Asianet Suvarna News Asianet Suvarna News

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ವೃದ್ಧನ ಬಂಧನ

ತಾಲೂಕಿನ ಗೆಜ್ಜಲಗೆರೆ ಗ್ರಾಮದಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ವೃದ್ಧನನ್ನು ಮದ್ದೂರು ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ ಶಿವಪುರ ನಿವಾಸಿ ರಾಜ (63) ಬಂಧಿತ ಆರೋಪಿ.

Old man arrested for sexually assaulting girl snr
Author
First Published Sep 20, 2023, 9:31 AM IST

ಮದ್ದೂರು: ತಾಲೂಕಿನ ಗೆಜ್ಜಲಗೆರೆ ಗ್ರಾಮದಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ವೃದ್ಧನನ್ನು ಮದ್ದೂರು ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ ಶಿವಪುರ ನಿವಾಸಿ ರಾಜ (63) ಬಂಧಿತ ಆರೋಪಿ.

ಗೆಜ್ಜಲಗೆರೆ ಗ್ರಾಮದ ಸಂಬಂಧಿಕರ ಮನೆಗೆ ಸೀಮಂತ ಕಾರ್ಯಕ್ರಮಕ್ಕೆ ಬಂದಿದ್ದ 8 ವರ್ಷದ ಬಾಲಕಿಯನ್ನು ರಾಜ ಪುಸಲಾಯಿಸಿ ಗ್ರಾಮದ ಹತ್ತಿರದ ಕಬ್ಬಿನ ಗದ್ದೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ್ದನು. ಬಾಲಕಿಯ ಪೋಷಕರು ನೀಡಿದ ದೂರಿನನ್ವಯ ಪೊಲೀಸರು ಆರೋಪಿ ರಾಜನ ವಿರುದ್ಧ ಫೋಕ್ಸೋ ಪ್ರಕರಣ ದಾಖಲು ಮಾಡಿಕೊಂಡ ನಂತರ ಮಂಡ್ಯ ಸೆಷನ್ ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬಾಲಕಿ ಮೇಲೆ ವೃದ್ಧನ ಲೈಂಗಿಕ ದೌರ್ಜನ್ಯ

ಹಾಸನ (ಸೆ.17): ದೇಶದಲ್ಲಿ ಅಪ್ರಾಪ್ತ ಬಾಲಕಿ ಹಾಗೂ ಯುವತಿಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೊರಬಂದು ಕಠಿಣ ಶಿಕ್ಷೆ ಆಗುತ್ತಿದ್ದರೂ ಕಾಮುಕರು ಮಾತ್ರ ತಮ್ಮ ಕಳ್ಳಾಟ ಉಂದುವರೆಸುತ್ತಲೇ ಇದ್ದಾರೆ. ಹಾಸನ ಜಿಲ್ಲೆಯಲ್ಲೊಬ್ಬ ವೃದ್ಧ ಊರು ಹೋಗು, ಕಾಡು ಬಾ ಎನ್ನುವ ವಯಸ್ಸಿನಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾರೆ. ಇದರಿಂದ ಬಾಲಕಿ ಎರಡು ತಿಂಗಳ ಗರ್ಭಿಣಿಯಾಗಿದ್ದು, ವಿಚಾರ ಬೆಳಕಿಗೆ ಬಂದ ನಂತರ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಹಾಸನ ಜಿಲ್ಲೆಯಲ್ಲೊಂದು ಪೈಶಾಚಿಕ ಕೃತ್ಯ ನಡೆದಿದೆ. ಅಪ್ರಾಪ್ತ ಬಾಲಕಿ ಮೇಲೆ ವೃದ್ಧನಿಂದ ಅತ್ಯಾಚಾರ ಮಾಡಲಾಗಿದೆ. ಇನ್ನು ನಿರಂತರ ಅತ್ಯಾಚಾರದಿಂದ ಅಪ್ರಾಪ್ತ 13 ವರ್ಷದ ಬಾಲಕಿ ತನಗೆ ಅರಿವಿಲ್ಲದೇ 2 ತಿಂಗಳ ಗರ್ಭಿಣಿಯಾಗಿದ್ದಾಳೆ. ಇನ್ನು ತಾಯಿಗೆ ಈ ಬಗ್ಗೆ ಅನುಮಾನ ಬಂದು ವಿಚಾರಣೆ ಮಾಡಿದಾಗ ವೃದ್ಧ ಅತ್ಯಾಚಾರ ಮಾಡಿರುವ ವಿಚಾರವನ್ನು ಬಾಯಿ ಬಿಟ್ಟಿದ್ದಾಳೆ. ಇನ್ನು ಗ್ರಾಮದ ಮಹಿಳೆಯರಿಗೆ ವಿಧವಾ ವೇತನ ಹಾಗೂ ವೃದ್ಧಾಪ್ಯ ವೇತನ ಕೊಡಿಸುವುದಾಗಿ ಹಾಗೂ ತಾನು ಸಾಮಾಜಿಕ ಕಾರ್ಯಕರ್ತ ಎಂದು ಬಿಂಬಿಸಿಕೊಂಡು ಮಹಿಳೆಯರ ಮನೆಗೆ ಹೋಗುತ್ತಿದ್ದ ವೃದ್ಧ ಈಗ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಬೆಂಗಳೂರಲ್ಲಿ ನೇಪಾಳದ ಕುಟುಂಬ ದುರಂತ ಅಂತ್ಯ: ರಾತ್ರಿ ಊಟ ಮಾಡಿ ಮಲಗಿದವರು ಮೇಲೇಳಲಿಲ್ಲ

ಈ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿ ನಡೆದಿದೆ. ಅತ್ಯಾಚಾರ ಮಾಡಿದ ವೃದ್ಧ ಆರೋಪಿಯನ್ನು ಮೀಸೆ ಮಂಜಯ್ಯ (73) ಎಂದು ಗುರುತಿಸಲಾಗಿದೆ. ಈತ ತಾನು ಸಾಮಾಜಿಕ ಕಾರ್ಯಕರ್ತನೆಂದು ಬಿಂಬಿಸಿಕೊಂಡು ಹೇಯ ಕೃತ್ಯ ಎಸಗಿದ್ದಾನೆ. ಗ್ರಾಮದಲ್ಲಿ ವಿಧವಾವೇತನ, ಪಿಂಚಣಿ ಹಣ ಕೊಡಿಸುವುದಾಗಿ ಮಹಿಳೆಯರ ನಂಬಿಸಿದ್ದ ಆರೋಪಿ, ಮಹಿಳೆಯರು ಒಬ್ಬಂಟಿಯಾಗಿರುವಾಗ ಮನೆಗೆ ಹೋಗುತ್ತಿದ್ದನು. ಇನ್ನು ಅಪ್ರಾಪ್ತ ಮಗಳಿಗಾದ ಅನ್ಯಾಯದಿಂದ ಮನನೊಂದು ತಾಯಿ ವಿಷ ಸೇವಿಸಿದ್ದಾಳೆ. ಈಗ ತಾಯಿ ಹಾಸನದ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ‌‌ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಘಟನೆ ಕುರಿತಂತೆ ಆರೋಪಿ ಮೀಸೆ ಮಂಜಯ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಈ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಮದುವೆಯಾಗುವುದಾಗಿ ದೈಹಿಕ ಸಂಪರ್ಕ ಬೆಳೆಸಿ ಕೈಕೊಟ್ಟ ಪೊಲೀಸ್‌ ಪೇದೆ:  ಬೆಂಗಳೂರು ಗೋವಿಂದಪುರ ಪೊಲೀಸ್‌ ಠಾಣೆಯಲ್ಲಿ ಪೇದೆಯಾಗಿರುವ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಗ್ರಾಮದ ಆನಂದ ಪಾಟೀಲ ವಿರುದ್ಧ ನಂಬಿಕೆ ದ್ರೋಹ ಹಾಗೂ ವಂಚನೆ ಮಾಡಿದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯದ ನಿಮಿತ್ತವಾಗಿ ಮಹಿಳಾ ಪೇದೆಯೊಂದಿಗೆ ಕರೆ ಮಾಡಿ ಮಾತನಾಡಿದ್ದಾನೆ. ನಂತರದ ದಿನಗಳಲ್ಲಿ ಇವರಿಬ್ಬರ ನಡುವೆ ವಾಟ್ಸಾಪ್‌ ಮೆಸೇಜ್‌, ವಿಡಿಯೋ ಕಾಲ್ ಮೂಲಕ ಸಲುಗೆ ಆರಂಭವಾಗಿದೆ. ಬಳಿಕ ಆನಂದ ಪಾಟೀಲ ಮಹಿಳಾ ಪೇದೆಯೊಂದಿಗೆ ಮಾತನಾಡಿ ನಿನ್ನನ್ನು ಪ್ರೀತಿಸುವುದಾಗಿ ತಿಳಿಸಿದ್ದಾನೆ. 

ಭಾರತದ ಹೈ ಪ್ರೊಫೈಲ್‌ ಹನಿಟ್ರ್ಯಾಪ್‌ ರಾಣಿ ಆರತಿ ದಯಾಳ್‌ ಬೆಂಗಳೂರಿನಲ್ಲಿ ಅರೆಸ್ಟ್‌

ಮದುವೆಯಾಗು ಎಂದು ಕೇಳಿದರೆ ಉಲ್ಟಾ ಹೊಡೆದ: ಪೇದೆಯ ಬಣ್ಣದ ಮಾತಿಗೆ ಮರುಳಾದ ಮಹಿಳಾ ಪೇದೆ ಈತನೊಂದಿಗೆ ಎಲ್ಲೆಂದರಲ್ಲಿ ಸುತ್ತಾಡಿದ್ದಾಳೆ. ಮದುವೆಯಾಗುವುದಾಗಿ ದೈಹಿಕ ಸಂಪರ್ಕವನ್ನು ಬೆಳೆಸಿದ್ದಾನೆ. ನಂತರ ಮಹಿಳಾ ಪೇದೆ ಮದುವೆ ವಿಷಯವನ್ನು ಪ್ರಸ್ತಾಪಿಸಿದಾಗ ನಾನು ಕೇವಲ ಸ್ನೇಹಿತ ಎಂದು ಭಾವಿಸಿದ್ದೇನೆ. ಪ್ರೀತಿಸುವುದಾಗಿ ಹೇಳಿಲ್ಲ ಎಂದು ಫೊನ್‌ನಲ್ಲಿ ತಿಳಿಸಿದ್ದಾನೆ. ಇದರಿಂದಾಗಿ ಮನನೊಂದ ಮಹಿಳಾ ಪೇದೆ ಪೊಲೀಸ್‌ ಪೇದೆ ಆನಂದ ಪಾಟೀಲ ವಿರುದ್ಧ ಬೆಳಗಾವಿ ನಗರದ ಜೀವನ ಬಿಮಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

Follow Us:
Download App:
  • android
  • ios