ಗೋಕರ್ಣ ಬೀಚ್‌ಗೆ ಪ್ರವಾಸಿಗರಿಗೆ ನಿಷೇಧ
- ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ವಿಶ್ವಪ್ರಸಿದ್ಧ ಗೋಕರ್ಣ ಓಂ ಬೀಚ್ ಸೇರಿದಂತೆ ಕುಮಟಾ ತಾಲೂಕಿನ ಪ್ರಮುಖ ಕಡಲತೀರಗಳಲ್ಲಿ ದಂಡ ಪ್ರಕ್ರಿಯಾ ಸಂಹಿತೆ
- 1973ರ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಅ. 9ವರೆಗೆ ಸ್ಥಳೀಯ ತಹಸೀಲ್ದಾರ್ ವಿವೇಕ ಶೇಣ್ವಿ ಆದೇಶ
ಕಾರವಾರ (ಸೆ.14): ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ವಿಶ್ವಪ್ರಸಿದ್ಧ ಗೋಕರ್ಣ ಓಂ ಬೀಚ್ ಸೇರಿದಂತೆ ಕುಮಟಾ ತಾಲೂಕಿನ ಪ್ರಮುಖ ಕಡಲತೀರಗಳಲ್ಲಿ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಅ. 9ವರೆಗೆ ಸ್ಥಳೀಯ ತಹಸೀಲ್ದಾರ್ ವಿವೇಕ ಶೇಣ್ವಿ ಆದೇಶ ಹೊರಡಿಸಿದ್ದಾರೆ.
ಕುಮಟಾ ಪೊಲೀಸ್ ಠಾಣೆ ವ್ಯಾಪ್ತಿಯ ಬಾಡ, ಗುಡೇಅಂಗಡಿ, ಕಾಗಾಲ, ಅಘನಾಶಿನಿ, ಧಾರೇಶ್ವರ ಹಾಗೂ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓಂ ಬೀಚ್, ಕುಡ್ಲೆ ಬೀಚ್, ಮೇನ್ ಬೀಚ್ ಮತ್ತು ಹಾಫ್ ಮೂನ್ ಬೀಚ್‌ಗಳಿಗೆ ಆಗಮಿಸುವ ಪ್ರವಾಸಿಗರು ಕೆಲವರು ಆಕಸ್ಮಿಕವಾಗಿ ಸಮುದ್ರ ಅಲೆಗೆ ಸಿಲುಕಿ ಅಥವಾ ಈಜಲು ಸಮುದ್ರದಲ್ಲಿ ಇಳಿದು ಅಲೆಯ ಸೆಳೆತಕ್ಕೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಕರ್ಫ್ಯೂ ಇದ್ರೂ ಬೀಚ್‌ನಲ್ಲಿ ಜನವೋ ಜನ: ಕಡಿವಾಣಕ್ಕೆ ಉಡುಪಿ ಜಿಲ್ಲಾಡಳಿತ ಹೊಸ ಪ್ಲಾನ್
ಈ ಹಿನ್ನೆಲೆಯಲ್ಲಿ 1 ತಿಂಗಳ ಕಾಲ ಯಾರೂ ಸಮುದ್ರಕ್ಕಿಳಿಯದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.