ಬೆಳಗಾವಿ(ಜೂ.25): ಮಹಾಮಾರಿ ಕೊರೋನಾ ವೈರಸ್‌ ಬುಧವಾರ ತನ್ನ ಅಟ್ಟಹಾಸ ಮುಂದುವರಿಸಿದೆ. ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಬುಲೆಟಿನ್‌ನಲ್ಲಿ ಜಿಲ್ಲೆಯ ಓರ್ವ ಯುವತಿಗೆ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 312ಕ್ಕೆ ಏರಿಕೆಯಾದಂತಾಗಿದೆ. 

ನೆರೆಯ ಮಹಾರಾಷ್ಟ್ರದಿಂದ ಮರಳಿದ 20 ವರ್ಷದ ಯುವತಿ ಪಿ- 9732 ಗೆ ಸೋಂಕು ದೃಢವಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಹಾಗೂ ಶಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಜಿಲ್ಲೆಯ ಜನತೆಯಲ್ಲಿ ಆತಂಕ ಎದುರಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಸೋಂಕಿತರ ಪ್ರಕರಣಗಳು ಕಡಿಮೆ ಪ್ರಮಾಣದಲ್ಲಿ ಪತ್ತೆಯಾಗುತ್ತಿವೆ. ಅಲ್ಲದೇ ಬುಧವಾರ ಕೇವಲ ಒಂದು ಪ್ರಕರಣ ದೃಢವಾಗಿದ್ದರಿಂದ ಜಿಲ್ಲೆಯಲ್ಲಿ ಜನರು ಸ್ವಲ್ಪಮಟ್ಟಿಗೆ ನಿರಾಳವಾಗಿದ್ದಾರೆ.

SSLC ಎಕ್ಸಾಮ್‌: ಕೊರೋನಾ ಸೋಂಕಿತ ಸೇರಿ ನಾಲ್ವರಿಗಿಲ್ಲ ಪರೀಕ್ಷೆ ಬರೆಯಲು ಅವಕಾಶ

ಇನ್ನು ಬರಬೇಕಿವೆ 2004 ವರದಿ:

ಜಿಲ್ಲೆಯಾದ್ಯಂತ 22055 ಜನರ ಮೇಲೆ ನಿಗಾವಹಿಸಲಾಗಿದ್ದು, 7078 ಜನರು 14 ದಿನ ಹೋಂ ಕ್ವಾರಂಟೈನಲ್ಲಿಡಲಾಗಿದೆ. 21 ಜನರನ್ನು ಐಸೋಲೇಶನಲ್ಲಿದ್ದು, 4159 ಜನರು 14 ದಿನದ ಹಾಗೂ 10797 ಜನರು 28 ದಿನದ ಕ್ವಾರಂಟೈನ್‌ ಪೂರ್ಣಗೊಳಿಸಿದ್ದಾರೆ. ಇನ್ನೂ 20759 ಜನರ ರಕ್ತ ಹಾಗೂ ಕಫ ಮಾದರಿಯನ್ನು ಸಂಗ್ರಹಿಸಲಾಗಿದೆ. ನೆಗೆಟಿವ್‌ 17971 ಬಂದಿವೆ. 21 ಪ್ರಕರಣಗಳು ಸಕ್ರಿಯವಾಗಿದ್ದು, ಇನ್ನೂ 2004 ಜನರ ವರದಿ ಬರುವುದು ಬಾಕಿಯಿದೆ. 292 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.