Asianet Suvarna News Asianet Suvarna News

ರಾಯಚೂರು: ಪೊಲೀಸ್ ಚೆಕ್‌ಪೋಸ್ಟ್‌ಗೆ ಲಾರಿ ಡಿಕ್ಕಿ, ಎರಡು ತುಂಡಾದ ಚಾಲಕನ ದೇಹ

*  ರಾಯಚೂರು ತಾಲೂಕಿನ ಶಕ್ತಿನಗರದ ಬಳಿ ನಡೆದ ಘಟನೆ
*  ಚಾಲಕನ ನಿಯಂತ್ರಣ ತಪ್ಪಿ ಪೊಲೀಸ್‌ ಚೆಕ್‌ಪೋಸ್ಟ್‌ಗೆ ಡಿಕ್ಕಿ ಹೊಡೆದ ಲಾರಿ 
*  ಈ ಸಂಬಂಧ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
 

One Killed in Truck Accident in Raichur grg
Author
Bengaluru, First Published Sep 19, 2021, 2:53 PM IST
  • Facebook
  • Twitter
  • Whatsapp

ರಾಯಚೂರು(ಸೆ.19): ಪೊಲೀಸ್ ಚೆಕ್‌ಪೋಸ್ಟ್‌ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಲಾರಿ ಚಾಲಕ ಸಾವು, ಸಹಾಯಕನಿಗೆ ಗಂಭೀರವಾದ ಗಾಯಗಳಾದ ಘಟನೆ ತಾಲೂಕಿನ ಶಕ್ತಿನಗರದ ಬಳಿ ಇಂದು(ಭಾನುವಾರ) ನಡೆದಿದೆ. 

ಟೈಯರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಪೊಲೀಸ್‌ ಚೆಕ್‌ಪೋಸ್ಟ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.  

One Killed in Truck Accident in Raichur grg

ಕೋಲಾರ; ಬಸ್-ಟಾಟಾ ಏಸ್ ನಡುವೆ ಸಿಕ್ಕಿ ಬೈಕ್ ಅಪ್ಪಚ್ಚಿ, ತಂದೆ-ಮಗಳ ದುರ್ಮರಣ

ಚೆಕ್‌ಪೋಸ್ಟ್‌ಗೆ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಚಾಲಕನ ದೇಹ ಎರಡು ತುಂಡಾಗಿದ್ದು, ಇಡೀ ಚೆಕ್ ಪೋಸ್ಟ್ ಸಂಪೂರ್ಣ ಧ್ವಂಸವಾಗಿದೆ. ಚಾಲಕನ ಮೃತದೇಹವನ್ನ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

Follow Us:
Download App:
  • android
  • ios