KSRTCಯಿಂದ ಗುಡ್ ನ್ಯೂಸ್ : ಹಬ್ಬಕ್ಕೆ ಕೊಡುಗೆ ಇದು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡುತ್ತಿದೆ. ವಿಶೇಷ ಸೇವೆ ಆರಂ ಮಾಡುತ್ತಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ
ಬೆಂಗಳೂರು (ಆ.21) : ಕೆಎಸ್‌ಆರ್‌ಟಿಸಿಯು ಓಣಂ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಆ.24ರಿಂದ ಸೆ.6ರ ವರೆಗೆ ಬೆಂಗಳೂರು ಮತ್ತು ಮೈಸೂರಿನಿಂದ ಕೇರಳದ ವಿವಿಧ ಸ್ಥಳಗಳಿಗೆ ವಿಶೇಷ ಬಸ್ ಕಾರ್ಯಾಚರಣೆ ಮಾಡಲಿದೆ.
ಬೆಂಗಳೂರಿನಿಂದ ಕಣ್ಣೂರು, ಎರ್ನಾಕುಲಂ, ಕಾನ್ಹಂಗಾಡ್, ಕಾಸರಗೋಡು, ಕೊಟ್ಟಾಯಂ, ಕಲ್ಲಿಕೋಟೆ, ಪಾಲಘಾಟ್, ತ್ರಿಶೂರು, ತಿರುವನಂತಪುರ, ವಡಕರಾಕ್ಕೆ ಬಸ್ ಕಾರ್ಯಾಚರಣೆ ಆಗಲಿವೆ. ಮತ್ತೆ ಈ ಸ್ಥಳಗಳಿಂದಲೂ ಬೆಂಗಳೂರಿಗೆ ಬಸ್ ಸಂಚರಿಸಲಿವೆ.
ಮೈಸೂರಿಗೆ ಸ್ವಚ್ಛ ನಗರಿ ಗರಿ: Rank ಕುಸಿದರೂ ಸಚಿವರು ಹೇಳಿದ್ದಿಷ್ಟು..!...
ಕೊರೋನಾ ಹಿನ್ನೆಲೆಯಲ್ಲಿ ಅಂತರ್ ರಾಜ್ಯ ಬಸ್ ಸೇವೆ ಸ್ಥಗಿತಗೊಂಡಿದ್ದು, ಓಣಂ ಹಿನ್ನೆಲೆಯಲ್ಲಿ ಎರಡೂ ಸರ್ಕಾರಗಳ ಸಮ್ಮತಿ ಮೇರೆಗೆ ಈ ವಿಶೇಷ ಬಸ್‌ಗಳ ಕಾರ್ಯಾಚರಣೆಗೆ ನಿರ್ಧರಿಸಲಾಗಿದೆ.
ಬೆಂಗಳೂರು: KSRTC ಬಸ್ ನಿಲ್ದಾಣವಾಯ್ತು ಕೊರೋನಾ ಸೆಂಟರ್..!
ಕೇರಳ ಸರ್ಕಾರದ ಆದೇಶದನ್ವಯ ಕರ್ನಾಟಕದಿಂದ ಕೇರಳಕ್ಕೆ ಪ್ರಯಾಣಿಸುವವರು ಕಡ್ಡಾಯವಾಗಿ ಕೇರಳ ಸರ್ಕಾರದ ಸೇವಾ ಸಿಂಧು ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಾಗಿದೆ. (ಡಿಡಿಡಿ.ks್ಟಠ್ಚಿ.ಜ್ಞಿ ) ವೆಬ್‌ಸೈಟ್ ಹಾಗೂ ನಿಗಮದ ಪ್ರಾಂಚೈಸಿ ಕೌಂಟರ್‌ಗಳ ಮೂಲಕವೂ ಮುಂಗಡ ಆಸನ ಕಾಯ್ದಿರಿಸಬಹುದು ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.