Asianet Suvarna News Asianet Suvarna News

27ರಂದು ತೀರ್ಥಹಳ್ಳಿಯಲ್ಲಿ ಕೋಟ್ಯಂತರ ರು. ಕಾಮಗಾರಿಗೆ ಸಿಎಂ ಚಾಲನೆ

ಪಟ್ಟಣಕ್ಕೆ ನ.27ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ. ಮೊದಲ ಬಾರಿಗೆ ಆಗಮಿಸುತ್ತಿರುವ ಅವರು ನೂರಾರು ಕೋಟಿ ರು. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ತಾಲೂಕಿನ ಜನತೆ ಅವರನ್ನು ಆತ್ಮೀಯವಾಗಿ ಸ್ವಾಗತಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದರು.

On 27th in Tirthahalli crores of Rs. CM drive for development work says araga
Author
First Published Nov 17, 2022, 8:45 AM IST

ತೀರ್ಥಹಳ್ಳಿ (ನ.17) : ಪಟ್ಟಣಕ್ಕೆ ನ.27ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ. ಮೊದಲ ಬಾರಿಗೆ ಆಗಮಿಸುತ್ತಿರುವ ಅವರು ನೂರಾರು ಕೋಟಿ ರು. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ತಾಲೂಕಿನ ಜನತೆ ಅವರನ್ನು ಆತ್ಮೀಯವಾಗಿ ಸ್ವಾಗತಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದರು.

ಪಪಂ ಅಧ್ಯಕ್ಷೆ ಸುಶೀಲಾ ಶೆಟ್ಟಿಅವರ ಅದ್ಯಕ್ಷತೆಯಲ್ಲಿ ಬುಧವಾರ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಮಧ್ಯದಲ್ಲಿ ಆಗಮಿಸಿ, ತಾಲೂಕಿನ ಕುಡಿಯುವ ನೀರಿನ ಯೋಜನೆಗೆ .450 ಕೋಟಿ ಅನುದಾನ ನೀಡಿದ್ದು, ಈಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಂದೇ ದಿನ .346 ಕೋಟಿಗಳಿಗೆ ಮಂಜೂರಾತಿ ನೀಡಿದ್ದಾರೆ. ಸಿಎಂ ಜೊತೆಯಲ್ಲಿ ಜಿಲ್ಲಾ ಉಸ್ತುವಾರಿ ನಾರಾಯಣಗೌಡ, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಉನ್ನತ ಶಿಕ್ಷಣ ಇಲಾಖೆ ಸಚಿವರು ಸೇರಿದಂತೆ ವಿಧಾನ ಪರಿಷತ್ತು ಸದಸ್ಯರು ಮತ್ತು ಪ್ರಮುಖರು ಆಗಮಿಸಲಿದ್ದಾರೆ. ಇದೊಂದು ಸರ್ಕಾರಿ ಕಾರ್ಯಕ್ರಮವಾಗಿದೆ ಎಂದರು.

ಆರೋಗ್ಯ ಸೌಲಭ್ಯ ಒದಗಿಸುವುದು ನಮ್ಮ ಕರ್ತವ್ಯ: ಗೃಹ ಸಚಿವ ಆರಗ ಜ್ಞಾನೇಂದ್ರ

ಅಂದು ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯಮಂತ್ರಿ ಅವರು ರಾಷ್ಟ್ರೀಯ ಹೆದ್ದಾರಿ-169ರ ಕುವೆಂಪು ವೃತ್ತದಿಂದ ಮಂಡಗದ್ದೆ ನೆಲ್ಲಿಸರ ಕ್ಯಾಂಪ್‌ವರೆಗಿನ .700 ಕೋಟಿ ಕಾಮಗಾರಿ ಸೇರಿದಂತೆ .8 ಕೋಟಿ ವೆಚ್ಚದಲ್ಲಿ ಕೆಸರೆ- ಘಂಟೆಹಕ್ಕಲು ಬೈಪಾಸ್‌ ರಸ್ತೆ, ತಲಾ .6.5 ಕೋಟಿ ವೆಚ್ಚದ ಆಯುಷ್‌ ಆಸ್ಪತೆ ಕಟ್ಟಡಕ್ಕೆ ಶಂಕುಸ್ಥಾಪನೆ ಮತ್ತು ನಗರೋತ್ಥಾನ ಯೋಜನೆ, ಸರ್ಕಾರಿ ಕಾಲೇಜಿನ ವಿಸ್ತರಣಾ ಕಟ್ಟಡ ಉದ್ಘಾಟನೆ, .25 ಕೋಟಿ ವೆಚ್ಚದ ಕೋಣಂದೂರು ಪೇಟೆಯ ಚತುಷ್ಪಥ ರಸ್ತೆ, .1 ಕೋಟಿ ವೆಚ್ಚದಲ್ಲಿ ಪಟ್ಟಣದ ಸಾರ್ವಜನಿಕ ಕ್ರೀಡಾಂಗಣ ಕಾಮಗಾರಿ ಮುಂತಾದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.

ಮಾತಿನ ಚಕಮಕಿ:

ಸಚಿವರ ಆಗಮನಕ್ಕೆ ಮುನ್ನ ನಡೆದ ಚರ್ಚೆಯಲ್ಲಿ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪಪಂ ಕಟ್ಟಡವನ್ನು ನ.27ರಂದು ಆಗಮಿಸಲಿರುವ ಮುಖ್ಯಮಂತ್ರಿ ಅವರಿಂದ ಉದ್ಘಾಟಿಸಲು ತೀರ್ಮಾನಿಸಲಾಯಿತು. ಆದರೆ ನೂತನ ಕಟ್ಟಡಕ್ಕೆ ಅಗತ್ಯವಿರುವ ಪೀಠೋಪಕರಣ ಖರೀದಿ ಮತ್ತು ಧ್ವನಿ ವ್ಯವಸ್ಥೆಗೆ ಕರೆದಿರುವ ಟೆಂಡರ್‌ ಪ್ರಕ್ರಿಯೆಯಲ್ಲಿ ಎಲ್ಲ ಸದಸ್ಯರ ಗಮನಕ್ಕೆ ತಂದಿಲ್ಲ ಎಂದು ಕಾಂಗ್ರೆಸ್‌ ಸದಸ್ಯ ರಹಮತ್‌ ಉಲ್ಲಾ ಅಸಾದಿ ಬೇಸರ ವ್ಯಕ್ತಪಡಿಸಿದರು. ಇದೇ ವಿಚಾರದಲ್ಲಿ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಈ ಬಗ್ಗೆ ಸಮಜಾಯಿಷಿ ನೀಡಿದ ಉಪಾಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ, ಉದ್ಘಾಟನಾ ಕಾರ್ಯಕ್ರಮ ತುರ್ತಾಗಿ ಆಗಬೇಕಿದ್ದ ಕಾರಣ ಸ್ವಲ್ಪಮಟ್ಟಿನ ದೋಷ ಕಂಡುಬಂದಿದೆ. ಆದರೆ ಇದರಲ್ಲಿ ದುರುದ್ದೇಶವೂ ಇಲ್ಲ ಎಂದರು.

ನಾನು RSS ಕೈ ಗೊಂಬೇನೂ ಅಲ್ಲ ಕಾಲು ಗೊಂಬೇನೂ ಅಲ್ಲ: ಆರಗ ಜ್ಞಾನೇಂದ್ರ

.4.09 ಕೋಟಿ ವೆಚ್ಚದ ನೂತನ ಕಟ್ಟಡಕ್ಕೆ ಸರ್ಕಾರದಿಂದ .1.50 ಕೋಟಿ ಮಾತ್ರ ಬಂದಿದೆ. ಈವರೆಗೆ .3.93 ಕೋಟಿ ವಿತರಣೆ ಮಾಡಲಾಗಿದೆ. ಉಳಿದ ಹಣವನ್ನು ಪಪಂ ಅನುದಾನದಿಂದ ಬಳಸಿಕೊಳ್ಳಲಾಗಿದೆ ಎಂದು ಪ್ರಭಾರ ಸಿಒ ಆಗಿರುವ ಪಪಂ ಎಂಜಿನಿಯರ್‌ ಪ್ರಭಾಕರ್‌ ಸಭೆಗೆ ತಿಳಿಸಿದರು. ಪಪಂ ಉಪಾಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ, ಸದಸ್ಯರಾದ ಸಂದೇಶ್‌ ಜವಳಿ, ರಹಮತ್‌ಉಲ್ಲಾ ಅಸಾದಿ, ಸೊಪ್ಪುಗುಡ್ಡೆ ರಾಘವೇಂದ್ರ, ಶಬನಂ, ಮಂಜುನಾಥ ಶೆಟ್ಟಿ, ದಯಾನಂದ ಪೂಜಾರಿ ಮತ್ತು ಸದಸ್ಯರು ಇದ್ದರು.

Follow Us:
Download App:
  • android
  • ios