ಬೆಂಗಳೂರು (ಸೆ.18) : ಕುಡಿದು ಕಾರು ಚಾಲನೆ ಮಾಡಿದ್ದರಿಂದ ಆದ ಸರಣಿ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರನೋರ್ವ ಮೃತಪಟ್ಟ ಘಟನೆ ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿ ನಡೆದಿದೆ.

ಆರೋಪಿ ರೋಹಿತ್ ಕೇಡಿಯಾ ಎಂಬಾತ ಕುಡಿದು ಕಾರು ಚಲಾಯಿಸಿಕೊಂಡು ಬರುವಾಗ ಸರಣಿ ಅಪಘಾತವಾಗಿದೆ. ಈ ವೇಳೆ ರಿಚ್ಮಂಡ್ ವೃತ್ತದ ಬಳಿ ನಿಂತಿದ್ದ ದ್ವಿಚಕ್ರ ವಾಹನ ಸವಾರ ಕಿರಣ್ ಎಂಬಾತ ಸಾವಿಗೀಡಾಗಿದ್ದಾನೆ. 

ಇನ್ಶುರೆನ್ಸ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಿರಣ್ ಬೈಕಿಗೆ ಕಾರು ಗುದ್ದಿದ್ದು ಇದರಿಂದ ಸ್ಥಳದಲ್ಲಿಯೇ ಕಿರಣ್ ಸಾವಿಗೀಡಾಗಿದ್ದಾರೆ. 

ಮಗನ ಕೊಲೆಗೆ ಅಪ್ಪನೇ ಸುಪಾರಿ ಕೊಟ್ಟ : ಪುತ್ರ ದ್ವೇಷಕ್ಕೆ ಕಾರಣವೇ ಇದು! .

ಈ ಸಂಬಂಧ 304 ರ ಅಡಿಯಲ್ಲಿ ರೋಹಿತ್ ಕೇಡಿಯಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

ವಿಲ್ಸನ್ ಗಾರ್ಡನ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 14 ದಿನಗಳ ಕಾಲ ರೋಹಿತ್‌ನನ್ನು ನ್ಯಾಯಾಂಗ ಬಂಧನ್ಕೆ ಒಪ್ಪಿಸಲಾಗಿದೆ. ವಾಹನ ಚಾಲನೆ ಮಾಡುವಾಗ ರೋಹಿತ್ ಡ್ರಗ್ಸ್ ಸೇವಿಸಿದ್ದನೇ ಎನ್ನುವ ಬಗ್ಗೆಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.