ನದಿಯಲ್ಲಿ ಕೊಚ್ಚಿ ಹೋಗ್ತಿದ್ದ ವಯೋವೃದ್ಧೆಯನ್ನು ಬಸ್ ಚಾಲಕ ಜೀವದ ಹಂಗು ತೊರೆದು ರಕ್ಷಿಸಲು ಮುಂದಾದರು.  ಆದರೆ ನೀರು‌ ಕುಡಿದು ಉಸಿರುಗಟ್ಟಿ ಮೃತಪಟ್ಟ ವಯೋವೃದ್ಧೆ ಮೃತಪಟ್ಟಿದ್ದಾರೆ. 

ಹಾವೇರಿ(ಜು.27): ಕುಮದ್ವತಿ ನದಿಯಲ್ಲಿ ಮುಳುಗಿ ವೃದ್ಧೆಯೊಬ್ಬರು ಸಾವನ್ನಪ್ಪಿದ ಘಟನೆ ಹಾವೇರಿ ‌ಜಿಲ್ಲೆ ರಟ್ಟಿಹಳ್ಳಿ ತಾಲೂಕು ಮಾಸೂರು -ತಿಪ್ಪಾಯಿಕೊಪ್ಪ ಸೇತುವೆ ಬಳಿ ಇಂದು(ಶನಿವಾರ) ನಡೆದಿದೆ. ನದಿಯಲ್ಲಿ ಕೊಚ್ಚಿ ಹೋಗ್ತಿದ್ದ ವಯೋವೃದ್ಧೆಯನ್ನು ಬಸ್ ಚಾಲಕ ಜೀವದ ಹಂಗು ತೊರೆದು ರಕ್ಷಿಸಲು ಮುಂದಾದರು. ಆದರೆ ನೀರು‌ ಕುಡಿದು ಉಸಿರುಗಟ್ಟಿ ಮೃತಪಟ್ಟ ವಯೋವೃದ್ಧೆ ಮೃತಪಟ್ಟಿದ್ದಾರೆ. 

ನೀರಲ್ಲಿ ಕೊಚ್ಚಿ ಹೋಗ್ತಿದ್ದ ವೃದ್ಧೆಯನ್ನ ನೋಡಿದ ಕೆಎಸ್‌ಆರ್‌ಟಿಸಿ ಬಸ್ ಚಾಲಕ ರಕ್ಷಿಸಲು ನೀರಿಗೆ ಹಾರಿದ್ದರು. ವಯೋವೃದ್ಧೆಯನ್ನ ರಕ್ಷಿಸಿ ದಡಕ್ಕೆ ತರುವಷ್ಟರಲ್ಲಿ ವೃದ್ಧೆಯ ಜೀವ ಹಾರಿ ಹೋಗಿತ್ತು. ಪ್ರಾಣದ ಹಂಗು ತೊರೆದು ನದಿಗೆ ಹಾರಿದ್ದ ಬಸ್ ಚಾಲಕ ಮಜೀದ್ ಗೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

ಧಾರವಾಡ: ನಿರಂತರ ಮಳೆಗೆ ಜೋಪಡಿ ಮೇಲೆ ಗೋಡೆ ಕುಸಿತ, ಮೂವರಿಗೆ ಗಂಭೀರ ಗಾಯ

ಮೃತಪಟ್ಟ ವಯೋವೃದ್ದೆ ಹಿನ್ನಲೆ ಇನ್ನೂ ತಿಳಿದು ಬರಬೇಕಿದೆ. ನದಿಯಲ್ಲಿ ವೃದ್ಧೆ ಕಾಲು‌ಜಾರಿ ಬಿದ್ದಿರೋ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ರಟ್ಟಿಹಳ್ಳಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.