ಚುಕುಬುಕು ರೈಲಿನಲ್ಲೇ ಕುಳಿತು ಪಾಠ ಕೇಳಲಿದ್ದಾರೆ ಸರ್ಕಾರಿ ಶಾಲೆ ಮಕ್ಕಳು..!

ಸರ್ಕಾರಿ ಶಾಲೆ ಮಕ್ಕಳು ಚುಕುಬುಕು ಚುಕುಬುಕು ರೈಲು ಬಂತು ಎಂದು ಹಾಡುವುದರ ಜೊತೆ, ರೈಲಿನೊಳಗೇ ಕುಳಿತು ಪಾಠ ಕೇಳಿದ್ದಾರೆ. ಸುಣ್ಣ ಬಣ್ಣ ಹಚ್ಚಿರೋ ರೈಲು ಬೋಗಿ ಶಾಲಾ ಕೊಠಡಿಯೊಳಗೆ ಕುಳಿತು ಪಾಠ ಕೇಳಲು ಚಿಣ್ಣರು ರೆಡಿಯಾಗಿದ್ದಾರೆ.

Old train coach  Transformed as govt school rooms in mysore

ಮೈಸೂರು(ಜ.14): ಕೇರಳದಲ್ಲಿ ಸರ್ಕಾರಿ ಶಾಲೆಗೆ ರೈಲಿನ ಸುಣ್ಣ ಬಣ್ಣ ಬಳಿದು, ಮಿನಿ ರೈಲನ್ನೇ ನಿರ್ಮಿಸಿದಂತೆ ಶಾಲಾ ಕೊಠಡಿಗಳನ್ನು ಸಿದ್ಧಪಡಿಸಿ ಮಕ್ಕಳು ಶಾಲೆಯತ್ತ ಸೆಳೆದಿದ್ದು ಬಹಳ ಹಳೆಯ ಸುದ್ದಿ. ಇದೀಗ ಮೈಸೂರಿನಲ್ಲಿಯೂ ಇಂತಹದೇ ಒಂದು ಕೆಲಸ ನಡೆಯುತ್ತಿದೆ.

ಸರ್ಕಾರಿ ಶಾಲೆ ಮಕ್ಕಳು ಚುಕುಬುಕು ಚುಕುಬುಕು ರೈಲು ಬಂತು ಎಂದು ಹಾಡುವುದರ ಜೊತೆ, ರೈಲಿನೊಳಗೇ ಕುಳಿತು ಪಾಠ ಕೇಳಿದ್ದಾರೆ. ಸುಣ್ಣ ಬಣ್ಣ ಹಚ್ಚಿರೋ ರೈಲು ಬೋಗಿ ಶಾಲಾ ಕೊಠಡಿಯೊಳಗೆ ಕುಳಿತು ಪಾಠ ಕೇಳಲು ಚಿಣ್ಣರು ರೆಡಿಯಾಗಿದ್ದಾರೆ.

ಶಾಲೆಗೆ ಬಂದು ನಿದ್ದೆ ಮಾಡೋದೇ ಈ ಶಿಕ್ಷಕನ ಕಾಯಕ..!

ಟ್ರೈನು ಸ್ಕೂಲಿಗೆ ಬಂದಿದೆ. ಶಿಥಿಲಗೊಂಡಿದ್ದ ಶಾಲೆಗೆ ಕೊಠಡಿಗಳಾಗಿವೆ. ಕೊಠಡಿಯಲ್ಲಿ ಲೈಟ್‌, ಫ್ಯಾನ್, ಕಿಟಕಿ ಎಲ್ಲವೂ ಇದೆ. ಬಡ ವಿದ್ಯಾರ್ಥಿಗಳಿಗೆ ನೆರಳಾಗಿವೆ. ಗುಜುರಿ ಸೇರಬೇಕಿದ್ದ ರೈಲ್ವೆ ಬೋಗಿಗಳು ಸುಸಜ್ಜಿತ ಶಾಲಾ ಕೊಠಡಿಗಳಾದ ಅಪರೂಪದ ಘಟನೆಎ ಮೈಸೂರಿನಲ್ಲಿ ನಡೆದಿದೆ.

"

ಮೈಸೂರಿನ ರೈಲ್ವೆ ಕಾರ್ಯಾಗಾರ ಆವರಣದ ಸರ್ಕಾರಿ ಶಾಲೆಯಲ್ಲಿ ಇಂತಹದ್ದೊಂದು ವಿನೂತನ ಪ್ರಯತ್ನ ಮಾಡಲಾಗಿದೆ. ರೈಲ್ವೆ ಇಲಾಖೆಯ ಆಸಕ್ತಿಯಿಂದಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ರೈಲು ಶಾಲೆ ಆರಂಭವಾಗಿದೆ. ದುಸ್ಥಿತಿಯಲ್ಲಿದ್ದ ಎರಡು ರೈಲ್ವೆ ಬೋಗಿಗಳನ್ನು ಕ್ರೇನ್ ಮೂಲಕ ಶಾಲೆಗೆ ತರಿಸಲಾಗಿದೆ.

ಅಲೆಮಾರಿ ಮಕ್ಕಳಿಗೆ ಟೆಂಟ್‌ ಸ್ಕೂಲ್‌!

ನಂತರ ಕೋಚ್‌ಗಳನ್ನು ಸಂಪೂರ್ಣ ನವೀಕರಿಸಿ, ಆಕರ್ಷಕ ವರ್ಣಾಲಂಕಾರ ಮಾಡಲಾಗಿದೆ. ವಿದ್ಯಾರ್ಥಿಗಳನ್ನು ಆಕರ್ಷಿಸಲು ಚಿತ್ರ ಹಾಗೂ ಮಾಹಿತಿಗಳನ್ನು ಬಿಡಿಸಲಾಗಿದೆ. ಪ್ರಯಾಣಿಕರು ಕೂರುತ್ತಿದ್ದ ಸೀಟ್​ಗಳನ್ನು ತೆಗೆದು, ಮಕ್ಕಳಿಗೆ ಪೀಠೋಪಕರಣ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ಕೆಲವೇ ದಿನಗಳಲ್ಲಿ ರೈಲ್ವೆ ಕಾರ್ಯಾಗಾರ ಸರ್ಕಾರಿ ಪ್ರಾಥಮಿಕ ಶಾಲೆಯ ತರಗತಿಗಳು ರೈಲ್ವೆ ಕ್ಲಾಸ್​ ರೂಂನಲ್ಲೂ ಆರಂಭವಾಗಲಿವೆ.

Latest Videos
Follow Us:
Download App:
  • android
  • ios