡ
ಈರುಳ್ಳಿ ಆವಕ ಕುಸಿತ
ಚಿತ್ರದುರ್ಗದ ಚಳ್ಳಕೆರೆ, ಹೊಸದುರ್ಗ, ಆಂದ್ರಪ್ರದೇಶ, ತೆಲಾಂಗಾಣ ಮತ್ತು ಮಹಾರಾಷ್ಟ್ರದ ರೈತರು ಮುಂಗಾಗು ಬಿತ್ತನೆ ಚಟುವಟಿಕೆಯಲ್ಲಿ ನಿರತರಾಗಿರುವ ಕಾರಣ ಮಾರುಕಟ್ಟೆಗೆ ಈರುಳ್ಳಿ ಬರುವುದೂ ಕಡಿಮೆಯಾಗಿದೆ. ದಿನಕ್ಕೆ 200-300 ಕ್ವಿಂಟಾಲ್ ಬರುತ್ತಿದ್ದ ಈರುಳ್ಳಿ, ಈಗ 100-150 ಕ್ವಿಂಟಾಲ್‌ಗೆ ಕುಸಿದಿದೆ. ಸಣ್ಣ ಮತ್ತು ಮಧ್ಯಮ ರೈತರು ಸಂಗ್ರಹಿಸಿದ ಬೇಸಿಗೆ ಈರುಳ್ಳಿ ದಾಸ್ತಾನು ಕೂಡ ಮುಗಿಯುತ್ತಾ ಬಂದಿದೆ. ದೊಡ್ಡ ರೈತರು ಮಾತ್ರ ತಮ್ಮ ಸಂಗ್ರಹದಲ್ಲಿ ಈರುಳ್ಳಿ ದಾಸ್ತಾನು ಹೊಂದಿದ್ದಾರೆ. ಇವೆಲ್ಲ ಕಾರಣಗಳಿಂದ ಈರುಳ್ಳಿ ಬೆಲೆ ಏರಿಕೆ ಆಗಿದೆ ಎನ್ನುತ್ತಾರೆ ಈರುಳ್ಳಿ ವರ್ತಕರು.
ಟೊಮೋಟೊ ಬೆಲೆ ಕೆಜಿಗೆ 150ರೂಗೆ ಎರಿಕೆ ಆಗಿ, ಈಗ 20-30 ರೂಗೆ ಇಳಿತು ಎಂದು ಕೊಳ್ಳುತ್ತಿದ್ದಂತೆ, ಕೆಜಿಗೆ 10-15 ರು.ಗಳಿದ್ದ ಈರುಳ್ಳಿ ಬೆಲೆ ತಿಂಗಳಿಂದ ದಿನೇ ದಿನೇ ಏರುತ್ತಾ ಬಂದು ಈಗ 38ರಿಂದ 44 ರು.ಗಳನ್ನು ತಲುಪಿದೆ.